AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ತೆರಿಗೆ ನನ್ನ ಹಕ್ಕು ಬದಲು ನನ್ನ ತೆರಿಗೆ ಕಾಂಗ್ರೆಸ್​ಗೆ ಮಾಡಿಕೊಳ್ಳಿ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬರ ಪರಿಹಾರಕ್ಕೆ ಕೇಂದ್ರ ಶೇ.75ರಷ್ಟು ಅನುದಾನ ಕೊಡುತ್ತೆ. ರಾಜ್ಯ ಸರ್ಕಾರ ಶೇಕಡಾ 25ರಷ್ಟು ಅನುದಾನ ಕೊಡುತ್ತದೆ. ಆದರೆ ಮುಖ್ಯಮಂತ್ರಿಗಳು ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆರ್ಥಿಕ ತಜ್ಞರನ್ನ ಒಳಗೊಂಡಂತೆ ಬಹಿರಂಗ ಚರ್ಚೆ ಮಾಡಿ. ನಿಜವಾಗಲೂ ಅನ್ಯಾಯ ಮಾಡಿದ್ದರೆ ನಾವು ನಿಮಗೆ ಧ್ವನಿ ಆಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ನನ್ನ ತೆರಿಗೆ ನನ್ನ ಹಕ್ಕು ಬದಲು ನನ್ನ ತೆರಿಗೆ ಕಾಂಗ್ರೆಸ್​ಗೆ ಮಾಡಿಕೊಳ್ಳಿ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಹೆಚ್​​ಡಿ ಕುಮಾರಸ್ವಾಮಿ
TV9 Web
| Edited By: |

Updated on: Feb 20, 2024 | 1:16 PM

Share

ಬೆಂಗಳೂರು, ಫೆಬ್ರವರಿ 20: ಕಾಡಾನೆ (Elephant) ದಾಳಿಗೆ ಬಲಿಯಾಗಿದ್ದ ಕೇರಳ (Kerala) ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಕೊಟ್ಟಿದ್ದೀರಿ, ಇಲ್ಲಿ ಆನೆ ತುಳಿತಕ್ಕೆ ಸತ್ತರೆ 5 ಲಕ್ಷ ರೂಪಾಯಿ ಕೊಡುತ್ತೀರಿ. ಆದರೆ ರೈತರು ಪರಿಹಾರ ಕೇಳಿದರೆ ಕೊಡಲ್ಲ. ನನ್ನ ತೆರಿಗೆ ನನ್ನ ಹಕ್ಕು ಅನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್​ಗೆ ಅಂತ ಬದಲು ಮಾಡಿಕೊಳ್ಳಿ ಎಂದು ಕಾಂಗ್ರೆಸ್​ ಸರ್ಕಾರದ (Congress Government) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ಮಾಡಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ನಡೆಸಲು ಆಗದೆ, ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್​​ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದೆ. ನಮ್ಮ ರಾಜ್ಯದ ಜನರ ಬೆವರಿನ ತೆರಿಗೆ ಹಣವನ್ನು ಪಕ್ಕದ ರಾಜ್ಯದವರಿಗೆ ಪರಿಹಾರ ಕೊಟ್ಟಿದ್ದೀರಿ. ನಮ್ಮ ರಾಜ್ಯದ ರೈತರಿಗೆ ಪರಿಹಾರ ಕೊಡಲು ನಿಮ್ಮ ಬಳಿ ಹಣ ಇಲ್ಲ. ಈ ರೀತಿ ಪರಿಹಾರ ಕೊಟ್ಟಿರುವುದು ಅತ್ಯಂತ ಖಂಡನಿಯ ಎಂದರು.

ಮಾನವೀಯತೆಯಿಂದ ಪರಿಹಾರ ಕೊಟ್ಟರೆ ಪರವಾಗಿಲ್ಲ. ಅವರ ಪಕ್ಷದ ನಾಯಕರನ್ನು ಓಲೈಕೆ ಮಾಡಲು ಈತರ ಮಾಡುವುದು ಸರಿಯಲ್ಲ. ಈ ರೀತಿ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಯಾಕೆ ಹೋರಾಟ ಮಾಡುತ್ತೀರಾ? ಓಲೈಕೆ ರಾಜಕಾರಣ ಮಾಡಲು ಈ ರೀತಿಯಾದ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾಗದು: ಹೆಚ್​ಡಿ ಕುಮಾರಸ್ವಾಮಿ

ಬರ ಪರಿಹಾರಕ್ಕೆ ಕೇಂದ್ರ ಶೇ.75ರಷ್ಟು ಅನುದಾನ ಕೊಡುತ್ತೆ. ರಾಜ್ಯ ಸರ್ಕಾರ ಶೇಕಡಾ 25ರಷ್ಟು ಅನುದಾನ ಕೊಡುತ್ತದೆ. ಆದರೆ ಮುಖ್ಯಮಂತ್ರಿಗಳು ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆರ್ಥಿಕ ತಜ್ಞರನ್ನ ಒಳಗೊಂಡಂತೆ ಬಹಿರಂಗ ಚರ್ಚೆ ಮಾಡಿ. ನಿಜವಾಗಲೂ ಅನ್ಯಾಯ ಮಾಡಿದ್ದರೆ ನಾವು ನಿಮಗೆ ಧ್ವನಿ ಆಗುತ್ತೇವೆ ಎಂದರು.

ಈಗ ಜ್ಞಾನೋದಯ ಆಗಿದೆ, ಯಾವ ಮರದ ಕೆಳಗೆ ಕೂತಿದ್ರಿ? ಈಗ ಚುನಾವಣೆಗೆ ಕೆಲವೆ ತಿಂಗಳು ಬಾಕಿ ಇದೆ ಅಲ್ವಾ, ಅದಕ್ಕೆ ಡ್ರಾಮಾ ಮಾಡುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನೆನಪಿರಲಿಲ್ವಾ ? ಆಗ ರಾಜ್ಯಕ್ಕೆ ಅನ್ಯಾಯ ಆಗುತ್ತೆ ಅಂತ ಯಾಕೆ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ