ಕಲಬುರಗಿಯ ಭ್ರಷ್ಟ ಅಧಿಕಾರಿ ಮನೆಯ ಪೈಪ್​​ನಲ್ಲಿಯೂ ಕಂತೆ ಕಂತೆ ಹಣ ಪತ್ತೆ! ಪ್ಲಂಬರ್ ಮೊರೆ ಹೋದ ಎಸಿಬಿ ಅಧಿಕಾರಿಗಳು

BDA ಮೇಲೆ ಇತ್ತೀಚೆಗೆ ನಡೆದ ಎಸಿಬಿ ದಾಳಿ ಟ್ರೈಲರ್​ ಆಗಿದ್ದು, ಅದೇ ನೆಪದಲ್ಲಿ ಈಗ ಮೆಗಾ ಶಾಕ್ ಕೊಟ್ಟಿದೆ ಎಸಿಬಿ. ಎಸಿಬಿ ತನ್ನ ದಾಳಿಯ ಮಾಹಿತಿಯನ್ನು ಅತ್ಯಂತ ಕರಾರುಕ್ಕಾಗಿ, ಗೌಪ್ಯವಾಗಿ ಇಟ್ಟಿತ್ತು. ಬಿಡಿಎ ಸಂಸ್ಥೆಯಲ್ಲಿ ಇರುವ ದಾಳಿ ಕೆಲಸ ಮಾಡಿದರೆ ಸಾಕು ಅನ್ನೊ ರೀತಿ ಎಸಿಬಿ ತನ್ನ ದಾಳಿಯನ್ನು ಬಿಂಬಿಸಿತ್ತು. ಭ್ರಷ್ಟ ಕುಳಗಳು ಸಹ ಇದಕ್ಕೆ ಸುಲಭದ ತುತ್ತಾಗಿ ಬಿಡಿಎ ನೆಪದಲ್ಲಿ ಮೈಮರೆತಿದ್ದಾಗಲೇ ಎಸಿಬಿ ಮೆಗಾ ಪ್ಲಾನ್ ನಡೆದುಹೋಗಿದೆ!

ಕಲಬುರಗಿಯ ಭ್ರಷ್ಟ ಅಧಿಕಾರಿ ಮನೆಯ ಪೈಪ್​​ನಲ್ಲಿಯೂ ಕಂತೆ ಕಂತೆ ಹಣ ಪತ್ತೆ! ಪ್ಲಂಬರ್ ಮೊರೆ ಹೋದ ಎಸಿಬಿ ಅಧಿಕಾರಿಗಳು
ಎಸಿಬಿ ದಾಳಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 24, 2021 | 1:34 PM

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ -ಎಸಿಬಿ (Anti Corruption Bureau) ವ್ಯವಸ್ಥಿತವಾಗಿ ತಂಡೋಪಾದಿಯಲ್ಲಿ ಭ್ರಷ್ಟರ ಜನ್ಮ ಜಾಲಾಡುತ್ತಿದ್ದಾರೆ. ಭ್ರಷ್ಟರ ಮನೆ ಮನೆಗೆ ಭೇಟಿ ಕೊಟ್ಟು ಇಂಚಿಂಚೂ ಜಾಲಾಡುತ್ತಿದ್ದಾರೆ. ಕೆಜಿ ಕೆಜಿ ಗಟ್ಟಲೆ ಚಿನ್ನಾಭರಣ, ಎಕರೆಗಟ್ಟಲೆ ಜಮೀನು ಪತ್ರಗಳು, ಇನ್ನಿತರೆ ಬಹುಮೂಲ್ಯ ದಾಖಲೆ ಪತ್ರಗಳನ್ನು ಎಸಿಬಿ ಅಧಿಕಾರಿಗಳು ಗುಡ್ಡೆ ಹಾಕುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ನಡೆಸುತ್ತಿರುವ ದಾಳಿ ಪ್ರಕ್ರಿಯೆ ನೋಡಿದರೆ ಇದುವರೆಗೆ ನಡೆದಿರುವ ದಾಳಿ ಕೇವಲ ಟ್ರೈಲರ್ ಅಷ್ಟೇ. ಇನ್ನೂ ಮುಂದೆ ಬೇರೆಯದ್ದೇ ಮಾದರಿಯಲ್ಲಿ ದಾಳಿ ನಡೆಸುವ ಲಕ್ಷಣಗಳಿವೆ. ಅಂದ್ರೆ ಭ್ರಷ್ಟರ ಮನೆಗೆ ಎಂಟ್ರಿ ಕೊಟ್ಟಾಗ ಎಸಿಬಿ ಅಧಿಕಾರಿಗಳಿಂದ ಬೇರೆ ಮಾದರಿಯ ಅಪ್ರೋಚ್ ನಡೆದಿದೆ.

ನಾವು ಎಲ್ಲಾ ಮಾಹಿತಿಯನ್ನು ಪಡೆದುಕೊಂಡೇ ಬಂದಿದ್ದೆವೆ. ನಾವೇ ಸರ್ಚ್ ಮಾಡುವುದಕ್ಕೆ ಇಳಿಯುವ ಮೊದಲು ನೀವಾಗಿಯೇ ಎಲ್ಲಿ ಎಲ್ಲಿ ಏನೇನು ಇದೆ ತಂದು ಕೊಡಿ ಎಂದಿದ್ದಾರೆ. ಇದುವರೆಗೆ ಸಿಕ್ಕಿರೋದು ಭ್ರಷ್ಟ ಅಧಿಕಾರಿಗಳು ತಾವಾಗಿಯೇ ನೀಡಿರೋ ಮಾಹಿತಿಯಷ್ಟೆ. ಇನ್ನು ಮುಂದೆ ಎಸಿಬಿ ಅಸಲಿ ಸರ್ಚ್ ಆಪರೇಶನ್ ನಡೆಯಲಿದೆ. 68 ಜಾಗದಲ್ಲಿ ಎಸಿಬಿ ದಾಳಿ ನಡೆಸಿತ್ತು. ಈಗ ಹೆಚ್ಚುವರಿಯಾಗಿ, ಇನ್ನೂ ಸುಮಾರು 15 ಸ್ಥಳಗಳು ಸೇರ್ಪಡೆಗೊಂಡಿವೆ. ಇನ್ನು, ಮುಂದೆ ಎಸಿಬಿ ಅಧಿಕಾರಿಗಳು ಸರ್ಚ್ ಮಾಡಲಿದ್ದಾರೆ. ಬ್ಯಾಂಕ್ ಲಾಕರ್​ಗಳನ್ನು ತೆರೆಯೋದು ಇನ್ನೂ ಬಾಕಿ ಇದೆ. ಎಸಿಬಿ ದಾಳಿಗೆ ಒಳಗಾದ ಬಹುತೇಕ ಎಲ್ಲ ಭ್ರಷ್ಟರೂ ಬ್ಯಾಂಕ್ ಲಾಕರ್ ಹೊಂದಿದ್ದಾರೆ.

ಪೈಪ್ ನಲ್ಲಿಯೇ ಐದು ಲಕ್ಷ ಕ್ಕೂ ಅಧಿಕ ಹಣ ಪತ್ತೆ ಇಂದು ಬೆಳಗ್ಗೆ ನಡೆದಿರುವ ಎಸಿಬಿ ದಾಳಿ ವೇಳೆ ಪತ್ತೆಯಾದ ಭ್ರಷ್ಟ ಹಣದ ಒಂದು ಸ್ಯಾಂಪಲ್ ಹೀಗಿದೆ: ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್ ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ! ಎಸಿಬಿ ಅಧಿಕಾರಿಗಳು ಬರ್ತಾಯಿದ್ದಂತೆ ಭ್ರಷ್ಟ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್ ನಲ್ಲಿ ಹಣ ಹಾಕಿದ್ದರು. ಇದೀಗ ಪ್ಲಂಬರ್​ನನ್ನು ಕರೆಸಿ, ಪೈಪ್ ಕಟ್ ಮಾಡಿಸಿ, ಕಂತೆ ಕಂತೆ ಹಣ ಹೊರಕ್ಕೆ ತೆಗೆಯುತ್ತಿದ್ದಾರೆ.

ಮನೆಯ ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್ ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಮತ್ತು ಆತನ ಪುತ್ರ ವಾಸವಿರುವ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿ ಮನೆಯ ಪೈಪ್ ನಲ್ಲಿ ಹಣ ಈ ರೂಪದಲ್ಲಿ ಪತ್ತೆಯಾಗಿದೆ. ಮನೆಯ ಎರಡನೇ ಪ್ಲೋರ್ ನಲ್ಲಿ ವಾಸವಾಗಿರೋ ಶಾಂತಗೌಡ ಅಧಿಕಾರಿಗಳು ಬರ್ತಾಯಿದ್ದಂತೆ ಹಣದ ಕಂತೆಯನ್ನು ಪೈಪ್ ನಲ್ಲಿ ಹಾಕಿದ್ದಾರೆ.

ಇದರ ಹೊರತಾಗಿ, ಆಯಾ ಮನೆಗಳ ಪರಿಶೀಲನೆ ನಂತರ ಬ್ಯಾಂಕ್​ ಶಾಖೆಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲು ಎಸಿಬಿ ತಿರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆಗಳು, ಚಿನ್ನ ಹಾಗೂ ಸಂಪತ್ತು ಪತ್ತೆಯಾಗುವ ಸಾಧ್ಯೆತೆಯಿದೆ ಎಂದು ಟಿವಿ 9ಗೆ ಎಸಿಬಿ ಉನ್ನತ ಮೂಲಗಳು ದಾಳಿ ಬಗ್ಗೆ ಮಾಹಿತಿ ನೀಡಿವೆ.

BDA ಮೇಲೆ ಇತ್ತೀಚೆಗೆ ನಡೆದ ಎಸಿಬಿ ದಾಳಿ ಟ್ರೈಲರ್​ ಆಗಿದ್ದು, ಅದೇ ನೆಪದಲ್ಲಿ ಈಗ ಮೆಗಾ ಶಾಕ್ ಕೊಟ್ಟಿದೆ ಎಸಿಬಿ. ಎಸಿಬಿ ತನ್ನ ದಾಳಿಯ ಮಾಹಿತಿಯನ್ನು ಅತ್ಯಂತ ಕರಾರುಕ್ಕಾಗಿ, ಗೌಪ್ಯವಾಗಿ ಇಟ್ಟಿತ್ತು. ಬಿಡಿಎ ಸಂಸ್ಥೆಯಲ್ಲಿ ಇರುವ ದಾಳಿ ಕೆಲಸ ಮಾಡಿದರೆ ಸಾಕು ಅನ್ನೊ ರೀತಿ ಎಸಿಬಿ ತನ್ನ ದಾಳಿಯನ್ನು ಬಿಂಬಿಸಿತ್ತು. ಭ್ರಷ್ಟ ಕುಳಗಳು ಸಹ ಇದಕ್ಕೆ ಸುಲಭದ ತುತ್ತಾಗಿ ಬಿಡಿಎ ನೆಪದಲ್ಲಿ ಮೈಮರೆತಿದ್ದಾಗಲೇ ಎಸಿಬಿ ಮೆಗಾ ಪ್ಲಾನ್ ನಡೆದುಹೋಗಿದೆ! ಎಲ್ಲರು ಬಿಡಿಎ, ಬಿಡಿಎ ಎಂದುಕೊಂಡಿರುವಾಗಲೇ ನಾವು ಮತ್ತೊಂದು ವ್ಯಾಪಕ ದಾಳಿಗೆ ಇಳಿದೆವು ಎಂದು ಎಸಿಬಿ ಮೂಲಗಳು ತಿಳಿಸಿವೆ.

ACB Raid: ಪಿಡಬ್ಲ್ಯುಡಿ ಜೆಇ ಶಾಂತಗೌಡ ಮನೆಯ ಪೈಪ್​ನಲ್ಲಿ ಕಂತೆ ಕಂತೆ ಹಣ | Tv9 Kannada

Also Read: ACB Raids: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ: ಬೆಂಗಳೂರು ಸೇರಿದಂತೆ ಕರ್ನಾಟಕದ 60 ಕಡೆ ಎಸಿಬಿ ದಾಳಿ

Also Read: ಬೆಳಗಾವಿ ವೈಭವನಗರದ ‘ಲಂಚ ವೈಭವ’ ಮನೆ ಮೇಲೆ ಎಸಿಬಿ ದಾಳಿ; ಡಾಲರ್‌ ನೋಟುಗಳು ಪತ್ತೆ- ಇದು ಗ್ರೂಪ್ ಸಿ ನೌಕರನ ಮನೆ

Published On - 1:01 pm, Wed, 24 November 21

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ