ಕಲಬುರಗಿಯಲ್ಲಿ ನಿಗೂಢ ಸದ್ದು, ಭೂಮಿ ಕಂಪಿಸಿದ ಅನುಭವ; ಮನೆಯಿಂದ ಆಚೆಗೆ ಓಡಿದ ಜನ
ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಭೂ ಕಂಪನ ಅನುಭವ ಆಗಿದ್ದು, ಜನರು ಲಘು ಭೂಕಂಪನ ಆಗಿದೆ ಎಂದೇ ಭಾವಿಸಿದ್ದಾರೆ. ಆದರೆ, ಗಡಿಕೇಶ್ವರದಲ್ಲಿ ಭಾರೀ ಸದ್ದು ಕೇಳಿ ಬಂದಿದ್ದರೆ, ಸೇಡಂ ಪಟ್ಟಣದ ಕೆಲವೆಡೆ ಕೂಡಾ ಲಘು ಭೂಕಂಪನದ ಅನುಭವ ಆಗಿದೆ.
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ಒಳಗಿಂದ ಭಾರೀ ಸದ್ದು ಕೇಳಿಬಂದಿದ್ದು ಜನರು ಆತಂಕಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ 2 ಬಾರಿ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಭಾರೀ ಸದ್ದಿನಿಂದಾಗಿ ಜನರು ಬೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಸದ್ದು ಕೇಳಿದೆ. ಗಡಿಕೇಶ್ವರದಲ್ಲಿ ಬೆಳಗ್ಗೆ ಕೂಡ ಭಾರೀ ಶಬ್ದ ಕೇಳಿ ಬಂದಿದ್ದು, ಕೆಲವೆಡೆ ಭೂಕಂಪನದ ಅನುಭವವೂ ಆಗಿದೆ.
ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಭೂ ಕಂಪನ ಅನುಭವ ಆಗಿದ್ದು, ಜನರು ಲಘು ಭೂಕಂಪನ ಆಗಿದೆ ಎಂದೇ ಭಾವಿಸಿದ್ದಾರೆ. ಆದರೆ, ಗಡಿಕೇಶ್ವರದಲ್ಲಿ ಭಾರೀ ಸದ್ದು ಕೇಳಿ ಬಂದಿದ್ದರೆ, ಸೇಡಂ ಪಟ್ಟಣದ ಕೆಲವೆಡೆ ಕೂಡಾ ಲಘು ಭೂಕಂಪನದ ಅನುಭವ ಆಗಿದೆ.
ಭೂಮಿಯಿಂದ ಸದ್ದು ಬರುತ್ತಿದ್ದಂತೆಯೇ ಜನರು ಹೆದರಿ ಹೊರಗೆ ಓಡಿ ಬಂದಿದ್ದು, ಏನೋ ಸ್ಫೋಟಿಸುತ್ತಿದೆ ಎಂದು ಕೆಲವರು ಭಾವಿಸಿದ್ದಾರೆ. ಭೂಕಂಪ, ಸ್ಫೋಟ ಹೀಗೆ ಯಾವ ಕಾರಣವೆಂದು ನಿಖರವಾಗಿ ತಿಳಿದು ಬರದ ಕಾರಣ ಎಲ್ಲರೂ ಆತಂಕಿತರಾಗಿದ್ದು, ಇತ್ತೀಚೆಗೆ ಅಲ್ಲಲ್ಲಿ ಇಂತಹ ಸದ್ದು ಮರುಕಳಿಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Earthquake of Magnitude:3.9, Occurred on 20-08-2021, 19:30:18 IST, Lat: 17.30 & Long: 77.54, Depth: 27 Km ,Location: Vikarabad, Telangana For more information download the BhooKamp App https://t.co/nVQsXOeKpi@ndmaindia @Indiametdept pic.twitter.com/LRPFJGT8sl
— National Center for Seismology (@NCS_Earthquake) August 20, 2021
ಗ್ರಾಮಸ್ಥರು ಹೇಳುವಂತೆ ಸಂಜೆ 7 ಗಂಟೆ ಸುಮಾರಿಗೆ ಎರಡೆರೆಡು ಭಾರೀ ಸ್ಫೋಟದ ರೀತಿಯ ಸದ್ದು ಕೇಳಿದೆ. ಕೆಲವರಿಗೆ ಭೂಮಿ ಕಂಪಿಸುತ್ತಿದೆ ಎಂದೆನಿಸಿದ ಕಾರಣ ಮನೆಗಳಿಂದ ತಕ್ಷಣವೇ ಹೊರಗೆ ಓಡೋಡಿ ಬಂದಿದ್ದಾರೆ. ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ನೆರೆಯ ತೆಲಂಗಾಣದ ವಿಕಾರಬಾದ್‌ನಲ್ಲಿ ಲಘು ಭೂಕಂಪನ ಆಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.9ರಷ್ಟು ದಾಖಲಾಗಿದೆ. ತೆಲಂಗಾಣದ ವಿಕಾರಬಾದ್‌ನಲ್ಲಿ ಲಘು ಭೂಕಂಪನ ಹಿನ್ನೆಲೆ, ಕಲಬುರಗಿ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನದ ಅನುಭವ ಆಗಿದೆ ಎನ್ನಲಾಗಿದ್ದು, ಜಿಲ್ಲೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಫೋಟದ ಸದ್ದು, ಕಿಟಕಿ, ಬಾಗಿಲು ಅಲುಗಾಡಿದ ಅನುಭವ; ಕಾರಣ ನಿಗೂಢ!
ಜಮ್ಮು-ಕಾಶ್ಮೀರದಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲು
(Secret sound in Kalaburagi makes people scared some doubts it is earthquake)
Published On - 8:33 pm, Fri, 20 August 21