ಕಲಬುರಗಿ, ಫೆ.24: ಕಲಬುರಗಿಯಲ್ಲಿ ಬಿಜೆಪಿ ಮಾಜಿ ಶಾಸಕ ರಾಜುಗೌಡ (Rajugowda) ಅವರು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆ ಯಾವ ಖಾತೆ ಸಚಿವ ಗೊತ್ತಿಲ್ಲ. ನನ್ನ ಎದುರು ಯಾರೂ ಇಲ್ಲ ಅನ್ನೋದು ತಲೆಯಲ್ಲಿ ತುಂಬಿದೆ. ಎಲ್ಲದರಲ್ಲೂ ಅಡ್ಡಡ್ಡ ಬರೋದು ಅವರಿಗೆ ರೂಢಿಯಾಗಿದೆ ಎಂದರು.
ಪದೇಪದೆ ಹಿಂದೂಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಾರೆ. ಇವರಿಗೆ ಏನು ಗೋಲ್ಡ್ ಮೆಡಲ್ ಕೊಡುತ್ತಾರಾ ಎಂದು ಆಕ್ರೋಶ ಹೊರಹಾಕಿದ ರಾಜುಗೌಡ, ಬಿಜೆಪಿ, ಆರ್ಎಸ್ಎಸ್ಗೆ ನನ್ನ ಹೆಣನೂ ಹೋಗುವುದಿಲ್ಲವೆಂದು ಹೇಳಿದ್ದಾರೆ. ಬಿಜೆಪಿಯಲ್ಲಿ ನಾನೊಬ್ಬನೇ ಉಳಿದರೂ ನಿನ್ನ ಬಿಜೆಪಿಗೆ ಸೇರಿಸಿಕೊಳ್ಳಲ್ಲ. ಬಿಜೆಪಿ ರಾಮಭಕ್ತರ ಪಕ್ಷ, ಪ್ರಿಯಾಂಕ್ ಬಿಜೆಪಿಗೆ ಬರುವುದು ಬೇಡ. ಈ ಬಾರಿ ಪ್ರಿಯಾಂಕ್ ಅವರಿಂದಲೇ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಬಿಜೆಪಿ ಗೆಲ್ಲುತ್ತದೆ ಎಂದರು.
ಇದನ್ನೂ ಓದಿ: Karnataka Budget Session: ಸಾಕ್ಷ್ಯ ನೀಡಲು ತನಿಖಾ ಆಯೋಗದ ಮುಂದೆ ಬಸನಗೌಡ ಪಾಟೀಲ್ ಹಾಜರಾಗಿಲ್ಲ: ಪ್ರಿಯಾಂಕ್ ಖರ್ಗೆ, ಸಚಿವ
ಇತ್ತೀಚೆಗೆ, ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ನಾಯಕರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು “ಈ ದೇಶದಲ್ಲಿ ಕಟ್ಟರ್ ಕಾಂಗ್ರೆಸಿಗರೇ ಬಿಜೆಪಿ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಕೇಳಿಬರುತ್ತಿದೆ ಎಂದಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ನನ್ನ ಹೆಣನೂ ಬಿಜೆಪಿಗೆ ಹೋಗಲ್ಲ. ನಮ್ಮ ಕುಟುಂಬದ ರಕ್ತದಲ್ಲೇ ಬಿಜೆಪಿ, ಆರ್ಎಸ್ಎಸ್ ಇಲ್ಲ ಎಂದಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ