ವಕ್ಫ್ ಬೋರ್ಡ್ ಸಮಸ್ಯೆ ಬಗೆಹರಿಸಲು 30 ವರ್ಷ ಬೇಕು; ಕಲಬುರಗಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಪ್ರತಿಕ್ರಿಯೆ

ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ. ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ ಮಠ, ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂಧಿರಗಳು ಇವೆಯೋ ಇಲ್ಲಿ ಸೂಫಿ ಕುರುಹುಗಳು ಸಿಗುತ್ತವೆ.

ವಕ್ಫ್ ಬೋರ್ಡ್ ಸಮಸ್ಯೆ ಬಗೆಹರಿಸಲು 30 ವರ್ಷ ಬೇಕು; ಕಲಬುರಗಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಪ್ರತಿಕ್ರಿಯೆ
ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ
Edited By:

Updated on: May 29, 2022 | 1:10 PM

ಕಲಬುರಗಿ: ರಾಜ್ಯದ ಮಸೀದಿಗಳಲ್ಲಿ (Masjids) ದೇವಾಲಯಗಳ (Temples) ಕುರುಹುಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳ ಮುಖಂಡರು ಮಸೀದಿಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ, ವಕ್ಫ್ ಬೋರ್ಡ್ ಸಮಸ್ಯೆ ಬಗೆಹರಿಸಲು 30 ವರ್ಷ ಬೇಕು. ವಕ್ಫ್ ಆಸ್ತಿ ಕೈಬಿಟ್ಟು ಹೋಗಲು ಕಾನೂನಾತ್ಮಕ ಸಮಸ್ಯೆ ಕಾರಣವಾಗಿದೆ. 14,800 ಪೇಶ್ ಇಮಾಮ್ ಮತ್ತು ಮೌಜನ್ಸ್ಗಳಿಗೆ ಗೌರವಧನ ನೀಡಲಾಗುತ್ತಿದೆ. ವಕ್ಫ್ ವಶದಲ್ಲಿ ಏಳು ಸಾವಿರ ಮಸೀದಿಗಳಿವೆ. ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯದ ಶೇಕಡಾ 6ರಷ್ಟು ಜನರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ. ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ ಮಠ, ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂಧಿರಗಳು ಇವೆಯೋ ಇಲ್ಲಿ ಸೂಫಿ ಕುರುಹುಗಳು ಸಿಗುತ್ತವೆ. ಸೂಫಿ ಸಂತರು ಕೂಡಿ ಬಾಳಿ ಬದುಕಿದ ರಾಜ್ಯ ನಮ್ಮದು. ಇದು ಭಾರತ ದೇಶದ ಸೌಂದರ್ಯ ಮತ್ತು ಸಂಸ್ಕೃತಿ. ಇದನ್ನು ಮಟ್ಟಹಾಕುವ ಕೆಲಸವನ್ನು ಯಾವುದೇ ಧರ್ಮ, ಸಂಘಟನೆಗಳು ಮಾಡಬಾರದು. ಅದನ್ನು ರಾಜ್ಯದ ಕನ್ನಡಿಗರು ಸಹಿಸುವುದಿಲ್ಲ ಅಂತ ಮೌಲಾನಾ ಶಾಫಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಆಧುನಿಕ ಶಕುಂತಲಾ ಕಥನ: ಗಂಡು ಹುಟ್ಟಿದ್ದರೆ ಹತ್ತು ರೂಪಾಯಿ, ಹೆಣ್ಣು ಹುಟ್ಟಿದ್ದರೆ ಐದು ರೂಪಾಯಿ

ಇದನ್ನೂ ಓದಿ
19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಸಂಬಂಧಿಕರಿಂದ ಪ್ರತಿಭಟನೆ
Turmeric: ಮುಖಕ್ಕೆ ಅರಿಶಿನ ಹಚ್ತೀರಾ, ಹಾಗಾದರೆ ಈ ತಪ್ಪುಗಳನ್ನು ಮಾಡಲೇಬೇಡಿ
ಆಧುನಿಕ ಶಕುಂತಲಾ ಕಥನ: ಗಂಡು ಹುಟ್ಟಿದ್ದರೆ ಹತ್ತು ರೂಪಾಯಿ, ಹೆಣ್ಣು ಹುಟ್ಟಿದ್ದರೆ ಐದು ರೂಪಾಯಿ
Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ

ಖರ್ಗೆ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ:
ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ತಾಪುರ ತಾಲೂಕಿನಲ್ಲಿ ಮುಸ್ಲಿಮರಿಂದ ಹಿಂದೂಗಳ ಹತ್ಯೆಯಾಗಿವೆ. ವಾಡಿಯಲ್ಲಿ ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ್ದಕ್ಕೆ ಹತ್ಯೆಯಾಗಿತ್ತು. ಹಲಕರ್ಟಾದಲ್ಲಿ ಗೊಂದಳಿ ಸಮಾಜದ ಯುವಕನ ಕೊಲೆಯಾಗಿತ್ತು. ಆಗ ಮೃತನ ಕುಟುಂಬಕ್ಕೆ ಪ್ರಿಯಾಂಕ್ ಖರ್ಗೆ ಸಾಂತ್ವನ ಹೇಳಲಿಲ್ಲ. ತಮ್ಮ ಸಮುದಾಯದ ಯುವಕ ಅಂತ ಮೇ 25ರಂದು ಕೊಲೆಯಾಗಿದ್ದ ವಿಜಯ್ ಕಾಂಬಳೆ ಮನೆಗೆ ಭೇಟಿ ನಿಡಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಎಲ್ಲರನ್ನೂ ಸಮಾನರಾಗಿ ನೋಡಬೇಕು ಎಂದು ಸಿದ್ದಲಿಂಗಶ್ರೀ ಹೇಳಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Sun, 29 May 22