ಮುಂಗಾರು ಮಳೆ ವಿಳಂಬ; ರಾಜ್ಯದಲ್ಲಿ ಎದುರಾಗಲಿದೆ ನೀರಿಗಾಗಿ ಹಾಹಾಕಾರ
ದಿನದಿಂದ ದಿನಕ್ಕೆ ಕೆಆರ್ಎಸ್ ನೀರಿನ ಮಟ್ಟ ಇಳಿಯುತ್ತಿದೆ. ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯು ಆಗಿಲ್ಲ. ಜುಲೈ ತಿಂಗಳು ಆರಂಭವಾದ್ರು ಮುಂಗಾರು ಚುರುಕಾಗಿಲ್ಲ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು(Monsoon) ಪ್ರವೇಶ ವಿಳಂಬವಾಗಿದೆ. ಕೆಲವು ಕಡೆ ಕಡಿಮೆ ಮಳೆಯಾದ್ರೆ, ಮತ್ತೆ ಕೆಲವು ಕಡೆ ವರುಣನ ಸುಳಿವೇ ಇಲ್ಲ. ಹೀಗಾಗಿ ಅನೇಕ ಡ್ಯಾಂಗಳು ಬರಿದಾಗಿದ್ದು ರಾಜ್ಯಕ್ಕೆ ನೀರಿನ ಕೊರತೆ ಸೃಷ್ಟಿಯಾಗಿದೆ(Water Crisis). ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದೆ. ಹೀಗಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.
ದಿನದಿಂದ ದಿನಕ್ಕೆ ಕೆಆರ್ಎಸ್ ನೀರಿನ ಮಟ್ಟ ಇಳಿಯುತ್ತಿದೆ. ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯು ಆಗಿಲ್ಲ. ಜುಲೈ ತಿಂಗಳು ಆರಂಭವಾದ್ರು ಮುಂಗಾರು ಚುರುಕಾಗಿಲ್ಲ. ಸಧ್ಯ ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆಯಷ್ಟು ಮಳೆಯೂ ಆಗಿಲ್ಲ. ಹೀಗಾಗಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಹನಿ ನೀರಿಗೂ ಪರದಾಡುತ್ತಿದ್ದಾರೆ. ಇದೀಗ ಈ ಸಮಸ್ಯೆ ಬೆಂಗಳೂರಿಗೂ ತಟ್ಟಲಿದೆ.
ಇದನ್ನೂ ಓದಿ:ಕೈ ಕೊಟ್ಟ ಮುಂಗಾರು ಮಳೆ; ಬತ್ತಿ ಹೋಗುತ್ತಿವೆ ಜಲಾಶಯಗಳು
ರಾಜ್ಯಕ್ಕೆ 20 ಸೆಂ.ಮೀ ಮಳೆಯಾಗಬೇಕು. ಆದ್ರೆ 9 ಸೆಂ.ಮೀ ಮಳೆಯಾಗಿದೆ. ಶೇ 53 % ರಷ್ಟು ಮಳೆಯ ಕೊರತೆ ಇದೆ. ಕರಾವಳಿಗೆ ವಾಡಿಕೆಯಂತೆ 86% ಮಳೆಯಾಗಬೇಕಿತ್ತು. ಆದ್ರೆ 45 ಸೆಂ.ಮೀ ನಷ್ಟು ಮಳೆಯಾಗಿದ್ದು 48 % ರಷ್ಟು ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡಿಗೆ 11 ಸೆಂ.ಮೀ ಮಳೆಯಾಗಬೇಕಿತ್ತು. ಆದ್ರೆ ಮಳೆಯಾಗಿದ್ದು 5% . 54 % ರಷ್ಟು ಮಳೆಯ ಕೊರತೆ ಎದುರಾಗಿದೆ. ಇನ್ನು ದಕ್ಷಿಣ ಒಳನಾಡಿಗೆ 15 ಸೆಂ.ಮೀ ಮಳೆಯಾಗಬೇಕಿತ್ತು. ಆದ್ರೆ 7 ಸೆಂ ಮೀ ಮಳೆಯಾಗಿದ್ದು 56 % ರಷ್ಟು ಮಳೆಯ ಕೊರತೆ ಎದುರಾಗಿದೆ.
ಬೆಂಗಳೂರು ಗ್ರಾಮಾಂತರಕ್ಕೆ 7 ಸೆಂ.ಮೀ ವಾಡಿಕೆ ಮಳೆ ಆಗಬೇಕಿದ್ದು 6 ಸೆಂ.ಮೀ ಮಳೆಯಾಗಿದೆ. 16 % ಕಡಿಮೆಯಾಗಿದೆ, ಬೆಂಗಳೂರು ನಗರಕ್ಕೆ 9 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. 7 ಸೆಂ.ಮೀ ಮಳೆಯಾಗಿದೆ. 15% ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಜಲಾಶಯಗಳಲ್ಲಿ ನೀರಿನ ಅಭಾವವಿದ್ದು ಸಧ್ಯ ಕೆಆರ್ಎಸ್ ಡ್ಯಾಂನಲ್ಲಿ 9.981( 29.911) ಟಿಎಂಸಿ ನೀರಿದೆ. ಬೆಂಗಳೂರಿಗೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಅಗತ್ಯತೆ ಇದೆ. ಪ್ರತಿದಿನ ಬೆಂಗಳೂರಿಗೆ 1800 ಎಂಲ್ ಡಿ ನೀರಿನ ಅಗತ್ಯತೆ ಇದ್ದು 1450 ಎಂಎಲ್ ಡಿ ನೀರು ಪೂರೈಕೆಯಾಗುತ್ತದೆ. 350 ಎಂಎಲ್ಡಿಯಷ್ಟು ನೀರಿನ ಪೂರೈಕೆ ಮೊದಲೇ ಕಡಿಮೆ ಇದೆ. ಹೀಗಾಗಿ ಕಳೆದ ತಿಂಗಳು ಕವೇರಿ ನೀರಾವರಿ ನಿಗಮಕ್ಕೆ BWSSB ಪತ್ರ ಬರೆದಿತ್ತು. ಜೂನ್ ,ಜುಲೈ , ಆಗಸ್ಟ್ ತಿಂಗಳಿಗೆ ಬೇಕಾದ 4.8 TMC ನೀರನ್ನ ಕಾಯ್ದಿರಿಸುವಂತೆ ಪತ್ರ ಬರೆಯಲಾಗಿತ್ತು. ಆದ್ರೆ ಪತ್ರ ಬರೆದು ಒಂದು ತಿಂಗಳು ಕಳೆದರೂ ಕಾವೇರಿ ನೀರಾವರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ