PM Modi Statue: ಕಲಬುರಗಿಯ ಕಲಾವಿದನ ಕೈಚಳಕದಲ್ಲಿ ಅರಳಿದ ಪ್ರಧಾನಿ ಮೋದಿ ಪ್ರತಿಮೆ: ಅವರಿಗೆ ತಲುಪಿಸುವಂತೆ ಮನವಿ
ಪ್ರಧಾನಿ ನರೇಂದ್ರ ಮೋದಿ ನಾಳೆ (ಜ. 19) ಕಲಬುರಗಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರಿಗೆ ನೀಡಲು ತಮ್ಮದೇ ಸ್ವಂತ ಪ್ರತಿಮೆಗಳನ್ನು ಜಿಲ್ಲೆಯ ಕಲಾವಿದರೊಬ್ಬರು ನಿರ್ಮಿಸಿದ್ದು, ಮೋದಿ ಅವರಿಗೆ ನೀಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಕ್ಕೆ ಎರಡೆರೆಡು ಬಾರಿ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸಿ ಚಾಲನೆ ನೀಡಿದ್ದರು. ಇನ್ನು ನಾಳೆ( ಜ.19) ಕಲಬುರಗಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ನರೇಂದ್ರ ಮೋದಿ ಅವರು ಎರಡು ಜಿಲ್ಲೆಗಳಲ್ಲಿ ಸುಮಾರು 10,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲೆಗೆ ಪ್ರಧಾನಿ ಆಗಮಿಸುತ್ತಿದ್ದಾರೆ ಎಂದ ಮೇಲೆ ಕಾರ್ಯಕರ್ತರಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಕುತೂಹಲವಿರುತ್ತದೆ. ಅದೇ ರೀತಿಯಾಗಿ ಕಲಬುರಗಿಯ ಕಲಾವಿದರೊಬ್ಬರು ಮೋದಿ ಅವರ ವಿಶಿಷ್ಟ ಮತ್ತು ವಿವಿಧ ಭಂಗಿಯ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.
ಕಳೆದ 30 ವರ್ಷಗಳಿಂದ ಕಲಾ ಶಿಲ್ಪ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕಲಬುರಗಿ ನಗರದ ನಿವಾಸಿ ವಿಶ್ವೇಶ್ವರಯ್ಯ ಅವರು ಪ್ರಧಾನಿ ಮೋದಿ ಅವರ ಪ್ರತಿಮೆಗಳನ್ನು ನಿರ್ಮಿಸಿರುವ ಕಲಾವಿದ. ಅವರು ಭಾರತದ ಲಾಂಛನ, ಮಹಾತ್ಮ ಗಾಂಧಿ ಮತ್ತು ಬಸವೇಶ್ವರ ಸೇರಿದಂತೆ ನೂರಾರು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಬಳಸುತ್ತಿದ್ದ “ಹರ ಹರ ಮೋದಿ, ಘರಾ, ಘರಾ ಮೋದಿ” ಎಂಬ ಘೋಷಣೆಯಿಂದ ಕಲಾವಿದ ವಿಶ್ವೇಶ್ವರಯ್ಯ ಪ್ರಭಾವಿತಗೊಂಡಿದ್ದಾರೆ.
@narendramodi Dear Sir/Madam, On 19th January 2023, our Honourable Prime Minister Shri Narendra Modi ji will be visiting to attend an event in KALABURAGI. Hence I hereby humbly request you to give an opportunity to present his own replica made of p pic.twitter.com/S6c3WabbU9
— Vishweshwarayya Bhovi (@VNaindrakar) January 14, 2023
ಹಾಗಾಗಿ ಪ್ರಧಾನಿ ಮೋದಿ ಅವರ ವಿವಿಧ ಭಂಗಿಯ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಇನ್ನು ಇದನ್ನು ಮೋದಿ ಅವರಿಗೆ ತಲುಪಿಸಬೇಕು ಎನ್ನುವಾಗ ಜಿಲ್ಲಾಡಳಿತ ಇವರಿಗೆ ಅಡ್ಡಿ ಮಾಡಿದೆ. ಹಾಗಾಗಿ ಅವರು ಒಂದು ತಿರುಗುವ ಚಕ್ರದ ಮೇಲೆ ತಾವು ನಿರ್ಮಿಸಿದ ಎಲ್ಲಾ ಪ್ರತಿಮೆಗಳನ್ನು ಇಟ್ಟು ಒಂದು ಸಣ್ಣ ವಿಡಿಯೋವನ್ನು ಮಾಡಿ, ಜೊತೆಗೆ ಮೋದಿಗೆ ಟ್ಯಾಗ್ ಮಾಡಿ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ಕುರಿತು ಕಲಾವಿರಾದ ವಿಶ್ವೇಶ್ವರಯ್ಯ ಅವರು ಇಂಡಿಯಾಟುಡೇ ವೆಬ್ಸೈಟ್ ಜತೆ ಮಾತನಾಡಿದ್ದು, ಐದು ಜಿಲ್ಲೆಗಳ ತಾಂಡಾಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19ರಂದು ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ನಾನು ಪ್ರತಿಮೆಯನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಆದರೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜ.19 ರಂದು ಕರ್ನಾಟಕಕ್ಕೆ ಮೋದಿ: 10,800 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿರುವ ಪ್ರಧಾನಿ
ಕಲಾವಿದ ವಿಶ್ವೇಶ್ವರಯ್ಯ ಅವರು ತಮ್ಮ ಟ್ಟಿಟರ್ನಲ್ಲಿ ಜನವರಿ 19, 2023 ರಂದು, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭೇಟಿ ನೀಡಲಿದ್ದಾರೆ. ಆದ್ದರಿಂದ ಅವರ ಸ್ವಂತ ಪ್ರತಿಕೃತಿಯನ್ನು ಪ್ರಸ್ತುತಪಡಿಸಲು ಅವಕಾಶವನ್ನು ನೀಡಬೇಕೆಂದು ನಾನು ಈ ಮೂಲಕ ವಿನಮ್ರವಾಗಿ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಇಂಡಿಯಾಟುಡೇ ವರದಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:14 pm, Wed, 18 January 23