“ಹೇ ಟ್ರೋಲ್ ಮಿನಿಸ್ಟರ್”: ಮೋದಿ ರಾಜ್ಯ ಪ್ರವಾಸದ ಖರ್ಚು ಬಗ್ಗೆ ಪೋಸ್ಟ್ ಮಾಡಿದ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಕರ್ನಾಟಕ ಪ್ರವಾಸ ಕೈಗೊಳ್ಳಲು ಮಾಡಿದ ಖರ್ಚು ವೆಚ್ಚದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಟೀಕಿಸಿದ್ದರು. ಪ್ರಧಾನಿ ಮೋದಿಯವರ ಕರ್ನಾಟಕ ಪ್ರವಾಸಕ್ಕೆ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ ಎಂದಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಟ್ವೀಟ್ಗೆ ಬಿಜೆಪಿ ಪ್ರತಿಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.
ಬೆಂಗಳೂರು, ಫೆ.20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ವರ್ಷ ಕರ್ನಾಟಕ ಪ್ರವಾಸ ಕೈಗೊಳ್ಳಲು ಮಾಡಿದ ಖರ್ಚು ವೆಚ್ಚದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟ್ವೀಟ್ ಮಾಡಿ ಟೀಕಿಸಿದ್ದರು. ಪ್ರಧಾನಿ ಮೋದಿಯವರ ಕರ್ನಾಟಕ ಪ್ರವಾಸಕ್ಕೆ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ ಎಂದಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಟ್ವೀಟ್ಗೆ ಬಿಜೆಪಿ (BJP) ಪ್ರತಿಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.
ಹೇ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ, ಹೆಸರಷ್ಟೇ ಅಲ್ಲ, ನೀವು ಗಾಂಧಿ ಕುಟುಂಬದೊಂದಿಗೆ ಅದೇ ಬುದ್ಧಿಮತ್ತೆಯ ಪ್ರಮಾಣ ಮಟ್ಟವನ್ನು ಸಹ ಹಂಚಿಕೊಳ್ಳುತ್ತೀರಿ. ವಿಷಯವು ನಿಮ್ಮ ತಿಳುವಳಿಕೆಯ ಸಾಮರ್ಥ್ಯವನ್ನು ಮೀರಿದೆಯಾದರೂ ನಾವು ಸರಳಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಶಾಲೆಯ ಮೇಲಿನ ಬರಹ ಬದಲಾಯಿಸಿದಕ್ಕೆ ‘ಪ್ರಬುದ್ಧತೆ’ಯ ಸಮಾಜಾಯಿಷಿ ನೀಡಿದ ಪ್ರಿಯಾಂಕ್ ಖರ್ಗೆ ಅಪ್ರಬುದ್ಧರಂತೆ ಮಾತಾಡಿದರು!
ನೀವು ಕೆಳಗೆ ಉಲ್ಲೇಖಿಸಿರುವ ಮೊತ್ತವನ್ನು ಭಾರತದ ಪ್ರಧಾನಮಂತ್ರಿಯವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರೋಟೋಕಾಲ್ ಪ್ರಕಾರ ಕಾನೂನುಬದ್ಧವಾಗಿ ಖರ್ಚು ಮಾಡಿದ್ದಾರೆ. ನಿಮ್ಮ ಪಕ್ಷವು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಕರ್ನಾಟಕ ರಾಜ್ಯದ ಸಂಪತ್ತಿನಿಂದ ಹಣವನ್ನು ಕಳುಹಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಟ್ವೀಟ್
Hey Troll Minister @PriyankKharge,
Not just the name, you also share the same IQ level with the Gandhi family 😉
Though the topic is beyond your understanding capabilities we will try to simplify
The amount you quoted below was legally spent as per protocol for the Prime… https://t.co/BrS1RbWBkH
— BJP Karnataka (@BJP4Karnataka) February 20, 2024
ಪ್ರಿಯಾಂಕ್ ಖರ್ಗೆ ಟ್ವೀಟ್ನಲ್ಲಿ ಏನಿದೆ?
ಕಳೆದ ವರ್ಷ ಪ್ರಧಾನಿ ಮೋದಿಯವರ ಕರ್ನಾಟಕ ಪ್ರವಾಸಕ್ಕೆ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ. ಕರ್ನಾಟಕದಲ್ಲಿ ವಿಶ್ವಗುರುವಿನ ಪ್ರತಿಮೆಯನ್ನು ವೈಭವೀಕರಿಸಲು ಸುಮಾರು 182 ಕೋಟಿ ಖರ್ಚು ಮಾಡಿದ್ದು ಲಾಭಾಂಶವನ್ನು ನೀಡಲಿಲ್ಲ, ಕೇವಲ ಬೊಕ್ಕಸಕ್ಕೆ ನಷ್ಟವಾಗಿದೆ. ಇವು ಜಾಹೀರಾತುಗಳನ್ನು ಒಳಗೊಂಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ