AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ವಿಳಂಬದಿಂದ ಪಿಡಬ್ಲ್ಯುಡಿ ಕೆಪಿಎಸ್‌ಸಿ ಪರೀಕ್ಷೆ ಮಿಸ್​ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗಾಗಿ ಡಿ. 29ಕ್ಕೆ ಮರು ಪರೀಕ್ಷೆ ನಿಗದಿ

ಕೆಪಿಎಸ್‌ಸಿ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿ ಪಡಿಸಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 29ರಂದು ಪರೀಕ್ಷೆ ನಡೆಯಲಿದ್ದು ಡಿ.22ರೊಳಗೆ ರೈಲು ಟಿಕೆಟ್ ಸಮೇತ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿದೆ.

ರೈಲು ವಿಳಂಬದಿಂದ ಪಿಡಬ್ಲ್ಯುಡಿ ಕೆಪಿಎಸ್‌ಸಿ ಪರೀಕ್ಷೆ ಮಿಸ್​ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗಾಗಿ ಡಿ. 29ಕ್ಕೆ ಮರು ಪರೀಕ್ಷೆ ನಿಗದಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 16, 2021 | 9:08 AM

Share

ಕಲಬುರಗಿ: ರೈಲು ವಿಳಂಬದಿಂದ ಪಿಡಬ್ಲ್ಯುಡಿ ಇಲಾಖೆ ಪರೀಕ್ಷೆಗೆ ಕೆಲ ಪರೀಕ್ಷಾರ್ಥಿಗಳು ಗೈರಾದ ಹಿನ್ನೆಲೆಯಲ್ಲಿ ಗೈರಾದ ಪರೀಕ್ಷಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕೆಪಿಎಸ್‌ಸಿ ಡಿಸೆಂಬರ್ 29ಕ್ಕೆ (ಬುಧವಾರ) ಮರು ಪರೀಕ್ಷೆ ನಿಗದಿ ಪಡಿಸಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 29ರಂದು ಪರೀಕ್ಷೆ ನಡೆಯಲಿದ್ದು ಡಿಸೆಂಬರ್ 22ರೊಳಗೆ ರೈಲು ಟಿಕೆಟ್ ಸಮೇತ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿದೆ.

ಡಿಸೆಂಬರ್ 14 ರಂದು ಪಿಡಬ್ಲೂಡಿ ಸಹಾಯಕ ಅಭಿಯಂತರ ಹುದ್ದೆಗಳಿಗೆ ಸ್ಪರ್ದಾತ್ಮಕ ಪರೀಕ್ಷೆ ಕಲಬುರಗಿ ಕೇಂದ್ರದಲ್ಲಿ ನಡೆದಿತ್ತು. ರೈಲು ವಿಳಂಬದಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಸಾಮಾನ್ಯ ಪತ್ರಿಕೆ ಪರೀಕ್ಷೆಗೆ ಹಾಜರಾಗಲಿಕ್ಕಾಗದೇ ಅಭ್ಯರ್ಥಿಗಳು ಪರದಾಡಿದ್ದರು. ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲುಗಳು ಬಂದವು. ರೈಲ್ವೆ ಹಳಿ ಮೇಲೆಯೇ ಕುಳಿತು ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಸದ್ಯ ಈಗ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿ ಪಡಿಸಲಾಗಿದೆ.

ರೈಲು ಹಳಿ ಕೆಲಸ ದುರಸ್ಥಿ, ರೈಲುಗಳು ವಿಳಂಬ ಬೆಂಗಳೂರಿನ ಯಲಹಂಕ ಬಳಿ ರೈಲು ಹಳಿ ದುರಸ್ಥಿ ಕಾರ್ಯ ಇದ್ದಿದ್ದರಿಂದ ಯಲಹಂಕ ಬಳಿ ಎರಡು ಗಂಟೆ ರೈಲು ನಿಂತಲ್ಲಿಯೇ ನಿಂತಿತ್ತು. ಯಲಹಂಕ ದಾಟಿದ ಮೇಲೆ ಕೂಡ ಅನೇಕ ಕಡೆ ರೈಲು ನಿಂತಿದ್ದರಿಂದ, ನಿಗದಿತ ಸಮಯಕ್ಕಿಂತ ಐದು ಗಂಟೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ. ರೈಲುಗಳು ನಿಗದಿತ ಸಮಯಕ್ಕೆ ತಲಪುತ್ತವೆ ಎಂದು ವಿದ್ಯಾರ್ಥಿಗಳು, ಬೆಂಗಳೂರು, ಮೈಸೂರು, ಹಾಸನದಿಂದ ಸಾವಿರಾರು ಅಭ್ಯರ್ಥಿಗಳು, ರೈಲಿನಲ್ಲಿ ಕಲಬುರಗಿಗೆ ಹೊರಟಿದ್ದರು. ಆದರೆ ರೈಲ್ವೆ ಹಳಿ ದುರಸ್ಥಿ ಕಾರ್ಯದಿಂದ ರೈಲುಗಳು ವಿಳಂಬವಾಗಿದ್ದರಿಂದ ಪರೀಕ್ಷೆಗೆ ಹಾಜರಾಗದೇ ವಿದ್ಯಾರ್ಥಿಗಳು ಪರದಾಡಿದ್ರು.

ಇದನ್ನೂ ಓದಿ: ಅಧಿವೇಶನದಲ್ಲಿ ಕಾಂಗ್ರೆಸ್ ಒತ್ತಾಯದ ಬೆನ್ನಲ್ಲೇ ಸಂಡೂರು ತಹಶಿಲ್ದಾರ್ ರಶ್ಮಿ ಬೆಂಗಳೂರಿಗೆ ಎತ್ತಂಗಡಿ

ಇಂದು ಕೆಪಿಎಸ್​ಸಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್​​ ಪರೀಕ್ಷೆ; ರೈಲು ವಿಳಂಬ ಹಿನ್ನೆಲೆ ಸಾವಿರಾರು ಅಭ್ಯರ್ಥಿಗಳ ಪರದಾಟ

Published On - 8:49 am, Thu, 16 December 21