ಕಲಬುರಗಿ ನಗರದಲ್ಲಿ ಹಾಡಹಗಲೇ ವ್ಯಕ್ತಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರತೆಯ ದೃಶ್ಯ
ನಗರದಲ್ಲಿ ಜಾಗದ ವಿಷಯವಾಗಿ ಎರಡು ಗುಂಪುಗಳ ನಡುವೆ ಸಂಧಾನ ಮಾಡಿದ್ದಕ್ಕಾಗಿ ಮಹಮ್ಮದ್ ಇಸಾಮುದ್ದೀನ್ಗೆ ಎಂಬಾತನಿಗೆ ಚಾಕು ಫಯಾಜ್ ಮತ್ತು ಆತನ ಸ್ನೇಹಿತರು ಸೇರಿ ಚಾಕು ಇರಿದಿದ್ದಾರೆ.
ಕಲಬುರಗಿ: ವಿದ್ಯಾನಗರದ ರಿಯೆಲ್ ಎಸ್ಟೇಟ್ ಉದ್ಯೋಗ ಮಾಡುತ್ತಿದ್ದ ಮಹಮ್ಮದ ಇಸಾಮುದ್ದೀನ್, ಎರಡು ಗುಂಪುಗಳ ನಡುವೆ ಸಂಧಾನ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಫಯಾಜ್ ಮತ್ತು ಆತನ ಸ್ನೇಹಿತರು ಸೇರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆತನಿಗೆ ಚಾಕು ಇರಿದಿದ್ದಾರೆ. ಗಾಯಾಳು ಮಹಮ್ಮದ್ ಇಸಾಮುದ್ದೀನ್ನನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಘಟನೆಯು ಜನವರಿ 4 ರಂದು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ನಡೆದಿದೆ. ಮಹಮ್ಮದ ಇಸಾಮುದ್ದೀನ್ ಎಂಬಾತ ಜಾಗದ ವಿಷಯವಾಗಿ ಎರಡು ಗುಂಪುಗಳನ್ನು ಕರೆಸಿ ಅವರಿಬ್ಬರ ನಡುವೆ ಸಂಧಾನ ಮಾಡಿದ್ದಾನೆ. ಈ ಕುರಿತು ಅಸಮಾಧಾನ ಹೊಂದಿದ್ದ ಫಯಾಜ್ ಆತನ ಸ್ನೇಹಿತರೊಂದಿಗೆ ಕೂಡಿ ಇಸಾಮುದ್ದೀನ್ ಮೇಲೆ ಹಾಡಹಗಲೇ ಚಾಕು ಇರಿದಿದ್ದಾನೆ.
ರಾಮನಗರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವ ಇದೀಗ ಜೈಲುಪಾಲು
ರಾಮನಗರ: ಪಿಎಸ್ವಿ ನಗರದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ರೆಹಮಾನಿಯನಗರದ ನಿವಾಸಿ ಬಾಬುಖುರೇಷಿ(55) ಎಂಬಾತನನ್ನು ರಾಮನಗರದ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಾರಿಯಾದ ಮತ್ತೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಂಧಿತನಿಂದ 1 ಕೆಜಿ 112 ಗ್ರಾಂ ಗಾಂಜಾವನ್ನ ವಶಪಡಿಸಿಕೊಂಡಿದ್ದು, ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 am, Sun, 8 January 23