ಪಿಎಸ್‌ಐ ನೇಮಕಾತಿ ಅಕ್ರಮ: ಬಂಧಿತ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದ

ಪಿಎಸ್‌ಐ ನೇಮಕಾತಿ ಅಕ್ರಮ: ಬಂಧಿತ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದ
ಸಾಂದರ್ಭಿಕ ಚಿತ್ರ

ಆನಂದ್ ಜಿಲ್ಲೆಯ ಕೆಲ ಠಾಣೆಗಳಿಗೆ ತನಗೆ ಬೇಕಾದವರಿಗೆ ಪೋಸ್ಟಿಂಗ್ ಕೊಡಿಸುತ್ತಿದ್ದರು. ಹಣ ನೀಡಿದ್ರೆ ಬೇಕಾದ ಸ್ಥಳಕ್ಕೆ ಪೋಸ್ಟಿಂಗ್ ಕೊಡಿಸುತ್ತಿದ್ದರು. ಕೆಲ ರಾಜಕಾರಣಿಗಳ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಆನಂದ್ ಅನೇಕ ಶಾಸಕರು ನನ್ನ ಸಂಬಂಧಿಗಳು, ಆತ್ಮೀಯರು ಅಂತ ಹೇಳಿಕೊಂಡಿದ್ದರು.

TV9kannada Web Team

| Edited By: Ayesha Banu

May 06, 2022 | 8:03 AM

ಕಲಬುರಗಿ: 545 ಪಿಎಸ್‌ಐಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ(PSI Recruitment Scam) ಪ್ರಕರಣ ದಿನೇ ದಿನೇ ಒಬ್ಬಬ್ಬರ ಜಾತಕವನ್ನೇ ಬಯಲು ಮಾಡುತ್ತಿದೆ. ಎರಡನೇ ಬಾರಿ ಮತ್ತೆ ಪಿಎಸ್ಐ ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಮೊದಲ ಹಂತದಲ್ಲಿ 39 ಅಭ್ಯರ್ಥಿಗಳಿಗೆ ಮತ್ತೆ ವಿಚಾರಣೆಗೆ ನೋಟಿಸ್ ನೀಡಲಾಗಿತ್ತು. ಎರಡನೇ ಪೇಪರ್ ಅಲ್ಲಿ 125ಕ್ಕಿಂತ ಹೆಚ್ಚು ಅಂಕ ಯಾರೆಲ್ಲಾ ಗಳಿಸಿದ್ದಾರೆ ಅವರನ್ನೆಲ್ಲಾ ಮತ್ತೆ ವಿಚಾರಣೆಗೆ ಸಿಐಡಿ ಕರೆದಿದೆ. 39 ಅಭ್ಯರ್ಥಿಗಳು ಎರಡನೇ ಬಾರಿಗೆ ವಿಚಾರಣೆ ಎದುರಿಸಬೇಕಿದೆ.

PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿಸಿದ್ದ ಆನಂದ್ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ‌ ತಾಲೂಕಿನವರಾದ ಬಂಧಿತ ಬೆರಳಚ್ಚು ವಿಭಾಗದ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಪರಿಚಿತರ ಹೆಸರಲ್ಲಿ ಅಪಾರ ಜಮೀನು ಖರೀದಿಸಿರುವ ಶಂಕೆ ಹಿನ್ನೆಲೆ ನಿನ್ನೆ ಸಿಐಡಿ ಅಧಿಕಾರಿಗಳು ಸಿಪಿಐ ಆನಂದ್‌ನನ್ನು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಒಂದು ಕೋಟಿ 25 ಲಕ್ಷ ರೂಪಾಯಿ ನೀಡಿ ಆನಂದ್ ಜಮೀನು ಖರೀದಿ ಮಾಡಿದ್ದಾರೆ. ಅಕ್ರಮವಾಗಿ ಬಂದ ಹಣದಲ್ಲಿ ಜಮೀನು ಖರೀದಿಸಿರುವ ಶಂಕೆ ವ್ಯಕ್ತವಾಗಿದೆ. ತನ್ನ ಹೆಸರಲ್ಲಿ ಜಮೀನು ಖರೀದಿಸಿದರೆ ತೊಂದರೆ ಆಗುತ್ತೆಂದು ಪರಿಚಿತರ ಹೆಸರಿನಲ್ಲಿ ಸಿಪಿಐ ಆನಂದ್ ಭೂಮಿ ಖರೀದಿಸಿದ್ದಾರೆ.

ಇನ್ನು ಆನಂದ್ ಜಿಲ್ಲೆಯ ಕೆಲ ಠಾಣೆಗಳಿಗೆ ತನಗೆ ಬೇಕಾದವರಿಗೆ ಪೋಸ್ಟಿಂಗ್ ಕೊಡಿಸುತ್ತಿದ್ದರು. ಹಣ ನೀಡಿದ್ರೆ ಬೇಕಾದ ಸ್ಥಳಕ್ಕೆ ಪೋಸ್ಟಿಂಗ್ ಕೊಡಿಸುತ್ತಿದ್ದರು. ಕೆಲ ರಾಜಕಾರಣಿಗಳ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಆನಂದ್ ಅನೇಕ ಶಾಸಕರು ನನ್ನ ಸಂಬಂಧಿಗಳು, ಆತ್ಮೀಯರು ಅಂತ ಹೇಳಿಕೊಂಡಿದ್ದರು. ಅಫಜಲಪುರದಲ್ಲಿ ಹವಾ ಮೆಂಟೇನ್ ಮಾಡಿದ್ದರು. ವರ್ಗಾವಣೆ ದಂಧೆಯಲ್ಲಿ ಬಂಧಿತ ಸಿಪಿಐ ಆನಂದ್ ನಿಸ್ಸೀಮ.

ಬೆಂಗಳೂರಲ್ಲಿ ನಡೆದ ಅಕ್ರಮದಲ್ಲಿ ಇಬ್ಬರು ಸಹೋದರರು ಭಾಗಿ ಬೆಂಗಳೂರಲ್ಲಿ ನಡೆದ ಪಿಎಸ್ಐ ಅಕ್ರಮದಲ್ಲಿ ಕಗ್ಗಲೀಪುರ ಬಳಿಯ ಚಿನ್ನಕುರ್ತಿ ಗ್ರಾಮದ ಇಬ್ಬರು ಸಹೋದರರು ಭಾಗಿಯಾಗಿದ್ದಾರೆ. ಸಿ.ಎಂ.ನಾರಾಯಣ, ಸಿ.ಎಂ.ನಾಗರಾಜ ವಿರುದ್ಧ FIR ದಾಖಲಾಗಿದೆ. ಸಿಐಡಿ ತನಿಖೆ ವೇಳೆ ಸಿ.ಎಂ.ನಾರಾಯಣನ ಅಕ್ರಮ ಬೆಳಕಿಗೆ ಬಂದಿದೆ. FSL ವರದಿಯಲ್ಲಿ OMR ಶೀಟ್ & ಕಾರ್ಬನ್ ಶೀಟ್ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಪರೀಕ್ಷಾ ಅಕ್ರಮದಲ್ಲಿ ಸಿ.ಎಂ.ನಾರಾಯಣ 12ನೇ ಆರೋಪಿ. ಸಿ.ಎಂ.ನಾಗರಾಜನ ಮೇಲೂ OMR ಶೀಟ್ ತಿದ್ದಿದ ಆರೋಪವಿದೆ. ಪರೀಕ್ಷಾ ಅಕ್ರಮದಲ್ಲಿ ಸಿ.ಎಂ.ನಾಗರಾಜ 21ನೇ ಆರೋಪಿ. ಪ್ರಕರಣ ದಾಖಲಿಸಿಕೊಂಡು ಸಿಐಡಿ ತನಿಖೆ ಕೈಗೊಂಡಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪಿಎಸ್​ಐ ಅಕ್ರಮದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸರ್ಕಾರಿ ಅತಿಥಿಗೃಹ ಬಿಟ್ಟು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ ಆರಗ ಜ್ಞಾನೇಂದ್ರ ರಾತ್ರಿ 1 ಗಂಟೆಗೆ ಕಲಬುರಗಿಗೆ ಆಗಮಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಸರ್ಕಾರಿ ಅತಿಥಿಗೃಹ ಬಿಟ್ಟು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮೊದಲು ಸಚಿವರ ವಾಸ್ತವ್ಯಕ್ಕೆ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಒಂದು ಗಂಟೆಗೆ ಕಲಬುರಗಿ ನಗರಕ್ಕೆ ಆಗಮಿಸಿದ ಸಚಿವ ಆರಗ ಐವಾನ್ ಶಾಹಿ ಬದಲು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಏಕೆಂದರೆ ಐವಾನ್ ಇ ಶಾಹಿ ಅತಿಥಿ ಗೃಹದ ಆವರಣದಲ್ಲಿ ಸಿಐಡಿ ತಾತ್ಕಾಲಿಕ ಕಚೇರಿ ಇದೆ. ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ ಅನ್ನೋ ಆರೋಪ ಬರೋ ಸಾಧ್ಯತೆ ಹಿನ್ನೆಲೆ ದಿಡೀರನೆ ತಮ್ಮ ವಾಸ್ತವ್ಯದ ಸ್ಥಳ ಬದಲಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇನ್ನು ಮತ್ತೊಂದು ಕಡೆ ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಕಾಂಗ್ರೆಸ್ ಮುಖಂಡರು ಅಶ್ವತ್ಥ್‌ನಾರಾಯಣ ಹೆಸರು ಪ್ರಸ್ತಾಪ ಮಾಡಿದ ಹಿನ್ನೆಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಚುನಾವಣಾ ವರ್ಷದ ಕಾರಣಕ್ಕೆ ಆಡಳಿತ ಪಕ್ಷ ಬಿಜೆಪಿ ಎಚ್ಚರಿಕೆಯಿಂದ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಕಾಂಗ್ರೆಸ್ ಆರೋಪ ಸುಳ್ಳು‌ ಎಂದು ಬಿಂಬಿಸಲು ತೀರ್ಮಾನಿಸಿದೆ. ದಾಖಲೆ ಬಿಡುಗಡೆಗೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಹಿಟ್ ಅಂಡ್ ರನ್ ಕೇಸ್ ಎಂದು ತೋರಿಸುವುದು. ಸಚಿವರುಗಳ ಮೂಲ‌ಕ ತಿರುಗೇಟು ಕೊಡಿಸಿ ಕಾಂಗ್ರೆಸ್ ಬಾಯಿ ಮುಚ್ಚಿಸುವುದು. ಹಿಂದಿ‌ನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಗೆ ತಿರುಗೇಟು ನೀಡುವುದು. ಅಶ್ವಥ್ ನಾರಾಯಣ ವಿರುದ್ಧದ ಆರೋಪ‌ ರಾಮನಗರ ರಾಜಕೀಯದ ಭಾಗ ಎಂದು ಬಿಂಬಿಸುವುದು. ಅಶ್ವಥ್ ನಾರಾಯಣ ವಿರುದ್ಧದ ಆರೋಪವನ್ನು ನಿರಾಕರಿಸಲು‌ ಬಿಜೆಪಿ‌ ಸಚಿವರ ಪಡೆ ನಿನ್ನೆಯೇ ಸಾಲು ಸಾಲು ಸುದ್ದಿಗೋಷ್ಠಿ ಮಾಡಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ. ಮುನಿರತ್ನ, ಸೋಮಣ್ಣ, ಎಸ್‌.ಟಿ.ಸೋಮಶೇಖರ್, ಸೇರಿದಂತೆ ಹಲವು ಸಚಿವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅಲ್ಲದೆ ಆರ್.ಅಶೋಕ್ ಸಹ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಶ್ವಥ್ ನಾರಾಯಣ ವಿರುದ್ದ ಕಾಂಗ್ರೆಸ್ ಪ್ಲಾನ್ ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಪಿಎಸ್ಐ ಹಗರಣದ ಜೊತೆ ಸಹಾಯಕ ಪ್ರಾಧ್ಯಾಪಕ ಕೇಸ್ಗೂ ಪುಷ್ಠಿ ಸಿಕ್ಕಿದೆ. ಸರ್ಕಾರದ ಲೋಪಗಳನ್ನ ಜನರ ಮುಂದಿಡಲು ಕಾಂಗ್ರೆಸ್ ನಿರ್ಧರಿಸಿದೆ. ಪ್ರಕರಣದ ಬಗ್ಗೆ ಕಾನೂನು ತಜ್ಞರಿಂದ ಸಲಹೆ ಪಡೆದು ಪೊಲೀಸ್ ನೋಟಿಸ್ ಮುಂದಿಟ್ಟು ರಾಜಕೀಯ ಮಾಡಲಿದೆ. ಮೂರು ಭಾರಿ ನೋಟಿಸ್ ನೀಡಿದ್ರೂ ಪ್ರಿಯಾಂಕ್ ವಿಚಾರಣೆಗೆ ಹಾಜರ್ ಆಗಿಲ್ಲ. ನೋಟಿಸ್‌ಗೆ ಕಾನೂನು ತಜ್ಙರ ಜೊತೆ ಚರ್ಚಿಸಿ ಮುಂದಿನ‌ ನಡೆ ಇಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

<iframe width=”642″ height=”361″ src=”https://www.youtube.com/embed/LTL8KRPMPfM” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture” allowfullscreen></iframe>

Follow us on

Related Stories

Most Read Stories

Click on your DTH Provider to Add TV9 Kannada