AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಯಿಂದ ನಿವೃತ್ತಿ ಅಷ್ಟೇ. ರಾಜಕೀಯಯಿಂದ ನಿವೃತ್ತಿಯಾಗುವುದಿಲ್ಲ: ಸಿದ್ದರಾಮಯ್ಯ ಘೋಷಣೆ

ಇಂದು(ಜುಲೈ 02) ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ರಾಜಕೀಯ ನಿಲುವು ಬಿಚ್ಚಿಟ್ಟರು. ಅಲ್ಲದೇ ಕನಕ ಪೀಠ ಸ್ಥಾಪನೆಯ ಹಿಂದಿನ ಇತಿಹಾಸ ತೆರೆದಿಟ್ಟರು.

ಚುನಾವಣೆಯಿಂದ ನಿವೃತ್ತಿ ಅಷ್ಟೇ. ರಾಜಕೀಯಯಿಂದ ನಿವೃತ್ತಿಯಾಗುವುದಿಲ್ಲ: ಸಿದ್ದರಾಮಯ್ಯ ಘೋಷಣೆ
ಆಹಾರ & ನಾಗರಿಕ ಸರಬರಾಜು ಇಲಾಖೆ 10,460 ಕೋಟಿ ಮೀಸಲು
Anil Kalkere
| Updated By: ರಮೇಶ್ ಬಿ. ಜವಳಗೇರಾ|

Updated on: Jul 02, 2023 | 2:59 PM

Share

ಬೆಂಗಳೂರು: ಜನರ ಪ್ರೀತಿ ವಿಶ್ವಾಸ, ಗೌರವ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಚುನಾವಣೆಯಿಂದ ನಿವೃತ್ತಿ ಅಷ್ಟೇ. ಆದ್ರೆ, ರಾಜಕೀಯ ನಿವೃತ್ತಿ ಆಗುವುದಿಲ್ಲ, ನಾನು ನಿಮ್ಮ ಪರವಾಗಿ ಹೋರಾಟ ಮಾಡೇ ಮಾಡುತ್ತೇವೆ. ಅವಕಾಶ ವಂಚಿತರ ಪರವಾಗಿ ಇರುತ್ತೇ, ಹೋರಾಟ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು(ಜುಲೈ 02) ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ರಾಜಕೀಯ ನಡೆ ಬಗ್ಗೆ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಬೇಕೆಂದು 8 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು: ನಿರಂಜನಾನಂದಪುರಿಶ್ರೀ

ಇನ್ನು ಇದೇ ವೇಳೆ ಈ ಹಿಂದಿನ ಹಿಸ್ಟರಿ ಹೇಳಿದ ಸಿಎಂ ಸಿದ್ದರಾಮಯ್ಯ, ನಂದು ಅಂಬಾಸಿಟರ್ ಕಾರು ಇತ್ತು. ಆಗ ಚುನಾವಣೆಯಲ್ಲಿ ಸೋತಿದ್ದೆ, ಬೇರೆ ಕೆಲಸ ಇರಲಿಲ್ಲ. ಆಗ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೆ ಎಂದು ಸಿದ್ದರಾಮಯ್ಯ ಅವರು ಹಿಂದಿನ ಹಿಸ್ಟರಿಯನ್ನು ಬಿಚ್ಚಿಟ್ಟರು. 1988ರಲ್ಲಿ ಕನಕದಾಸರ 500ನೇ ಜಯಂತಿ ಆಚರಿಸಲಾಗಿತ್ತು. ಆಗ ಎಸ್​.ಆರ್​.ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ಅಂದು ಇಡೀ ವರ್ಷ ಕನಕ ಜಯಂತಿ ಆಚರಿಸಬೇಕು ಎಂದು ಹೇಳಿದ್ದೆ. ಅದೇ ವೇಳೆ ಕನಕ ಗುರು ಪೀಠ ಸ್ಥಾಪನೆಯ ಬೇಡಿಕೆ ಇತ್ತು ಎಂದರು.

ಚುನಾವಣೆಯಲ್ಲಿ ಸೋತಿದ್ದೆ, ಬೇರೆ ಕೆಲಸ ಇರಲಿಲ್ಲ. ಆಗ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೆ. ಎಲ್ಲ ಜಿಲ್ಲೆಗಳಲ್ಲೂ ದುಡ್ಡು ವಸೂಲಿ ಮಾಡುವ ಕೆಲಸ ಆಯ್ತು. 40 ಲಕ್ಷ ರೂ. ಹೆಚ್ಚು ಹಣ ಖರ್ಚಾಯ್ತು. ಆಗ ವಿಶ್ವನಾಥ್ ಕಾಂಗ್ರೆಸ್, ನಾನು ಜನತಾದಳದಲ್ಲಿದ್ದೆ. ಈ ವಿಶ್ವನಾಥ್ ಬಹಳ ಬ್ಯುಸಿ ಮನುಷ್ಯ. ಎಲ್ಲ ಜಿಲ್ಲೆಗಳಿಗೂ ಬರುತ್ತಿರಲಿಲ್ಲ. ಬಂಡೆಪ್ಪ ಕಾಶಂಪೂರ್ ರನ್ನ ಭೇಟಿ ಮಾಡಿ ಬಿಜಾಪುರದಲ್ಲಿ ಮಾಡಿ ಅಂದ್ರು. ಪುಟ್ಟ ವೀರ್ ತಾರಕ್ ಅವರನ್ನ ಬೀರೆಂದ್ರ ತಾರಕ ಅಂತ ಹೆಸರಿಟ್ಟವರೇ ಈ ವಿಶ್ವನಾಥ್. ಆಗ ಬಂಗಾರಪ್ಪ ಸಿಎಂ ಆಗಿದ್ರು. ಅವರು ದುಡ್ಡು ಕೊಡುತ್ತೇವೆ ಅಂದಿದ್ದಾರೆ ಅಂತ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಬಂಗಾರಪ್ಪ 25 ಲಕ್ಷ ರೂ. ಕೊಡುವುದಕ್ಕೆ ಬಂಗಾರಪ್ಪ ಮುಂದಾಗಿದ್ದರು. ನಾವು ಆಹ್ವಾನಕ್ಕೆ ಬಂದಿದ್ದೇವೆ ಯಾರ ಬಳಿಯೂ ಒಂದು ಪೈಸೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ವಿ ಎಂದು ಅಂದಿನ ಪ್ರಸಂಗಗಳನ್ನು ಸ್ಮರಿಸಿಕೊಂಡರು

1998ರಲ್ಲಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಶರತ್ ಅವರನ್ನು ಆಹ್ವಾನ ಮಾಡಿದ್ವಿ. ರಾಜ್ಯದ ಎಲ್ಲ ಕಡೆಯಿಂದ 5 ಲಕ್ಷ ಜನ ಸೇರಿದ್ದರು. ಗುರು ಪೀಠಕ್ಕೆ ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿದ್ವಿ. ಎಷ್ಟು 40 ಲಕ್ಷನಾ ? 35 ಲಕ್ಷನಾ ? ಎಷ್ಟೋ ಬಿಡಿ. ಇದು ಕುರುಬರ ಮಠ ಅಲ್ಲ, ಎಲ್ಲ‌ ಶೋಷಿತ ವರ್ಗದವರ ಮಠ ಆಗಬೇಕೆಂದು ಪ್ರಾರಂಭ ಮಾಡಿದ್ದೆವು. ವಿಶ್ವನಾಥ್ ದು ಅವತ್ತು ಪ್ರಾಸ್ತಾವಿಕ ಭಾಷಣ ಇತ್ತು. ಅವರು ಭಾರೀ ಭಾಷಣ ಹೊಡೆದ್ರು. ನಿಮೆಗಲ್ಲ ಗೊತ್ತಿರಲಿ ಎಂದು ಇತಿಹಾಸ ಹೇಳುತ್ತಿದ್ದೇನೆ ಎಂದು ವೇದಿಕೆ ಮೇಲಿದ್ದವರಿಗೆ ಸಿಎಂ ಪಾಠ ಮಾಡಿದರು.

500ನೇ ಜಯಂತಿಯನ್ನ ಇಡೀ ವರ್ಷ ಆಚರಿಸಬೇಕೆಂದು ತೀರ್ಮಾನವಾಯ್ತು. ಆಗ ಮಲ್ಲಪ್ಪ ಎಂಬವರು ಕುರುಬ ಸಮಾಜದ ಅಧ್ಯಕ್ಷರಾಗಿದ್ದರು. ಎಲ್ಲ ಜಿಲ್ಲೆಗಳಲ್ಲೂ ಕನಕ ಜಯೋತ್ಸವ ಆಚರಣೆ ಮಾಡಲಾಯ್ತು. ಆಗ ಗುರುಪೀಠ ಮಾಡಿ ಎಂದು ಎಲ್ಲ ಜಿಲ್ಲೆಗಳಿಂದಲೂ ಬೇಡಿಕೆ ಇತ್ತು. ಮಂಗಳೂರು, ಉತ್ತರ ಕನ್ನಡ, ಉಡುಪಿ ಬಿಟ್ಟು ಎಲ್ಲ ಜಿಲ್ಲೆಗಳಿಗೂ ಹೋಗಿದ್ದೆ. ಎಲ್ಲರ ಕೂಗು ಒಂದೇ ಮಠ ಮಾಡಿ ಅನ್ನೋದು. ಸಾಮಾಜಿಕವಾಗಿ ಬೆಳೆಯಲು ಸಹಾಯಕ ಆಗುತ್ತೆ ಎಂದು ಮಠಕ್ಕೆ ಬೇಡಿಕೆ ಬಂದಿದ್ದವು ಎಂದು ಕಾಗಿನೆಲೆ ಗುರುಪೀಠ ನಿರ್ಮಾಣದ ಇತಿಹಾಸವನ್ನು ಬಿಚ್ಚಿಟ್ಟರು.

1930ರಲ್ಲೇ ಜಾತಿ ಗಣತಿ ಸ್ಟಾಪ್ ಮಾಡಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಜಾತಿಗಣತಿ ಆಗೇ ಇಲ್ಲ. ಸಮ್ಮಿಶ್ರ ಸರ್ಕಾರದಲದಲಿ ಪುಟ್ಟರಂಗಶೆಟ್ಟಿ ಹಿಂದೂಳಿದ ವರ್ಗದ ಮಂತ್ರಿ ಆಗಿದ್ದರು. ಆಗ ಸಿಎಂ ಆಗಿದ್ದ ಕುಮಾಸ್ವಾಮಿಯವರು ಆಗ ತಗೆದುಕೊಳ್ಳಬೇಡಿ ಎಂದು ವೇದಿಕೆ ಮೇಲೆ ಕುಳಿತಿದ್ದ ಜೆಡಿಎಸ್ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ್ ನ ನೋಡಿ ಹೇಳಿದ ಸಿದ್ದರಾಮಯ್ಯ, ನಾವು ತಗೊಂಡೇ ತೆಗೆದುಕೊಳ್ಳುತ್ತೇವೆ. ಬಜೆಟ್ ಮಂಡಿಸುವಾಗಿ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಗೊತ್ತಾಗಬೇಕು. ಕರ್ನಾಟಕದ ಜನಸಂಖ್ಯೆಯಲ್ಲಿ ನಾವು 7% ಇದ್ದೇವೆ. ಅಂದ್ರೆ 7 ಕೋಟಿ ಜನಸಂಖ್ಯೆಯಲ್ಲಿ 49 ಲಕ್ಷ ಕುರುಬರು ಇದ್ದೇವೆ. ಅದಕ್ಕೆ ನಾನು ಜಾತೀವಾರು ಸರ್ವೇ ಮಾಡಿಸುವುದಕ್ಕೆ ಕಾಂತರಾಜ್ ಅಧ್ಯಕ್ಷತೆ ಮೂಲಕ ತಿಳಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬೇಕು ಜಾತಿಗಣತೆ ಅಗತ್ಯ. ಜಯಪ್ರಕಾಶ್ ಹೆಗಡೆ ಅವರ ಜೊತೆ ಮಾತಾನಾಡಿ ಲೀಗಲ್ ಆಗಿ ಜಾತಿಗಣತಿ ಮಾಡುವಂತೆ ಹೇಳುತ್ತೇನೆ. ಯಾರೆಲ್ಲ ವಂಚಿತರಾಗಿದ್ದಾರೊ ಅವರಿಗೆಲ್ಲ ನ್ಯಾಯ ದೊರಕಬೇಕು ಎಂದರು.

ಎರಡನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಜನರ ಆಶೀರ್ವಾದ ಸಿಕ್ಕಿದ್ದು, ಐದು ಗ್ಯಾರೆಂಟಿ ಜೊತೆಗೆ ಬೇರೆ ಭರವಸೆಯನ್ನ ಕೊಟ್ಟಿದ್ದೇನೆ. ರಾಜಕೀಯಕ್ಕಾಗಿ ಕೆಲವರು ಟೀಕೆ ಮಾಡಬಹುದು. 2013ರಲ್ಲಿ 6 ಭರವಸೆಯನ್ನ ಈಡೇರಿಸಿದ್ದೆವೆ. 5 ಗ್ಯಾರೆಂಟಿಗಳನ್ನ ಈ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ. ಯಾರು ಏನೇ ಹೇಳಿದರೂ ಗ್ಯಾರೆಂಟಿ ಪೂರೈಕೆ ಬೇಕೇ ಬೇಕು. 50 ರಿಂದ 60 ಸಾವಿರ ಕೋಟಿ ರೂ. ಹಣ ಗ್ಯಾರೆಂಟಿಗೆ ಖರ್ಚಾಗುತ್ತದೆ. ನಾವು ಅಧಿಕಾರಕ್ಕೆ ಬಂದು ಇವತ್ತಿಗೆ 50 ದಿನ ಆಗಿದೆ. ಐದು ಗ್ಯಾರೆಂಟಿಗಳನ್ನ ಚಾಚು ತಪ್ಪದೇ ಈ ವರ್ಷ ಜಾರಿ ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಶಕ್ತಿ ಯೋಜನೆಯಿಂದ ಎಲ್ಲ ಹೆಣ್ಣುಮಕ್ಕಳು ಬಸ್​ಗಳಲ್ಲಿ ಓಡಾಡುತ್ತಿದ್ದಾರೆ. ಅನ್ನಭಾಗ್ಯ ವಿಳಂಬ ಆಯ್ತು, 5 ಕೆಜಿ ಅಕ್ಕಿ ಬದಲು ಹಣ ನೀಡಲು ಹೇಳಿದ್ದೇನೆ. ಕೇಂದ್ರ ಕೊಡಲಿಲ್ಲ. ಅದಕ್ಕೆ ಹಣ ಕೊಡಲು ಹೇಳಿದ್ದೇನೆ. ಆಗಸ್ಟ್ 16ರಿಂದ ‘ಗೃಹಲಕ್ಷ್ಮೀ’ ಯೋಜನೆ ಜಾರಿಯಾಗಲಿದೆ. ಪ್ರತಿ ಕುಟುಂಬದ ಮಹಿಳಾ ಯಜಮಾನಿ ಖಾತೆಗೆ ಹಣ ಹಾಕುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ. ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ನನ್ನ ಹೆಂಡ್ತಿ ಹೋಗ್ಬಹುದು, ಈಶ್ವರಪ್ಪ ಮನೆಯವರೂ ಹೋಗಬಹುದು ಎಂದು ನಗೆ ಚಟಾಕೆ ಹಾರಿಸಿದರು.