ಯುದ್ಧಕ್ಕೆ ರಷ್ಯಾ ಸೇನೆಯಲ್ಲಿ ಕರ್ನಾಟಕದ ಯುವಕರ ಬಳಕೆ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಬೆಂಗಳೂರು, ಫೆ.22: ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕದ ಯುವಕರನ್ನು ಯುದ್ಧಕ್ಕೆ (Russia War) ಬಳಸಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ (Kalaburagi) ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಷ್ಯಾ ಸೇನೆ ಅಮಾಯಕ ಯುವಕರನ್ನು ಯುದ್ಧಕ್ಕೆ ಬಳಸಿದ ಮಾಹಿತಿ ಇದೆ. ರಷ್ಯಾದಲ್ಲಿ ನಮ್ಮ ಯುವಕರನ್ನು ಸೇನೆಗೆ ಬಳಸಿಕೊಂಡ ಮಾಹಿತಿ ನಮ್ಮ ಜಿಲ್ಲಾಧಿಕಾರಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ನೀಡಿದ್ದಾರೆ ಎಂದರು.
ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಮಾಹಿತಿ ಇದೆ. ರಷ್ಯಾದ ವ್ಯಾಗ್ನರ್ ಗ್ರೂಪ್ಗೆ ಸೇರ್ಪಡೆ ಮಾಡಿಕೊಂಡ ಮಾಹಿತಿ ಇದೆ. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಉತ್ತರಭಾರತದ ಯುವಕರು ಸಿಲುಕಿರುವ ಮಾಹಿತಿ ಇದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿದ್ದು, ವಿದೇಶಾಂಗ ಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಕೆಲಸಕ್ಕಾಗಿ ಹೋದ ಕಲಬುರಗಿ ಕನ್ನಡಿಗರನ್ನು ಉಕ್ರೇನ್ ಯುದ್ದಕ್ಕೆ ನಿಯೋಜಿಸಿದ ರಷ್ಯಾ; ನನ್ನ ಮಕ್ಕಳನ್ನು ಕಾಪಾಡಿ ಎಂದು ತಂದೆ ಅಳಲು
ವಿದೇಶಾಂಗ ಸಚಿವರ ಬಳಿ ಮಾತನಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾನೆ. ಅವರು ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಇಂಥದ್ದು ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಅವರನ್ನ ರಕ್ಷಣೆ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಸೇರ್ಪಡೆಗೆ ಓಪನ್ ಆಫರ್
ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಆಫರ್ ನೀಡುತ್ತಿರುವ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಓಪನ್ ಆಫರ್ ನೀಡುತ್ತಿದ್ದೇವೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಯಾರು ಬೇಖಾದರೂ ಬರಲಿ. ತಾವೂ ಬನ್ನಿ. ಬಾಂಬೆ ಬಾಯ್ಸ್ ಮಾತ್ರವಲ್ಲ. ದೆಹಲಿ ಫ್ರೆಂಡ್ಸ್.. ಬೆಂಗಳೂರು ಫ್ರೆಂಡ್ಸ್ ಎಲ್ಲಾ ಬರಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Thu, 22 February 24