AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ

ಪ್ರಧಾನಿ ಮೋದಿ ಅವರಿಗೆ ಜನರು "ಗೋ ಬ್ಯಾಕ್ ಮೋದಿ" ಎಂದು ರಸ್ತೆಗಳ ಮೇಲೆ ಬರಹಗಳನ್ನು ಬರೆದು ಪ್ರಧಾನಿ ಮೋದಿಯವರು ತಮಿಳುನಾಡಿಗೆ ಬರುವುದನ್ನು ಜನರು ವಿರೋಧಿಸಿದರು ಎಂದು ಟ್ವಿಟರ್​ನಲ್ಲಿ ಸಾಕಷ್ಟು ಜನರು ಪೋಟೊವನ್ನು ಟ್ವೀಟ್ ಮಾಡಿದ್ದಾರೆ.

Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ
ಗೋ ಬ್ಯಾಕ್ ಮೋದಿ
TV9 Web
| Updated By: ವಿವೇಕ ಬಿರಾದಾರ|

Updated on:May 29, 2022 | 12:36 PM

Share

ಪ್ರಧಾನಿ ನರೇಂಧ್ರ ಮೋದಿ (Narandra Modi) ಅವರು ಗುರುವಾರ (ಮೇ 26)  ರಂದು ವಿವಿಧ ಯೋಜನೆಗಳ ಚಾಲನೆಗೆ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಜನರು “ಗೋ ಬ್ಯಾಕ್ ಮೋದಿ” ಎಂದು ರಸ್ತೆಗಳ ಮೇಲೆ ಬರಹಗಳನ್ನು ಬರೆದು ಪ್ರಧಾನಿ ಮೋದಿಯವರು ತಮಿಳುನಾಡಿಗೆ ಬರುವುದನ್ನು ಜನರು ವಿರೋಧಿಸಿದರು ಎಂದು ಟ್ವಿಟರ್​ನಲ್ಲಿ ಸಾಕಷ್ಟು ಜನರು ಪೋಟೊವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಇದು ಸತ್ಯವೇ? ಇದರ ಸಲಿಯತ್ತು ಏನು ಇಲ್ಲದೆ.

ಇದನ್ನು ಓದಿ: ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..

ಇದನ್ನೂ ಓದಿ
Image
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Image
Indian Navy: ಭಾರತೀಯ ನೌಕಾಪಡೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿದ್ದ ಯುದ್ಧನೌಕೆ ಐಎನ್‌ಎಸ್ ಗೋಮತಿ ನಿವೃತ್ತಿ
Image
ನಷ್ಟದಲ್ಲಿರುವ ದಿವಂಗತ ಜಯಲಲಿತಾರ ಮಹತ್ವಾಂಕ್ಷೆ ಯೋಜನೆ ಅಮ್ಮ ಕ್ಯಾಂಟಿನ್
Image
Mann Ki Baat Live: ಮನ್​ ಕಿ ಬಾತ್​ ಆರಂಭ: ದೇಶದ ನವೋದ್ಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಟ್ವಿಟರ್ (Twitter) ಮತ್ತು ಫೇಸ್‌ಬುಕ್‌ನಲ್ಲಿ (Facebook) ಹಲವಾರು ಜನರು #GoBackModi ಮತ್ತು #GoBackFascistModi ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋ ಹೊಸದಲ್ಲ ಅಥವಾ ಚೆನ್ನೈನಿಂದ ಬಂದದ್ದಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜನವರಿ 2020 ರಲ್ಲಿ, ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಪ್ರಧಾನಿಯ ಭೇಟಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಈ ಬರಹವನ್ನು ಚಿತ್ರಿಸಿದರು.

ಇದನ್ನು ಓದಿ: ಬೇಸಿಗೆಯಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು

ಚಿತ್ರವನ್ನು ಸೂಕ್ಷಮವಾಗಿ ಗಮನಿಸುವುದಾರೇ  ಜನರು ಚಳಿಗಾಲದ ಉಡುಗೆಗಳನ್ನು ಧರಿಸಿರುವುದನ್ನು ಕಾಣಬಹುದು, ಇದು ಮೇ ತಿಂಗಳಲ್ಲಿ ಚೆನ್ನೈನಲ್ಲಿ ಸಂಭವಿಸುವ ಸಾಧ್ಯತೆಯಿಲ್ಲ. ಈ ಚಿತ್ರದ ಕುರಿತು ಜನವರಿ 12 2020 ರಿಂದ Ei Somoy ವರದಿ ಮಾಡಿತ್ತು. ವರದಿ ಪ್ರಕಾರ  ಬರಹದ ಸ್ಥಳವು ಮೆಟ್ರೋ ಚಾನೆಲ್ ಬಳಿ ಇದೆ ಎಂದು ಬಂಗಾಳಿ ಸುದ್ದಿ ಪೋರ್ಟಲ್ ವರದಿ ಮಾಡಿದೆ. “ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್, ಹರೇ ಸ್ಟ್ರೀಟ್ ಪೊಲೀಸ್ ಸ್ಟೇಷನ್” ಎಂಬ ಪದಗಳನ್ನು  ಫೋಟೋದಲ್ಲಿ ಕಂದು ಬಣ್ಣದಲ್ಲಿ ಕಾಣಬಹುದು.

 “ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್, ಹೇರ್ ಸ್ಟ್ರೀಟ್ ಪೋಲೀಸ್ ಸ್ಟೇಷನ್” ಗಾಗಿ Google Maps ನಲ್ಲಿ ಹುಡುಕಿದಾಗ  ನಾವು ಕಂಡುಕೊಂಡ ಫೋಟೋಗಳು ಮತ್ತು ವೈರಲ್ ಶಾಟ್‌ಗಳ ನಡುವೆ ನಮಗೆ ಸಂಪೂರ್ಣ ಹೋಲಿಕೆಗಳು ಕಂಡುಬಂದವು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 29 May 22