AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲಾ ಶಿಕ್ಷಕನಿಂದ 6 ಸಾವಿರಕ್ಕೆ ಬಾಡಿಗೆ ಶಿಕ್ಷಕಿ ನಿಯೋಜನೆ ಆರೋಪ; ಬಿಇಓಯಿಂದ ವಿಚಾರಣೆ

ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾತಿನಾಯಕ್ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಎಂಬುವವರು ಬಾಡಿಗೆ ಶಿಕ್ಷಕಿಯನ್ನ ನಿಯೋಜನೆ ಮಾಡಿರುವ ಆರೋಪ ಕೇಳಿಬಂದಿದೆ.

ಸರ್ಕಾರಿ ಶಾಲಾ ಶಿಕ್ಷಕನಿಂದ 6 ಸಾವಿರಕ್ಕೆ ಬಾಡಿಗೆ ಶಿಕ್ಷಕಿ ನಿಯೋಜನೆ ಆರೋಪ; ಬಿಇಓಯಿಂದ ವಿಚಾರಣೆ
ಶಿಕ್ಷಕ
ಸಂಜಯ್ಯಾ ಚಿಕ್ಕಮಠ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 11, 2023 | 2:45 PM

Share

ಕಲಬುರಗಿ: ಜಿಲ್ಲೆಯ ಚಿತ್ತಾಪುರ(Chitapur) ತಾಲೂಕಿನ ಭಾತಿನಾಯಕ್ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ(Government School)ಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಎಂಬುವವರು ಬಾಡಿಗೆ ಶಿಕ್ಷಕಿಯನ್ನ ನಿಯೋಜನೆ ಮಾಡಿರುವ ಆರೋಪ ಕೇಳಿಬಂದಿದೆ. ಡಿಗ್ರಿ ಮುಗಿದ ಮಹಿಳೆಗೆ ಪ್ರತಿ ತಿಂಗಳು ಆರು ಸಾವಿರ ನೀಡಿ ಕಳೆದ ಕೆಲ ತಿಂಗಳಿಂದ ಶಾಲೆಗೆ ಅನಧಿಕೃತವಾಗಿ ಮಹೇಂದ್ರ ಅವರು ಗೈರಾಗಿದ್ದು, ಆಗಾಗ ಶಾಲೆಗೆ ಬಂದು ಹಾಜರಿ ಹಾಕಿ ಹೋಗುತ್ತಿದ್ದರೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಆದ್ರೆ, ಶಿಕ್ಷಕ ಮಾತ್ರ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆಯುತ್ತಿದ್ದಾನೆ.

‘ನಾನು ಪ್ರತಿನಿತ್ಯ ಶಾಲೆಗೆ ಬರ್ತಿದ್ದೇನೆ. ಶಿಕ್ಷಣ ಪ್ರೇಮಿ ಯುವತಿಯೊಬ್ಬರು ಉಚಿತವಾಗಿ ಬಂದು ಆಗಾಗ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ನಾವು ಅವರಿಗೆ ಯಾವುದೇ ಹಣ ನೀಡಿ ನಿಯೋಜನೆ ಮಾಡಿಲ್ಲವೆಂದು ಶಿಕ್ಷಕ ಮಹೇಂದ್ರ ಅವರು ಹೇಳುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ತಾಪುರ ಬಿಇಓ ಸಿದ್ದವೀರಪ್ಪ ಅವರು ‘ಈ ಬಗ್ಗೆ ನಿನ್ನೆ(ಜು.10) ಶಾಲೆಗೆ ಭೇಟಿ ನೀಡಿ‌, ಯುವತಿಯನ್ನ ವಿಚಾರಣೆ ನಡೆಸಿದ್ದು, ಈ ವೇಳೆ ‘ತನಗೆ ಯಾರು ದುಡ್ಡು ಕೊಟ್ಟು ನಿಯೋಜನೆ ಮಾಡಿಲ್ಲ. ನಾನು ಹೋಗಿ ಬಂದು ಮಾಡೋದಕ್ಕೆ ಎಸ್ ಡಿ ಎಂ ಸಿ ಅಧ್ಯಕ್ಷರು ಆಟೋ ಚಾರ್ಜ್ ಕೊಡ್ತೇನೆಂದು ಹೇಳಿದ್ರು, ಶಿಕ್ಷಕ ಮಹೇಂದ್ರ ಅವರು ಹಣ ನೀಡಿ ನನಗೆ ನಿಯೋಜನೆ ಮಾಡಿಲ್ಲ ಎಂದು ಯುವತಿ ಹೇಳಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ:Viral Video: ವಿದ್ಯಾರ್ಥಿಯ ಡೆಸ್ಕ್​ವಾದನಕ್ಕೆ ಶಿಕ್ಷಕಿಯ ಜಾನಪದ ಹಾಡಿನ ಸಾಥ್!

ಸೂರ್ಯ ನಗರ 4ನೇ ಹಂತ ಮಾಡಲಾಗುತ್ತಿದೆಯೆಂದು ಸಂಸದರು, ಸಚಿವರ ಎದುರಲ್ಲೇ ರೈತರಿಂದ ಆಕ್ಷೇಪ

ಬೆಂಗಳೂರು ಗ್ರಾಮಾಂತರ: ರೈತರನ್ನು ಕಡೆಗಣಿಸಿ ಸೂರ್ಯ ನಗರ 4ನೇ ಹಂತ ಮಾಡಲಾಗುತ್ತಿದೆ ಎಂದು ರೈತರು ಗಲಾಟೆ ಮಾಡಿದ್ದಾರೆ. ಆನೇಕಲ್​ನ ಇಂಡ್ಲವಾಡಿ ಬಳಿ ಆಯೋಜಿಸಿದ ಸಭೆಯಲ್ಲಿ ರೈತರು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಇನ್ನು ಈ ಗಲಾಟೆ ಸಂಸದರು ಹಾಗೂ ಸಚಿವರ ಎದುರಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇತ್ತ ರೈತರು ಗಲಾಟೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು ಕಾರು ಹತ್ತಿ ಹೊರಟು ಹೋಗಿದ್ದಾರೆ. ಸಂಸದ ಡಿಕೆ ಸುರೇಶ್, ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ಬಿ ಶಿವಣ್ಣ ನೇತೃತ್ವದಲ್ಲಿ ಸಭೆಯನ್ನ ಆಯೋಜಿಸಲಾಗಿತ್ತು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ