ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ; ಒಣಗುತ್ತಿರುವ ಹತ್ತಿ ಬೆಲೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ

ಸಿದ್ದಾರೆಡ್ಡಿ ಅನ್ನೋ ರೈತ ತಮ್ಮ 15 ಎಕರೆ ಪ್ರದೇಶದಲ್ಲಿ ಬೆಳೆದಿರುವ ಹತ್ತಿ ಗಿಡಗಳ ರಕ್ಷಣೆಗೆ ಹೊಸ ಪ್ರಯೋಗ ಮಾಡ್ತಿದ್ದಾರೆ. ಅದೇನಪ್ಪ ಅಂದ್ರೆ ಹತ್ತಿ ಗಿಡಗಳಿಗೆ ಕೃತಕವಾಗಿ ನೀರು ಉಣಿಸೊ ಕೆಲಸ.

ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ; ಒಣಗುತ್ತಿರುವ ಹತ್ತಿ ಬೆಲೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ
ಮಳೆಯಿಲ್ಲದ ಹಿನ್ನೆಲೆ ಕೃತಕವಾಗಿ ಬೆಳೆಗಳಿಗೆ ನೀರನ್ನ ಉಣಿಸೊ ಕೆಲಸ
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Jul 11, 2023 | 11:28 AM

ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ ಆವರಿಸಿದೆ(Raichur Rain). ಮುಂಗಾರು ನಂಬಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೈ ಕೊಟ್ಟ ಹಿನ್ನೆಲೆ ಬೆಳೆ ಒಣಗಿ ಹೋಗ್ತಿವೆ. ಬೆಳೆ ಹಾಳಾಗುವ ಭಯ ರೈತರಲ್ಲಿ(Farmers) ಶುರುವಾಗಿದೆ. ಇದೇ ಕಾರಣಕ್ಕೆ ಕಷ್ಟ ಪಟ್ಟು ಬೆಳೆದ ಬೆಳೆ ಕಾಪಾಡಲು ರೈತಾಪಿ ಜನ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮಳೆಯಿಲ್ಲದೇ ರೈತರು ಪರದಾಡುತ್ತಿರೊ ದುಸ್ಥಿತಿ ಈಗ ರಾಯಚೂರು ಜಿಲ್ಲೆಯಲ್ಲಿ ಕಂಡುಬಂದಿದೆ. ರಾಯಚೂರು ತಾಲ್ಲೂಕಿನ ಕಲ್ಮಲ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತ ಸಿದ್ದಾರೆಡ್ಡಿ ಅನ್ನೋರು ಮಳೆಯಿಲ್ಲದ ಕಾರಣಕ್ಕೆ ಹೊಸ ಆಲೋಚನೆ ಮೂಲಕ ಬೆಳೆ ರಕ್ಷಿಸಲು ಮುಂದಾಗಿದ್ದಾರೆ. ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಮೊದಲೇ ಮಳೆ ಕಡಿಮೆ ಅಂಥದ್ರಲ್ಲಿ ಈ ಬಾರೀ ಮಳೆಯೇ ಬಂದಿಲ್ಲ. ಮುಂಗಾರು ಕೈ ಕೊಟ್ಟಿದೆ. ಆದ್ರೆ 15 ದಿನಗಳ ಹಿಂದಷ್ಟೇ ಅಲ್ಪಸ್ವಲ್ಪ ಮಳೆಯಾಗಿತ್ತು. ಆಗ ರಾಯಚೂರಿನಲ್ಲಿ ಮಳೆ ಬಂದೇ ಬರತ್ತೆ ಅನ್ನೋ ನಂಬಿಕೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬಿತ್ತನೆ ಮಾಡಿದ್ರು. ಈಗ ಹತ್ತಿ ಬೀಜಗಳು ಮೊಳಕೆಯೊಡೆದಿವೆ. ಆದ್ರೀಗ ಹೆಚ್ಚು ನೀರು ಬೇಕು. ಇಲ್ದಿದ್ರೆ ಬಿಸಿಲಿನ ತಾಪಕ್ಕೆ ನೀರಿಲ್ಲದೇ ಹತ್ತಿ ಗಿಡಗಳು ಒಣಗಿ ಹೋಗುತ್ವೆ. ಈಗಾಗಲೇ ಕೆಲವೊಂದು ಕಡೆ ಇದೇ ರೀತಿ ಮಳೆಯಿಲ್ಲದ ಹಿನ್ನೆಲೆ ಹತ್ತಿ ಗಿಡಗಳು ಒಣಗಿ ಹೋಗಿವೆ. ಇದೇ ಕಾರಣಕ್ಕೆ ಇಲ್ಲೊಬ್ಬ ರೈತ ಸಿದ್ದಾರೆಡ್ಡಿ ಅನ್ನೋರು ಹತ್ತಿ ಗಿಡಗಳ ರಕ್ಷಣೆಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮಳೆ ಇಲ್ಲದೆ ಒಣಗುತ್ತಿರುವ ಹತ್ತಿ ಗಿಡ ರಕ್ಷಣೆಗೆ ರೈತರ ಪ್ಲಾನ್

ಸಿದ್ದಾರೆಡ್ಡಿ ಅನ್ನೋ ರೈತ ತಮ್ಮ 15 ಎಕರೆ ಪ್ರದೇಶದಲ್ಲಿ ಬೆಳೆದಿರುವ ಹತ್ತಿ ಗಿಡಗಳ ರಕ್ಷಣೆಗೆ ಹೊಸ ಪ್ರಯೋಗ ಮಾಡ್ತಿದ್ದಾರೆ. ಅದೇನಪ್ಪ ಅಂದ್ರೆ ಹತ್ತಿ ಗಿಡಗಳಿಗೆ ಕೃತಕವಾಗಿ ನೀರು ಉಣಿಸೊ ಕೆಲಸ. ಹೌದು, ಹತ್ತಿ ಬೆಳೆ ರಕ್ಷಣೆಗೆ ಕೃತಕವಾಗಿ ನೀರನ್ನ ಉಣಿಸೋಕೆ ರೈತರು ಮುಂದಾಗಿದ್ದಾರೆ. ಈ ಭಾಗದಲ್ಲಿ ನೀರಿಲ್ಲದ ಹಿನ್ನೆಲೆ ಸಾವಿರಾರು ರೂ ಖರ್ಚು ಮಾಡಿ ಒಂದು ಟ್ಯಾಂಕರ್ ನೀರನ್ನ ತಂದು ಹತ್ತಿ ಗಿಡಗಳಿಗೆ ನೀರು ಉಣಿಸಲಾಗ್ತಿದೆ. ಒಂದು ಎಕರೆಗೆ 10-15 ಆಳುಗಳ ಬೇಕೇಬೇಕು. ಪ್ರತಿ ಆಳಿಗೆ ತಲಾ 400 ನಂತೆ 15 ಆಳುಗಳ ಮೂಲಕ ಟ್ಯಾಂಕರ್ ನಿಂದ ನೀರು ತಂದು ತಂಬಿಗೆಗಳ ಮೂಲಕ 15 ಎಕರೆ ಹೊಲದಲ್ಲಿ ಒಂದೊಂದು ಗಿಡಕ್ಕೂ ನೀರು ಉಣಿಸಲಾಗ್ತಿದೆ. ಒಂದು ಹತ್ತಿ ಹಿಡಕ್ಕೆ ಅರ್ಧ ತಂಬಿಗೆಯಷ್ಟು ನೀರನ್ನ ಹಾಕೋ ಮೂಲಕ ಬೆಳೆ ರಕ್ಷಣೆಗೆ ರೈತ ಸಿದ್ದಾರೆಡ್ಡಿ ಮುಂದಾಗಿದ್ದಾರೆ. ಹೀಗೆ ಅನಿವಾರ್ಯವಾಗಿ ನೀರನ್ನ ಉಣಿಸಬೇಕಿದೆ. ಇದಕ್ಕೆ ಎಕರೆಗೆ ಸರಿಸುಮಾರು ನಾಲ್ಕೈದು ಸಾವಿರ ಖರ್ಚಾಗತ್ತೆ. ಈ ಬಗ್ಗೆ ಹೊಸ ಸರ್ಕಾರ ರೈತರ ಕಾಳಜಿ ಮಾಡಬೇಕಿದೆ ಎಂದು ರೈತರು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

raichur farmers using tanker water to cultivate cotton due to delay in monsoon

ಇದನ್ನೂ ಓದಿ: ಬೆಳಗಾವಿಯಲ್ಲಿ ಬರದ ಛಾಯೆ, ಜಿಲ್ಲೆಯ 9 ತಾಲೂಕಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಮಳೆಯಿಲ್ಲದ ಹಿನ್ನೆಲೆ ಅನಿವಾರ್ಯವಾಗಿ ಕೃತಕವಾಗಿ ನೀರನ್ನ ಉಣಿಸೊ ಕೆಲಸ ಮಾಡಲಾಗ್ತಿದೆ. ಹತ್ತಿ ಬೆಳೆ ಒಣಗಿಹೋಗ್ತಿರೋದ್ರಿಂದ ಟ್ಯಾಂಕರ್ ಮೂಲಕ ನೀರನ್ನ ತಂದು ಹೊಲಗಳಿಗೆ ಬಳಸಲಾಗ್ತಿದೆ. ನೀರನ್ನ ಹತ್ತಿ ಗಿಡಕ್ಕೆ ಉಣಿಸಲು ಸುಮಾರು 10-15 ಆಳುಗಳು ಬೇಕು. ಅವರಿಗೆ ಕನಿಷ್ಠ ದಿನಕ್ಕೆ 400 ಕೂಲಿ ಕೊಟ್ಟು ಕೆಲಸ ಮಾಡಿಸಲೇಬೇಕು. ಹೀಗೆ ಎಕೆರೆಗೆ ನಾಲ್ಕೈದು ಸಾವಿರ ಖರ್ಚಾಗುತ್ತಿದೆ. ಪ್ರತಿ ಗಿಡಕ್ಕೆ ಅರ್ಧ ತಂಬಿಗೆಯಷ್ಟು ನೀರು ಉಣಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರೈತ ಸಿದ್ದಾರೆಡ್ಡಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್ನು ನಮಗೆ ಟ್ಯಾಂಕರ್ ನೀರು ಅನಿವಾರ್ಯ. ಯಾಕಂದ್ರೆ ನಮ್ಮ ಭಾಗದಲ್ಲಿ ಮಳೆಯೇ ಆಗಿಲ್ಲ. ಇದರಿಂದ ಲಕ್ಷಾಂತರ ರೂ ಖರ್ಚು ಮಾಡಿ ಬಿತ್ತನೆ ಮಾಡಿರೊ ಹತ್ತಿ ಗಿಡಗಳು ನೀರಿಲ್ಲದೇ ಹಾಳಾಗುತ್ತಿವೆ. ಅವುಗಳನ್ನ ಉಳಿಸಲು ಟ್ಯಾಂಕರ್ ನೀರನ್ನ ಬಳಸಲಾಗ್ತಿದೆ. ಹೀಗೆ ಆಳುಗಳ ಮೂಲಕ ನೀರನ್ನ ಉಣಿಸಿದ್ರೂ ಉತ್ತಮ ಬೆಳೆ ಬರತ್ತೆ ಅನ್ನೋ ನಂಬಿಕೆಯಿಲ್ಲ. ಒಳ್ಳೆ ಬೆಳೆಬರಹುದು ಬಾರದೆಯೂ ಇರಬಹುದು ಎಂದು ರೈತ ಶಿವಲಿಂಗಪ್ಪ ತಮ್ಮ ಕಷ್ಟವನ್ನು ಟಿವಿ9 ಬಳಿ ಹಂಚಿಕೊಂಡರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬರದ ಛಾಯೆ, ಜಿಲ್ಲೆಯ 9 ತಾಲೂಕಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಬರೀ ಇದಷ್ಟೇ ಅಲ್ಲ ಅನೇಕ ಕಡೆ ಮಳೆಯಿಲ್ಲದ ಹಿನ್ನೆಲೆ ಬಿತ್ತನೆ ಮಾಡಲಾಗಿದ್ದ ಹತ್ತಿ ಬೀಜ ಮೊಳಕೆಯೊಡೆದಿಲ್ಲ. ಮಣ್ಣಲ್ಲೇ ನಾಶವಾಗಿವೆ. ಹೀಗಾಗಿ ಇದೇ ಕೂಲಿ ಆಳುಗಳ ಮೂಲಕ ಎಲ್ಲೆಲ್ಲಿ ಹತ್ತಿ ಬೀಜ ಮೊಳಕೆಯೊಡೆದಿಲ್ವೋ ಅಲ್ಲಲ್ಲಿ ಹೊಸ ಬೀಜಗಳನ್ನ ಹಾಕೋ ಮೂಲಕ ನಾಟಿ ಮಾಡಲಾಗ್ತಿದೆ. ಹೀಗೆ ಮಳೆರಾಯ ಕೈಕೊಟ್ಟ ಹಿನ್ನೆಲೆ ರೈತರು ಕಂಗಾಲಾಗಿದ್ದು ಹೆಚ್ಚುವರಿ ಖರ್ಚು ಮಾಡಿ ಹತ್ತಿ ಗಿಡಗಳಿಗೆ ಕೃತಕವಾಗಿ ನೀರನ್ನ ಉಣಿಸುತ್ತಿದ್ದಾರೆ. ಆದ್ರೆ ಇದಿರಂದ ಒಳ್ಳೆ ಬೆಳೆ ಬರಬಹುದು ಇಲ್ಲಾ ಬಾರದೆಯೂ ಇರಬಹುದು ಅಂತ ದೇವರ ಮೇಲೆ ಭಾರ ಹಾಕಿ ಕೂತಿದ್ದಾರೆ ರೈತರು.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ