ಕಲಬುರಗಿ, ಗದಗದಲ್ಲಿ ಬರದ ಛಾಯೆ; ಗೊಂಬೆ, ಕತ್ತೆ, ಕಪ್ಪೆ ಮದುವೆಯಂತಹ ಆಚರಣೆ ಮೂಲಕ ಮಳೆಗಾಗಿ ಪ್ರಾರ್ಥನೆ

| Updated By: ಆಯೇಷಾ ಬಾನು

Updated on: Jul 12, 2023 | 8:29 AM

ಕಲಬುರಗಿ ಜಿಲ್ಲೆಯಲ್ಲಿ ಜೂನ್‌1 ರಿಂದ ಜುಲೈ 11 ರವರಗೆ ವಾಡಿಕೆ ಪ್ರಕಾರ 149 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಜಿಲ್ಲೆಯಲ್ಲಿ 96 ಮಿಲಿ ಮೀಟರ್ ಮಳೆಯಾಗಿದೆ. ಶೇಕಡಾ 36 ರಷ್ಟು ಮಳೆ ಕೊರತೆಯಾಗಿದೆ.

ಕಲಬುರಗಿ, ಗದಗದಲ್ಲಿ ಬರದ ಛಾಯೆ; ಗೊಂಬೆ, ಕತ್ತೆ, ಕಪ್ಪೆ ಮದುವೆಯಂತಹ ಆಚರಣೆ ಮೂಲಕ ಮಳೆಗಾಗಿ ಪ್ರಾರ್ಥನೆ
ಗೊಂಬೆ, ಕತ್ತೆ, ಕಪ್ಪೆ ಮದುವೆ ಆಚರಣೆ ಮೂಲಕ ಮಳೆಗಾಗಿ ಪ್ರಾರ್ಥನೆ
Follow us on

ಕಲಬುರಗಿ: ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ(Karnataka Monsoon). ಅನೇಕ ಅನಾಹುತಗಳು ಸಂಭವಿಸುತ್ತಿವೆ. ಆದ್ರೆ ಕಲಬುರಗಿಯಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ(Drought). ಕಲಬುರಗಿ ಜಿಲ್ಲೆಯ ಜನರ ಮೇಲೆ ವರುಣ ದೇವ ಮುನಿಸಿಕೊಂಡಂತಿದೆ. ಹೀಗಾಗಿ ಜನರು ಅನೇಕ ಆಚರಣೆಗಳನ್ನು ಮಾಡಿ ವರುಣ ದೇವನನ್ನು ಮೆಚ್ಚಿಸುವ ಪ್ರಯತ್ನ ಮಾಡ್ತಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಇನ್ನೂ ಮಳೆ ಆಗಿಲ್ಲ, ಹೀಗಾಗಿ ಕಲಬುರಗಿ ಜನ ಪೂಜೆ, ಆಚರಣೆಗಳನ್ನು ಮಾಡ್ತಿದ್ದಾರೆ.

ಕಪ್ಪೆ, ಕತ್ತೆ, ಗೊಂಬೆ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋ ನಂಬಿಕೆ ಹಿನ್ನೆಲೆ ಜೋಡಿ ಕಪ್ಪೆ ಮದುವೆ, ಗೊಂಬೆ ಮದುವೆ, ಕತ್ತೆ ಮದುವೆ ಮಾಡಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಬಹುತೇಕ ಕಡೆ ಮಳೆ ಕೊರತೆ ಇದೆ. ಹೀಗಾಗಿ ಜಿಲ್ಲೆಯ ಅನೇಕ ಕಡೆ ಅನೇಕ ರೀತಿಯ ಆಚರಣೆಗಳನ್ನು ಮಾಡಲಾಗುತ್ತಿದೆ. ಅನೇಕ ತಾಲೂಕುಗಳಲ್ಲಿ ರೈತರು ಇನ್ನೂ ಕೂಡ ಒಂದು ಕಾಳು ಬೀಜ ಬಿತ್ತನೆ ಮಾಡಿಲ್ಲ. ಭೂಮಿ ಹಸಿಯಾಗದೇ ಇರುವುದರಿಂದ ಇನ್ನು ಬಿತ್ತನೆ ಕಾರ್ಯ ಆರಂಭವಾಗಿಲ್ಲ.

ಕಲಬುರಗಿ ಜಿಲ್ಲೆಯಲ್ಲಿ ಜೂನ್‌1 ರಿಂದ ಜುಲೈ 11 ರವರಗೆ ವಾಡಿಕೆ ಪ್ರಕಾರ 149 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಜಿಲ್ಲೆಯಲ್ಲಿ 96 ಮಿಲಿ ಮೀಟರ್ ಮಳೆಯಾಗಿದೆ. ಶೇಕಡಾ 36 ರಷ್ಟು ಮಳೆ ಕೊರತೆಯಾಗಿದೆ. ಇನ್ನು 149 ಮೀಲಿ ಮೀಟರ್ ಮಳೆ ಬಹುತೇಕ ಚಿಂಚೋಳಿ, ಕಾಳಗಿ, ಸೇಡಂ‌ ತಾಲೂಕಿನಲ್ಲಿ ಆಗಿದೆ. ಅಫಜಲಪುರ, ಆಳಂದ, ಜೇವರ್ಗಿ, ಯಡ್ರಾಮಿ ಸೇರಿದಂತೆ ಅನೇಕ ಕಡೆ ತೀರ್ವ ಮಳೆ ಕೊರತೆ ಇದೆ. ಮಳೆಯಾಗದೇ ಇರುವುದರಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಬೆಳೆ ಬೆಳೆಯೋ ಸಮಯ ಮುಕ್ತಾಯಗೊಂಡಿದೆ. ಇದೀಗ ಮಳೆಯಾಗದೇ ಇದ್ರೆ ತೊಗರಿ ಬಿತ್ತನೆಗೆ ಕೂಡಾ ತೊಂದರೆಯಾಗಲಿದೆ. ಇನ್ನೊಂದು ವಾರದಲ್ಲಿ ಮಳೆಯಾಗದೇ ಇದ್ರೆ ತೊಗರಿ ಬಿತ್ತನೆ ಸಮಯ ಕೂಡಾ ಮುಗಿಯಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯೋದು ಕಲಬುರಗಿ ಜಿಲ್ಲೆಯಲ್ಲಿ. ಆದ್ರೆ ಮಳೆ ಇಲ್ಲದೆ ತೊಗರಿ ಬಿತ್ತನೆ ಕಡಿಮೆಯಾದ್ರೆ, ತೊಗರಿ ಬೇಳೆ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದೆ. ಈಗಾಗಲೇ ಮಾರ್ಕೆಟ್​ನಲ್ಲಿ 130 ರಿಂದ 150 ರೂಪಾಯಿಗೆ ತೊಗರಿ ಬೇಳೆ ಮಾರಾಟವಾಗ್ತಿದೆ.

ಇದನ್ನೂ ಓದಿ: ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ; ಒಣಗುತ್ತಿರುವ ಹತ್ತಿ ಬೆಲೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ

ಗದಗದಲ್ಲೂ ಬರ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಗುಡ್ಡದಲ್ಲಿರುವ ರಾಮಲಿಂಗೇಶ್ವರನಿಗೆ, ದೀರ್ಘ ದಂಡ ನಮಸ್ಕಾರ ಹಾಕಿ, ಜಲಾಭಿಷೇಕ ಮಾಡಿ, ಗ್ರಾಮದ ಕೆರೆಯಿಂದ ರಾಮಲಿಂಗೇಶ್ವರನ ಮೆರವಣಿಗೆ ಮಾಡಿದ್ದಾರೆ. ವಾದ್ಯ ಮೇಳಗಳೊಂದಿಗೆ ಯುವಕರು ಹೆಜ್ಜೆ ಮಜಲು ನೃತ್ಯ ಮಾಡಿದ್ರೆ, ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಒದ್ದೆ ಬಟ್ಟೆಯಲ್ಲಿ ಯುವಕರು ಕೆರೆಯ ನೀರು ತಂದು ರಾಮಲಿಂಗೇಶ್ವರನಿಗೆ ಜಲಾಭಿಷೇಕ ಮಾಡಿದ್ರು. ರಾಮಲಿಂಗೇಶ್ವರನ ಜಾತ್ರೆ ಮಾಡಿದ್ದರೆ ಮಳೆ ಆಗುತ್ತೇ ಎಂಬ ಗ್ರಾಮಸ್ಥರ ನಂಬಿಕೆ ಹಿನ್ನೆಲೆ ಗ್ರಾಮದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದೆ.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ