ಚಿನ್ನಾಭರಣ ಕದ್ದು ವಿವಸ್ತ್ರಗೊಳಿಸಿ ತಲೆ ಮೇಲೆ ಕಲ್ಲೆತ್ತಾಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕೊಲೆ; ಕಲಬುರಗಿಯಲ್ಲಿ ಆತಂಕ
ಪ್ರತಿದಿನ ಶ್ಯಾಮಲಾ ಹೊಲಕ್ಕೆ ಹೋಗಿ ಬೆಳಗೆ ನೀರಾಕಿ ವಾಪಸ್ ಬರ್ತಿದ್ರು. ನಿನ್ನೆ ಮುಂಜಾನೆಯೂ ಶ್ಯಾಮಲಾ ಹೊಲಕ್ಕೆ ಹೋಗಿದ್ರು. ಆದ್ರೆ, ಮಧ್ಯಾಹ್ನ ಆದ್ರೂ ಶ್ಯಾಮಲಾ ಮನೆಗೆ ವಾಪಸ್ ಆಗಿರಲಿಲ್ಲ. ಇದ್ರಿಂದ ಶ್ಯಾಮಲಾ ಅವರ ಪುತ್ರ ಹೊಲಕ್ಕೆ ಹೋಗಿ ನೋಡಿದಾಗ ಒಂದು ಕ್ಷಣ ನಡುಗಿ ಹೋಗಿದ್ದಾನೆ.
ಕಲಬುರಗಿ: ಜಿಲ್ಲೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯ ಕೊಲೆಯಾಗಿದೆ(Grama Panchayat Ex Member Murder). ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತು ನಂತ್ರ ತಮ್ಮ ಜಮೀನಿನಲ್ಲಿ ಕೃಷಿ ಮಾಡ್ಕೊಂಡು ಜೀವನ ನಡೆಸುತ್ತಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಶ್ಯಾಮಲಾ ಪ್ರತಿದಿನ ಜಮೀನಿಗೆ ಹೋಗಿ ವಾಪಸ್ ಆಗುತ್ತಿದ್ರು. ಆದ್ರೆ, ನಿನ್ನೆ ಜಮೀನಿಗೆ ಹೋದವರು ಕೊಲೆಯಾಗಿ ಹೋಗಿದ್ದು, ಇಡೀ ಗ್ರಾಮ ಕಂಗಾಲಾಗಿದೆ. ಈ ಕೊಲೆ ಹಿಂದೆ ಹತ್ತಾರು ಸಂಶಯ ಹುಟ್ಟಿಕೊಂಡಿದೆ.
ತಲೆ ಮೇಲೆ ಕಲ್ಲೆತ್ತಾಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕೊಲೆ! ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ನಿವಾಸಿ ಶ್ಯಾಮಲಾ ಬಂದರವಾಡ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ. ಕಳೆದ ಬಾರಿಯ ಗ್ರಾಮ ಪಂಚಾಯಿತಿ ಚುನಾಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ರು. ಬಳಿಕ ಯಾರ ತಂಟೆಗೂ ಹೋಗದೇ ಮನೆಯಿಂದ ಸ್ವಲ್ಪ ದೂರದಲ್ಲಿರುವ ತನ್ನ ಜಮೀನಿನನಲ್ಲಿ ಗೋಧಿ, ಕಬ್ಬು ಸೇರಿದಂತೆ ಅನೇಕ ಬೆಳೆಯನ್ನು ಬೆಳೀತಿದ್ರು. ಪ್ರತಿದಿನ ಶ್ಯಾಮಲಾ ಹೊಲಕ್ಕೆ ಹೋಗಿ ಬೆಳಗೆ ನೀರಾಕಿ ವಾಪಸ್ ಬರ್ತಿದ್ರು. ನಿನ್ನೆ ಮುಂಜಾನೆಯೂ ಶ್ಯಾಮಲಾ ಹೊಲಕ್ಕೆ ಹೋಗಿದ್ರು. ಆದ್ರೆ, ಮಧ್ಯಾಹ್ನ ಆದ್ರೂ ಶ್ಯಾಮಲಾ ಮನೆಗೆ ವಾಪಸ್ ಆಗಿರಲಿಲ್ಲ. ಇದ್ರಿಂದ ಶ್ಯಾಮಲಾ ಅವರ ಪುತ್ರ ಹೊಲಕ್ಕೆ ಹೋಗಿ ನೋಡಿದಾಗ ಒಂದು ಕ್ಷಣ ನಡುಗಿ ಹೋಗಿದ್ದಾನೆ. ಯಾಕಂದ್ರೆ, ಯಾರೋ ಪಾಪಿಗಳು ಶ್ಯಾಮಲಾ ತಲೆ ಮೇಲೆ ಕಲ್ಲೆತ್ತಾಕಿ ಕೊಲೆ ಮಾಡಿದ್ರು.
ಮೈಮೇಲೆ ಚಿನ್ನಾಭರಣ ನಾಪತ್ತೆ.. ಕಳ್ಳರಿಂದ ನಡೀತಾ ಹತ್ಯೆ? ಇನ್ನು ಕೊಲೆ ಯಾರು ಮಾಡಿದ್ದಾರೆ? ಯಾವ ಕಾರಣಕ್ಕಾಗಿ ಮಾಡಿದ್ದಾರೆ ಅನ್ನೋದೆ ನಿಗೂಢವಾಗಿದೆ. ಆದ್ರೆ, ಶ್ಯಾಮಲಾ ಅವರ ಕೊರಳಲ್ಲಿ ಮಾಂಗಲ್ಯ ಸರ ಮತ್ತು ಕಿವಿಯೋಲೆಗಳು ಇದ್ದವು. ಘಟನಾ ಸ್ಥಳದಲ್ಲಿ ಮಾಂಗಲ್ಯ ಸರ ಸಿಕ್ಕಿದ್ರೆ, ಕೆಲ ಚಿನ್ನಾಭರಣ ನಾಪತ್ತೆ ಆಗಿವೆ. ಹೀಗಾಗಿ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆಯಾ ಅನ್ನೋ ಅನುಮಾನ ಹುಟ್ಟಿಕೊಂಡಿವೆ.
ವಿಚಿತ್ರ ಅಂದ್ರೆ, ವಿವಸ್ತ್ರಗೊಳಿಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯನ್ನ ಕೊಲೆ ಮಾಡ್ಲಾಗಿದೆ. ಹೀಗಾಗಿ ಯಾರೋ ಪಾಪಿಗಳು ಅತ್ಯಾಚಾರ ಮಾಡಿ, ಕೊಲೆಗೈದು ಪರಾರಿ ಆಗಿರೋ ಶಂಕೆ ವ್ಯಕ್ತವಾಗ್ತಿದೆ. ಸದ್ಯ, ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಸಲಿ ವಿಷ್ಯ ಏನು? ಕೊಲೆ ಆರೋಪಿಗಳು ಯಾರು ಅಂತಾ ಪೊಲೀಸರು ತನಿಖೆ ಮಾಡ್ತಿದ್ದಾರೆ.
ವರದಿ: ಸಂಜಯ್, ಟಿವಿ9, ಕಲಬುರಗಿ
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಹಂಗೇರಿ ತಲುಪಿ: ಭಾರತೀಯ ರಾಯಭಾರ ಕಚೇರಿ ಸಲಹೆ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಹಂಗೇರಿ ತಲುಪಿ: ಭಾರತೀಯ ರಾಯಭಾರ ಕಚೇರಿ ಸಲಹೆ