AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ನಾಯಕರು ಡಿಕ್ಷನರಿಯಲ್ಲಿ ಇಲ್ಲದ ಪದ ಬಳಸುತ್ತಿದ್ದಾರೆ; ಸಚಿವ ಈಶ್ವರಪ್ಪ ಹೇಳಿಕೆ

ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಮೋದಿ ನಾಯಕತ್ವ ಮತ್ತು ಬಿಎಸ್​ವೈ ಬೊಮ್ಮಾಯಿ ಅವರ ಸಾಧನೆ ನಮಗೆ ಶ್ರೀ ರಕ್ಷೆ. ಆದರೆ ಕಾಂಗ್ರೆಸ್​ನವರು ಮೋದಿ ಬಗ್ಗೆ ಹಗುರವಾಗಿ ಮಾತಾನಾಡುತ್ತಿದ್ದಾರೆ.

ಕಾಂಗ್ರೆಸ್ ನಾಯಕರು ಡಿಕ್ಷನರಿಯಲ್ಲಿ ಇಲ್ಲದ ಪದ ಬಳಸುತ್ತಿದ್ದಾರೆ; ಸಚಿವ ಈಶ್ವರಪ್ಪ ಹೇಳಿಕೆ
ಸಚಿವ ಕೆ.ಎಸ್.ಈಶ್ವರಪ್ಪ
TV9 Web
| Updated By: sandhya thejappa|

Updated on: Oct 24, 2021 | 11:19 AM

Share

ಕಲಬುರಗಿ: ಕಾಂಗ್ರೆಸ್ನವರು (Congress) ಡಿಕ್ಷನರಿಯಲ್ಲಿ ಇಲ್ಲದ ಪದ ಬಳಸುತ್ತಿದ್ದಾರೆ ಅಂತ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇಡಿ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯನ್ನು ಮೆಚ್ಚಿದೆ. ಆದರೆ, ಕೆಲವರು ಪ್ರಧಾನಿ ಮೋದಿಯನ್ನ ಟೀಕಿಸುತ್ತಿದ್ದಾರೆ. ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದರ ವ್ಯತ್ತಿರಿಕ್ತ ಪರಿಣಾಮ ಕಾಂಗ್ರೆಸ್​ನವರು ಎದುರಿಸುತ್ತಾರೆ. ನೂರು ಕೋಟಿ ಲಸಿಕೆ ಸಾಧನೆಗೆ ಇಡೀ ವಿಶ್ವವೇ ಮೋದಿಗೆ ಅಭಿನಂದಿಸುತ್ತಿದೆ. ಆದರೆ ಮೋದಿಯವರು ವಿಜ್ಞಾನಿಗಳಿಗೆ, ವೈದ್ಯರಿಗೆ, ನರ್ಸ್ಗಳಿಗೆ, ಡಿ ಗ್ರೂಪ್ ನೌಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಅಂತ ಹೇಳಿದರು.

ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಮೋದಿ ನಾಯಕತ್ವ ಮತ್ತು ಬಿಎಸ್​ವೈ ಬೊಮ್ಮಾಯಿ ಅವರ ಸಾಧನೆ ನಮಗೆ ಶ್ರೀ ರಕ್ಷೆ. ಆದರೆ ಕಾಂಗ್ರೆಸ್​ನವರು ಮೋದಿ ಬಗ್ಗೆ ಹಗುರವಾಗಿ ಮಾತಾನಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಜನರು ಉತ್ತರ ಕೊಡುತ್ತಾರೆ ಅಂತ ಅಭಿಪ್ರಾಯಪಟ್ಟರು.

ಇನ್ನು ಇದೇ ವೇಳೆ ನಮ್ಮಲ್ಲೂ ಕೆಲವು ದೇಶದ್ರೋಹಿಗಳು ಪಾಕ್ ಪರ ಇದ್ದಾರೆ ಅಂತ ಸಚಿವ ಈಶ್ವರಪ್ಪ ಹೇಳಿದರು. ಕ್ರಿಕೆಟ್ ಆಟವನ್ನು ಆಟದ ರೀತಿಯಲ್ಲಿ ನೋಡಬೇಕು. ಆಟದಲ್ಲೂ ದ್ವೇಷ ಕಾಣುವುದು ಅವಶ್ಯಕತೆಯಿಲ್ಲ. ಕ್ರೀಡಾಪಟುಗಳ ಶ್ರಮಕ್ಕೆ ನಾನು ಹಾರೈಸುತ್ತೇನೆ ಎಂದು ನುಡಿದರು.

ಇದನ್ನೂ ಓದಿ

ಹಳೇ ದ್ವೇಷ ಹಿನ್ನೆಲೆ ಗ್ಯಾಂಗ್ ವಾರ್; ಓರ್ವನ ಕೊಲೆ, ಇಬ್ಬರ ಸ್ಥಿತಿ ಗಂಭೀರ

ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ; ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ