Mann Ki Baat Live: ಮನ್​ ಕಿ ಬಾತ್​ ಆರಂಭ: ದೇಶದ ನವೋದ್ಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 29, 2022 | 12:00 PM

Mann Ki Baat Live News Updates: ದೇಶದ ಜನರೊಂದಿಗೆ ನೇರವಾಗಿ ಸರ್ಕಾರದ ಮತ್ತು ಪ್ರಧಾನಿಯ ಆಶಯಗಳನ್ನು ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ.

Mann Ki Baat Live: ಮನ್​ ಕಿ ಬಾತ್​ ಆರಂಭ: ದೇಶದ ನವೋದ್ಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ

PM Modi Speech in Mann Ki Baat Live News Updates: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 89ನೇ ಆವೃತ್ತಿಯಲ್ಲಿ ಭಾನುವಾರ (ಮೇ 29) ಮನದಮಾತುಗಳನ್ನು ಹಂಚಿಕೊಂಡರು. ದೇಶದ ಜನರೊಂದಿಗೆ ನೇರವಾಗಿ ಸರ್ಕಾರದ ಮತ್ತು ಪ್ರಧಾನಿಯ ಆಶಯಗಳನ್ನು ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ. ದೇಶದ ನವೋದ್ಯಮಗಳ (ಸ್ಟಾರ್ಟ್​ಅಪ್​)  ಸಾಧನೆ ಬಗ್ಗೆ ಮೋದಿ ಹರ್ಷ ವ್ಯಕ್ತಪಡಿಸಿದರು.

LIVE NEWS & UPDATES

The liveblog has ended.
  • 29 May 2022 11:34 AM (IST)

    Mann Ki Baat: ಬಾಲಕಿಯರ ವಿದ್ಯಾಭ್ಯಾಸಕ್ಕಾಗಿ ದೊಡ್ಡ ತ್ಯಾಗ

    ಆಂಧ್ರ ಪ್ರದೇಶದ ರಾಮ್ ಭೂಪಾಲ್ ರೆಡ್ಡಿ ತಮ್ಮ ನಿವೃತ್ತಿ ವೇತನದ ಸಂಪೂರ್ಣ ಮೊತ್ತವನ್ನು ಬಾಲಕಿಯರ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದಲ್ಲಿಯೂ ಸೇನೆಯಿಂದ ನಿವೃತ್ತರಾದವರೊಬ್ಬರು ನಿವೃತ್ತಿಯ ವೇಳೆ ಬಂದ ಹಣವನ್ನು ಗ್ರಾಮದ ನೀರಿಗಾಗಿ ವ್ಯಯಿಸಿದರು. ಬದ್ಧತೆ ಇದ್ದಾಗ ವ್ಯಕ್ತಿಗಳೂ ಸಮಾಜದ ಆಧಾರವಾಗಿ ಬದಲಾಗುತ್ತಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

  • 29 May 2022 11:31 AM (IST)

    Mann Ki Baat: ಜಪಾನ್ ಅನುಭವ ಹಂಚಿಕೊಂಡ ಪ್ರಧಾನಿ

    ಕೆಲ ದಿನಗಳ ಹಿಂದಷ್ಟೇ ಜಪಾನ್​ಗೆ ನಾನು ಭೇಟಿ ನೀಡಿದ್ದೆ. ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಹಲವರನ್ನು ಭೇಟಿಯಾದೆ. ಜಪಾನ್​ನಲ್ಲಿರುವ ಹಲವರು ಭಾರತದೊಂದಿಗೆ ಭಾವುಕ ನಂಟು ಹೊಂದಿದ್ದಾರೆ. ಹಿರೊಷಿ ಕೊಯಿಕೆ ರಾಮಾಯಣದ ಬಗ್ಗೆ ಆ್ಯನಿಮೇಶನ್ ಚಿತ್ರ ರೂಪಿಸಿದ್ದಾರೆ ಎಂದು ಹೇಳಿದರು.

  • 29 May 2022 11:28 AM (IST)

    Mann Ki Baat: 75 ಮುಖ್ಯ ಸ್ಥಳಗಳಲ್ಲಿ ಯೋಗ ದಿನ

    ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಈ ಬಾರಿ ಜೂನ್ 21ರಂದು ಭಾರತದ 75 ಮುಖ್ಯ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಗುವುದು. ವಿವಿಧ ಸಂಘಟನೆಗಳು ಮತ್ತು ನಾಗರಿಕರು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಯೋಗ ದಿನ ಆಚರಿಸಲು ಮುಂದಾಗಿದ್ದಾರೆ. ಇದು ಸ್ವಾಗತಾರ್ಹ ಎಂದು ಹೇಳಿದರು.

  • 29 May 2022 11:23 AM (IST)

    Yoga for Humanity: ಯೋಗದಿನದ ಈ ವರ್ಷದ ಘೋಷವಾಕ್ಯ

    ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದರು. ಈ ವರ್ಷದ ಯೋಗ ದಿನಕ್ಕಾಗಿ ‘ಮಾನವೀಯತೆಗಾಗಿ ಯೋಗ’ (Yoga for Humanity) ಎನ್ನುವ ಆಶಯ ಹೊತ್ತ ಘೋಷವಾಕ್ಯವನ್ನು ಮೋದಿ ಅವರು ಪ್ರಕಟಿಸಿದರು. ವಿಶ್ವದ ವಿವಿಧೆಡೆ ಆಕರ್ಷಕ ರೀತಿಯಲ್ಲಿ ಯೋಗ ದಿನದ ಕಾರ್ಯಕ್ರಮಗಳನ್ನು ಆಚರಿಸಬೇಕು. ನೀವೆಲ್ಲರೂ ಅಂದು ನಿಮ್ಮ ಗ್ರಾಮ, ನಗರ, ಪಟ್ಟಣಗಳಲ್ಲಿ ವಿಶಿಷ್ಟ ರೀತಿಯಲ್ಲಿ ಯೋಗ ದಿನ ಆಚರಿಸಬೇಕು. ವಿಶ್ವದ ವಿವಿಧೆಡೆ ಇರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ನಡೆಯುವ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಮಾಡಲಾಗುವುದು ಎಂದರು.

  • 29 May 2022 11:20 AM (IST)

    Mann Ki Baat: ಕೇದಾರನಾಥದಲ್ಲಿ ಕಸ: ಮೋದಿ ಬೇಸರ

    ಪವಿತ್ರ ಕ್ಷೇತ್ರ ಕೇದಾರಕ್ಕೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸ ಎಸೆಯುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದರು. ನಾವು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ಹೋದಾಗ ಕಸ ನೋಡಬೇಕಾದ ಪರಿಸ್ಥಿತಿ ಇರುವ ಬಗ್ಗೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆಯೂ ಅವರು ಗಮನ ಸೆಳೆದರು.

  • 29 May 2022 11:15 AM (IST)

    Mann Ki Baat: ಮನ್​ ಕಿ ಬಾತ್ ಆಲಿಸುತ್ತಿರುವ ಪ್ರಲ್ಹಾದ್ ಜೋಶಿ

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಳೇ ಹುಬ್ಬಳ್ಳಿಯ ಕೃಷ್ಣ ಕಾಲೋನಿಯಲ್ಲಿ ಸ್ಥಳೀಯರ ಜೊತೆಗೂಡಿ ಮನ್ ಕೀ ಬಾತ್ ಆಲಿಸುತ್ತಿದ್ದಾರೆ.

  • 29 May 2022 11:13 AM (IST)

    Mann Ki Baat: ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆ

    ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ದೂರದ ಒಳಪ್ರದೇಶಗಳಲ್ಲಿಯೂ ಸ್ಟಾರ್ಟ್​ಅಪ್​ ಚಟುವಟಿಕೆ ನಡೆಯುತ್ತಿದೆ. ವೈವಿಧ್ಯಮಯ ಕ್ಷೇತ್ರಗಳಲ್ಲಿ ಯುನಿಕಾರ್ನ್​ಗಳು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡುತ್ತಿವೆ ಎಂದು ಮೋದಿ ಹೇಳಿದರು.

  • 29 May 2022 11:07 AM (IST)

    Mann Ki Baat: ಯೂನಿಕಾರ್ನ್​ಗಳ ಗಮನಾರ್ಹ ಪ್ರಗತಿ

    ಕಳೆದ ಮೇ 5ಕ್ಕೆ ಭಾರತದಲ್ಲಿ ಆರಂಭವಾದ ಯುನಿಕಾರ್ನ್​ಗಳ ಸಂಖ್ಯೆ 100 ದಾಟಿತು. ಈ ಪೈಕಿ 44 ಕಳೆದ ವರ್ಷ ಆರಂಭವಾದವು ಎನ್ನುವುದು ಗಮನಾರ್ಹ ಅಂಶ. ಈ ವರ್ಷವೂ 14 ನವೋದ್ಯಮಗಳು ಯೂನಿಕಾರ್ನ್ ಹಂತಕ್ಕೆ ಮುಟ್ಟಿವೆ. ಭಾರತದ ಯುನಿಕಾರ್ನ್​ಗಳ ಪ್ರಗತಿ ದರವು ಅಮೆರಿಕ ಮತ್ತು ಬ್ರಿಟನ್​ಗಿಂತಲೂ ಹೆಚ್ಚು.

  • 29 May 2022 11:05 AM (IST)

    PM Modi in Mann Ki Baat: ಮೆಂಟರ್​ಗಳಿಗೆ ಶ್ಲಾಘನೆ

    ಭಾರತದಲ್ಲಿ ಸ್ಟಾರ್ಟ್​ಅಪ್​ಗಳಿಗೆ ಉತ್ತಮ ಮೆಂಟರ್​ಗಳಿದ್ದಾರೆ ಎನ್ನುವುದು ಸಂತೋಷದ ವಿಷಯ. ಶ್ರೀಧರ್ ಅವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಬಂದಿದೆ. ಅವರು ಸ್ವತಃ ಉದ್ಯಮಿಯಾಗಿರುವುದರ ಜೊತೆಗೆ ಹಲವು ಯುವಕರು ಉದ್ಯಮಿಗಳಾಗಲು ಪ್ರೇರಣೆ ನೀಡಿದ್ದಾರೆ.

  • 29 May 2022 11:03 AM (IST)

    PM Modi in Mann Ki Baat: ಮನ್​ ಕಿ ಬಾತ್ ಆರಂಭ

    ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕಿ ಬಾತ್ ಆರಂಭವಾಗಿದೆ. ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

  • 29 May 2022 10:57 AM (IST)

    Mann Ki Baat: ಮನ್​ ಕಿ ಬಾತ್​ಗೆ ನೀವು ಪ್ರತಿಕ್ರಿಯೆ, ವಿಚಾರಗಳನ್ನು ಕಳಿಸಬಹುದು

    ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.

  • 29 May 2022 10:55 AM (IST)

    Mann Ki Baat: 8 ವರ್ಷಗಳ ನಿರಂತರ ಕಾರ್ಯಕ್ರಮ

    ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಶದ ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಧಾನಿಯು ತಮ್ಮ ದೃಷ್ಟಿಕೋನ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

  • 29 May 2022 10:46 AM (IST)

    Mann Ki Baat: ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರ

    ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೊ ಕಾರ್ಯಕ್ರಮವು AIR NEWS, DD NEWS, PMO ಮತ್ತು ಮಾಹಿತಿ ಪ್ರಸಾರ ಇಲಾಖೆಯ ಸಚಿವಾಲಯದ ಯುಟ್ಯೂಬ್ ಚಾನೆಲ್​ಗಳಲ್ಲಿಯೂ ಪ್ರಸಾರವಾಗಲಿದೆ. ಹಿಂದಿಯಲ್ಲಿ ಪ್ರಸಾರ ಮುಕ್ತಾಯವಾದ ನಂತರ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಆಕಾಶವಾಣಿಯು ಕಾರ್ಯಕ್ರಮ ಪ್ರಸಾರ ಮಾಡಲಿದೆ.

  • 29 May 2022 10:45 AM (IST)

    Mann Ki Baat: ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಮರುಪ್ರಸಾರ

    ಈ ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನಿಲಯಗಳು ಏಕಕಾಲಕ್ಕೆ ಮರುಪ್ರಸಾರ ಮಾಡಲಿವೆ. ಆಕಾಶವಾಣಿಯ ಜಾಲತಾಣ (AIR News Website) ಮತ್ತು NEWSONAIR ಮೊಬೈಲ್​ ಆ್ಯಪ್​ಗಳಲ್ಲಿಯೂ ಇದು ಏಕಕಾಲಕ್ಕೆ ಪ್ರಸಾರವಾಗಲಿದೆ.

  • 29 May 2022 10:43 AM (IST)

    Mann Ki Baat: ತಿಂಗಳಿಗೊಮ್ಮೆ ಮನದ ಮಾತು

    ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್​ ಕಿ ಬಾತ್’ ಭಾಷಣದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ

  • 29 May 2022 10:41 AM (IST)

    Mann Ki Baat: ಮಾಹಿತಿ ಪುಸ್ತಕ ಪ್ರಕಟ

    ಕಳೆದ ಏಪ್ರಿಲ್ ತಿಂಗಳ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಗಿದ್ದ ವಿವಿಧ ವಿಷಯಗಳು ಮತ್ತು ಲೇಖನಗಳ ಬಗ್ಗೆ ಮಾಹಿತಿ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.

  • 29 May 2022 10:38 AM (IST)

    Mann Ki Baat: ಯುವಜನರ ಆಶೋತ್ತರಕ್ಕೆ ಸ್ಪಂದನೆ

    ‘ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲು ದೇಶದ ವಿವಿಧ ಜನರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಯುವಜನರು ಹೆಚ್ಚಿ ಸಂಖ್ಯೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಖುಷಿ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

  • Published On - May 29,2022 10:33 AM

    Follow us
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ