ಬೆಳಗಾವಿಯಲ್ಲಿ ಬರದ ಛಾಯೆ, ಜಿಲ್ಲೆಯ 9 ತಾಲೂಕಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಒಂಬತ್ತು ತಾಲೂಕುಗಳಲ್ಲಿ 75 ಗ್ರಾಮ ಪಂಚಾಯಿತಿಗಳು ಮತ್ತು ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೆಳಗಾವಿ ಜಿಲ್ಲೆಯ 75 ಗ್ರಾಮ ಪಂಚಾಯತಿಗಳ ನೀರಿನ ಅಗತ್ಯತೆಗಳನ್ನು ಪೂರೈಸಲು, ಒಟ್ಟು 88 ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದ್ದು, ಇವುಗಳು ಪ್ರತಿದಿನ 270 ಟ್ರಿಪ್‌ಗಳ ಲೆಕ್ಕದಲ್ಲಿ ಪೂರೈಸುತ್ತಿದೆ.
ಬೆಳಗಾವಿ: ಮುಂಗಾರು(Monsoon) ಮಳೆ ಶುರುವಾಗಿ ಹತ್ತು ದಿನಗಳು ಕಳೆದಿವೆ. ಮಳೆಯಾದರೂ ವಾಡಿಕೆಯಷ್ಟು ಮಳೆಯಾಗುತ್ತಿಲ್ಲ(Karnataka Rain). ಬೆಳಗಾವಿಯಲ್ಲಿ(Belagavi) ಕಳೆದ ವಾರದಿಂದ ಮೋಡ ಕವಿದ ವಾತಾವರಣ ವಿದ್ದು ತುಂತುರು ಮಳೆಯಾಗುತ್ತಿದೆ. ಆದ್ರೆ ಇದುವರೆಗೂ ಜಲಾಶಯದ ಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನೆಲದ ಮಟ್ಟದಲ್ಲಿ ನೀರಿನ ಬಿಕ್ಕಟ್ಟು ಬದಲಾಗಿಲ್ಲ. ಹೀಗಾಗಿ ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ಇದೆ. ಜಿಲ್ಲೆಯ ಹಲವಾರು ನಗರಗಳು ಸ್ಥಳೀಯ ಸಂಸ್ಥೆಗಳ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ.
ಜಿಲ್ಲಾಡಳಿತದ ಮೂಲಗಳ ಪ್ರಕಾರ, ಒಂಬತ್ತು ತಾಲೂಕುಗಳಲ್ಲಿ 75 ಗ್ರಾಮ ಪಂಚಾಯಿತಿಗಳು ಮತ್ತು ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಅವುಗಳು ಸ್ಥಳೀಯ ಆಡಳಿತವು ಪೂರೈಸುವ ಟ್ಯಾಂಕರ್ ನೀರನ್ನು ಅವಲಂಬಿಸಿವೆ. ಬೆಳಗಾವಿ ವಿಭಾಗದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆ ಬೆಳಗಾವಿ. ಇದು ಉತ್ತರ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿದೆ.
ಉತ್ತರ ಕನ್ನಡವು ನೀರಿನ ಸಮಸ್ಯೆಯಿಂದ ತೀವ್ರವಾಗಿ ಹಾನಿಗೊಳಗಾದ ಎರಡನೇ ಜಿಲ್ಲೆಯಾಗಿದ್ದು, ಆರು ತಾಲೂಕುಗಳ 26 ಗ್ರಾಮಗಳು ತೀವ್ರ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ, ನಂತರ ಬಾಗಲಕೋಟೆ, ಹಾವೇರಿ ಮತ್ತು ವಿಜಯಪುರದಲ್ಲಿ ತಲಾ ನಾಲ್ಕು ತಾಲೂಕುಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೆಳಗಾವಿ ಜಿಲ್ಲೆಯ ಒಂಬತ್ತು ನಗರ ಸಂಸ್ಥೆಗಳ 40 ವಾರ್ಡ್‌ಗಳಲ್ಲಿ ನೀರು ಪೂರೈಕೆಗೆ ಸಂಬಂಧಿಸಿದಂತೆ, 26 ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದ್ದು, ಪ್ರತಿದಿನ ಸರಾಸರಿ 53 ಟ್ರಿಪ್‌ಗಳ ಲೆಕ್ಕದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮುಂಗಾರು ಮಳೆ ವಿಳಂಬ; ರಾಜ್ಯದಲ್ಲಿ ಎದುರಾಗಲಿದೆ ನೀರಿಗಾಗಿ ಹಾಹಾಕಾರ
ಬೆಳಗಾವಿ ಜಿಲ್ಲೆಯ 75 ಗ್ರಾಮ ಪಂಚಾಯತಿಗಳ ನೀರಿನ ಅಗತ್ಯತೆಗಳನ್ನು ಪೂರೈಸಲು, ಒಟ್ಟು 88 ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದ್ದು, ಇವುಗಳು ಪ್ರತಿದಿನ 270 ಟ್ರಿಪ್‌ಗಳ ಲೆಕ್ಕದಲ್ಲಿ ಪೂರೈಸುತ್ತಿದೆ. ಅಲ್ಲದೆ 45 ಗ್ರಾಮಗಳಿಗೆ 57 ಖಾಸಗಿ ಬೋರ್ ನೀರು ಪೂರೈಕೆ ಮಾಡಲಾಗುತ್ತಿದೆ.
ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಯ ಒಂಬತ್ತು ತಾಲೂಕುಗಳ ಪೈಕಿ ಅಥಣಿ ಮೊದಲ ಸ್ಥಾನದಲ್ಲಿದೆ. ಅಥಣಿಯಲ್ಲಿ 18 ಗ್ರಾಮಗಳಲ್ಲಿ ನೀರಿನ ಕೊರತೆ ಇದೆ. ಖಾನಾಪುರ ಮತ್ತು ರಾಯಬಾಗದಲ್ಲಿ ತಲಾ 15 ಗ್ರಾಮಗಳಲ್ಲಿ, ಬೆಳಗಾವಿ ತಾಲೂಕಿನಲ್ಲಿ 12, ನಿಪ್ಪಾಣಿಯಲ್ಲಿ 6, ಚಿಕ್ಕೋಡಿಯಲ್ಲಿ 4, ಗೋಕಾಕದಲ್ಲಿ 3, ಮೂಡಲಗಿ ಮತ್ತು ರಾಮದುರ್ಗದಲ್ಲಿ ತಲಾ 1 ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನೀರಿನ ಕೊರತೆ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮುಂದಿನ 10 ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದು ಅಥವಾ ಎರಡು ವಾರಗಳಲ್ಲಿ ಪ್ರಸ್ತುತ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ