ಆತ ಹಬ್ಬಕ್ಕೆಂದು ಹೆಂಡತಿ ಮನೆಗೆ ಬಂದಿದ್ದ. ಹೆಂಡತಿ ತವರು ಮನೆಯಲ್ಲೆ ದಸರಾ ಹಬ್ಬವನ್ನ ಕೂಡಾ ಮಾಡಿದ್ದ.ಇನ್ನೇನು ಹಬ್ಬ ಮುಗಿದು ಹೆಂಡತಿ ಕರೆದುಕೊಂಡು ಹೋಗಬೇಕೆಂದಿದ್ದ ಆತ, ಮಾವನನ್ನೆ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಹಾಗಿದ್ರೆ ಅಲ್ಲಾಗಿದ್ದೇನು ಅಂತೀರಾ ನೀವೆ ನೋಡಿ. ತಂದೆಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರೋ ಮಕ್ಕಳು.. ಭೀಕರ ಕೊಲೆಯಿಂದ ಬೆಚ್ಚಿ ಬಿದ್ದಿರೋ ಗ್ರಾಮಸ್ಥರು. ಮಾವ ಮತ್ತು ಅಳಿಯನ ದಾರುಣ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ…ಯಸ್ ಇಂತದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ.
ಇಲ್ಲಿ ಅಳಿನಿಂದಲೇ ಕೊಲೆಯಾಗಿರೋ ಮಾವನ ಹೆಸರು ಈರಪ್ಪ ಕೊಡ್ಲಿ ಅಂತ. ಈ ಈರಪ್ಪನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಒಬ್ಬಳೇ ಮಗಳಿದ್ದಳು.ಕಳೆದ ಆರು ತಿಂಗಳ ಹಿಂದೆ ಸೋಲಾಪುರ ಮೂಲದ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಮದುವೆಯಾದ ಹೊತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮದುವೆಯಾಗಿ ಎರಡೂ ತಿಂಗಳು ಪತ್ನಿಯೊಂದಿಗೆ ಚೆನ್ನಾಗಿದ್ದ ರಾಜು. ಆಮೇಲೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡೋಕೆ ಶುರು ಮಾಡಿದ್ದ. ಅಲ್ಲದೇ ಪತ್ನಿಯ ಮೇಲೆ ದೈಹಿಕ ಹಲ್ಲೆ ಮಾಡಿ ಕಿರುಕುಳ ನೀಡ್ತಿದ್ದ.
ಇದ್ರಿಂದ ಬೇಸತ್ತ ಪತ್ನಿ ಕಳೆದು ಹಲವು ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು. ಪತ್ನಿಯನ್ನ ತನ್ನ ಮನೆಗೆ ಕಳಿಸಿಕೊಡಿ ಅಂತ ರಾಜು ಹಲವು ಭಾರಿ ಹೇಳಿದ್ರು, ಮಾವ ಈರಪ್ಪ ಮಾತ್ರ ಮಗಳನ್ನ ಕಳಿಸಿರಲಿಲ್ಲ.ಹಿಗಾಗೇ ದಸಾರ ಹಬ್ಬದ ನೆಪ ಮಾಡಿಕೊಂಡು ಚಿಂಚೋಳಿ ಚಿಂತಪಳ್ಳಿ ಗ್ರಾಮಕ್ಕೆ ಬಂದಿದ್ದ. ಪತ್ನಿ ಕುಟುಂಬದೊಂದಿಗೆ ಹಬ್ಬವೂ ಮಾಡಿದ್ದ.
ಆದ್ರೆ ನಿನ್ನೆ ಮಾವನ ಜೊತೆ ಜಮೀನಿಗೆ ಹೋಗಿದ್ದ,ಆದ್ರೆ ಅಲ್ಲಾನೇಯ್ತೋ ಗೊತ್ತಿಲ್ಲ.ಹೆಣ್ಣು ಕೊಟ್ಟ ಮಾವನನ್ನೆ ಕಲ್ಲನಿಂದ ಜಜ್ಜಿಕೊಲೆ ಮಾಡಿ ಬಿಟ್ಟಿದ್ದ. ಬಳಿಕ ಎಲ್ಲಿ ಗ್ರಾಮಸ್ಥರು ಇನ್ನು ತನ್ನನ್ನ ಸುಮ್ಮನೆ ಬಿಡೋದಿಲ್ಲ ಅಂತ ತಾನು ವಿದ್ಯುತ್ ಕಂಬವೇರಿ ಹೈಟೆನ್ಯನ್ ವೈರ್ ಹಿಡಿದು ತಾನು ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ:ಇಬ್ಬರು ಮಕ್ಕಳು ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ: 6 ವರ್ಷದ ಬಾಲಕಿಗೆ ಗಂಭೀರ ಗಾಯ
ಇನ್ನು ಮೊದಲು ಮನೆಯಲ್ಲಿ ಪತ್ನಿಯನ್ನ ಊರಿಗೆ ಹೋಗೊಣ ಬಾ ಅಂತ ಕರೆದಿದ್ದಾನೆ. ಪತ್ನಿ ಮಾತ್ರ ಸುತಾರಂ ಒಪ್ಪಿಲ್ಲ. ಹೀಗಾಗೇ ಪತ್ನಿಯ ಮೇಲೆ ಹಲ್ಲೆ ಮಾಡಿ, ಜಮೀನಿಗೆ ತೆರಳಿದ್ದ. ಅಲ್ಲಿ ಮಾವನ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ, ರಾಜು ಭರ್ತಿ ಕುಡಿದ್ದ ಅನ್ನಿಸುತ್ತೆ. ಈ ವೇಳೆ ಪತ್ನಿ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.
ರಾಜು ಪತ್ನಿಯನ್ನ ಕಳಿಸುವಂತೆ ಮಾವನಿಗೆ ಹೇಳಿದ್ದಾನೆ. ಅದ್ರೆ ನೀನು ಮಗಳ ಮೇಲೆ ಹಲ್ಲೆ ಮಾಡ್ತಿಯಾ ಅಂತ ಹೇಳಿದ್ದಾನೆ.ಅಷ್ಟೆ ಇಬ್ಬರ ಮಧ್ಯೆ ಜಗಳ ಶುರುವಾಗಿ, ಅಲ್ಲೇ ಇದ್ದ ಕಲ್ಲನ್ನ ಎತ್ತಿ ಹಾಕಿ ಮಾವನನ್ನ ಕೊಂದೇ ಬಿಟ್ಟಿದ್ದಾನೆ. ಸಧ್ಯ ಮಾವ ಅಳಿಯ ಇಬ್ಬರೂ ಮಸಣ ಸೇರಿದ್ದಾರೆ. ಅತ್ತ ಅಳಿಯ ಉಪಟಳಕ್ಕೆ ಮನೆಯ ಯಜಮಾನನ್ನು ಕಳೆದುಕೊಂಡಿದ್ದಲ್ಲದೇ, ಸಹೋದರಿಯ ಬದುಕು ಹಾಳಾಗಿ ಹೋಯ್ತಿಲ್ಲ ಎನ್ನೋ ನೋವು ಮನೆಯವರದ್ದು.
ಒಟ್ನಲ್ಲಿ ಕೂಲಿ ನಾಲಿ ಮಕ್ಕಳನ್ನ ಸಾಕಿದ್ದ, ಈರಪ್ಪ ಈಗಲೂ ಬೇರೊಬ್ಬರ ಜಮೀನು ಕಾಯೋ ಕೆಲಸ ಮಾಡ್ತಿದ್ದ, ಕಡುಬಡತನದಲ್ಲೇ ಮಕ್ಕಳ ಸಾಕಿದ್ದ ಈರಪ್ಪ ಅಳಿಯನಿಂದಲೇ ಕೊಲೆಯಾಗಿ ಹೋಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರೋ ಸುಲೇಪೇಟ್ ಪೊಲೀಸರು ತನಿಖೆ ಶುರು ಮಾಡಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೆ ಕೊಲೆಗೆ ಹೆಂಡತಿ ಮನೆಗೆ ಬರದೇ ಇರೋದು ಕಾರಣವೋ ಅಥವಾ ಬೇರೆ ಏನಾದ್ರು ಕಾರಣವಿತ್ತಾ ಎನ್ನೋ ಸತ್ಯ ಬಯಲಾಗಲಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Wed, 1 November 23