ಇಂದು ಕೆಪಿಎಸ್ಸಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪರೀಕ್ಷೆ; ರೈಲು ವಿಳಂಬ ಹಿನ್ನೆಲೆ ಸಾವಿರಾರು ಅಭ್ಯರ್ಥಿಗಳ ಪರದಾಟ
ಮುಂಜಾನೆ ಆರು ಗಂಟೆಗೆ ಕಲಬುರಗಿಗೆ ಬರಬೇಕಿದ್ದ ರೈಲು ಇನ್ನು ಬಂದಿಲ್ಲ. ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲು ಬರುವ ಸಾಧ್ಯತೆ ಇದೆ. ಹೀಗಾಗಿ ಕಲಬುರಗಿಯಲ್ಲಿರುವ ಪರೀಕ್ಷೆ ಕೇಂದ್ರಕ್ಕೆ ಬರಲು ಸಾಧ್ಯವಾಗದೆ ಅಭ್ಯರ್ಥಿಗಳು ಪರದಾಟ ನಡೆಸಿದ್ದಾರೆ.
ಕಲಬುರಗಿ: ಕೆಪಿಎಸ್ಸಿಯಿಂದ (KPSC) ಇಂದು (ಡಿಸೆಂಬರ್ 14) ಲೋಕೋಪಯೋಗಿ ಇಲಾಖೆ ಪರೀಕ್ಷೆ ನಡೆಯುತ್ತಿದೆ. ಸಹಾಯಕ ಅಭಿಯಂತರ ಮತ್ತು ಕಿರಿಯ ಅಭಿಯಂತರ ಪರೀಕ್ಷೆ ನಡೆಯುತ್ತಿದೆ. ಆದರೆ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಸಿಗದೆ ಪರದಾಡುವಂತಾಗಿದೆ. ಹಾಸನ್ ಸೊಲ್ಲಾಪುರ ಎಕ್ಸ್ಪ್ರೇಸ್ ರೈಲು (Train) ವಿಳಂಬವಾಗಿದ್ದೆ ಈ ಎಲ್ಲಾ ಆತಂಕಕ್ಕೆ ಕಾರಣವಾಗಿದೆ.
ಮುಂಜಾನೆ ಆರು ಗಂಟೆಗೆ ಕಲಬುರಗಿಗೆ ಬರಬೇಕಿದ್ದ ರೈಲು ಇನ್ನು ಬಂದಿಲ್ಲ. ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲು ಬರುವ ಸಾಧ್ಯತೆ ಇದೆ. ಹೀಗಾಗಿ ಕಲಬುರಗಿಯಲ್ಲಿರುವ ಪರೀಕ್ಷೆ ಕೇಂದ್ರಕ್ಕೆ ಬರಲು ಸಾಧ್ಯವಾಗದೆ ಅಭ್ಯರ್ಥಿಗಳು ಪರದಾಟ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆಯ ಅನೇಕ ಕಡೆ ಪರೀಕ್ಷೆ ಕೇಂದ್ರಗಳು ಇವೆ. ಹಾಸನ, ಮೈಸೂರು ಸೇರಿದಂತೆ ದೂರದಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಬೇಕು ಇಲ್ಲವೇ ಪರೀಕ್ಷೆ ಸಮಯ ಮರು ನಿಗದಿ ಮಾಡಬೇಕು ಎಂದು ಪರೀಕ್ಷಾ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ರೈಲು ಹಳಿ ಕೆಲಸ ದುರಸ್ಥಿ, ರೈಲುಗಳು ವಿಳಂಬ ಬೆಂಗಳೂರಿನ ಯಲಹಂಕ ಬಳಿ ರೈಲು ಹಳಿ ದುರಸ್ಥಿ ಕಾರ್ಯ ಇದ್ದಿದ್ದರಿಂದ ಯಲಹಂಕ ಬಳಿ ಎರಡು ಗಂಟೆ ರೈಲು ನಿಂತಲ್ಲಿಯೇ ನಿಂತಿತ್ತು. ಯಲಹಂಕ ದಾಟಿದ ಮೇಲೆ ಕೂಡ ಅನೇಕ ಕಡೆ ರೈಲು ನಿಂತಿದ್ದರಿಂದ, ನಿಗದಿತ ಸಮಯಕ್ಕಿಂತ ಐದು ಗಂಟೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ. ರೈಲುಗಳು ನಿಗದಿತ ಸಮಯಕ್ಕೆ ತಲಪುತ್ತವೆ ಎಂದು ವಿದ್ಯಾರ್ಥಿಗಳು, ಬೆಂಗಳೂರು, ಮೈಸೂರು, ಹಾಸನದಿಂದ ಸಾವಿರಾರು ಅಭ್ಯರ್ಥಿಗಳು, ರೈಲಿನಲ್ಲಿ ಕಲಬುರಗಿಗೆ ಹೊರಟಿದ್ದರು. ಆದರೆ ರೈಲ್ವೆ ಹಳಿ ದುರಸ್ಥಿ ಕಾರ್ಯದಿಂದ ರೈಲುಗಳು ವಿಳಂಬವಾಗಿದ್ದರಿಂದ ಪರೀಕ್ಷೆಗೆ ಹಾಜರಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಅಭ್ಯರ್ಥಿಗಳಿಗೆ ಸ್ಪಂದಿಸದ ಕೆಪಿಎಸ್ಸಿ ಇನ್ನು ರೈಲ್ವೆ ವಿಳಂಬದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲಿಕ್ಕಾಗದೇ ಪರದಾಡುತ್ತಿರುವ ವಿದ್ಯಾರ್ಥಿಗಳು, ಪರೀಕ್ಷಾ ಸಮಯವನ್ನು ಮರು ನಿಗದಿ ಮಾಡಬೇಕು, ಇಲ್ಲವೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪೋನ್ ಮಾಡಿ ಮನವಿ ಮಾಡಿದ್ದಾರೆ. ಆದರೆ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಸರಿಯಾಗಿ ಸ್ಪಂಧಿಸುತ್ತಿಲ್ಲಾ ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ರೈಲು ವಿಳಂಬವಾದರೆ ನಾವು ಏನು ಮಾಡಲಿಕ್ಕಾಗೋದಿಲ್ಲ, ನೀವು ಒಂದು ದಿನ ಮೊದಲೇ ಹೋಗಬೇಕಿತ್ತು ಅಂತ ಹೇಳುತ್ತಿದ್ದಾರಂತೆ. ಹೀಗಾಗಿ ನೌಕರಿ ಪಡೆಯುವ ಹಂಬಲದಲ್ಲಿದ್ದ ಸಾವಿರಾರು ಅಭ್ಯರ್ಥಿಗಳ ಕನಸು, ಪರೀಕ್ಷೆ ಬರೆಯುವ ಮುನ್ನವೇ ನುಚ್ಚು ನೂರಾಗಿದೆ.
ಮಧ್ಯಾಹ್ನದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಸೂಚನೆ ರೈಲು ವಿಳಂಬದಿಂದ ಸಾವಿರಾರು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗದ ಹಿನ್ನಲೆ, ಹಾಜರಾಗಲು ಸಾಧ್ಯವಾಗದ ಪರೀಕ್ಷಾರ್ಥಿಗಳಿಗೆ ಕೆಪಿಎಸ್ಸಿ ಅಭಯ ನೀಡಿದೆ. ಮಧ್ಯಾಹ್ನದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಪಿಡಬ್ಯೂಡಿ ಎಇ ಹುದ್ದೆಗಾಗಿ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ.
Published On - 8:28 am, Tue, 14 December 21