AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಸ್ಪೆಕ್ಟರ್ ಮೇಲೆ ಗಾಂಜಾ ದಂದೆಕೋರರು ಹಲ್ಲೆ ಮಾಡುತ್ತಿದ್ದಾಗ ಉಳಿದ ಪೊಲೀಸ್ ಸಿಬ್ಬಂದಿ ರಕ್ಷಣೆಗೆ ಬರಲಿಲ್ಲ ಏಕೆ?

ಸದ್ಯ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಶ್ರೀಮಂತ್ ಇಲ್ಲಾಳ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಬ್ಬಿಣದ ರಾಡ್​ನಿಂದ ಅನೇಕ ಕಡೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ನಿಧಾನವಾಗಿ ಬಾವು ಕಡಿಮೆಯಾಗುತ್ತಿದೆ.

ಇನ್​ಸ್ಪೆಕ್ಟರ್ ಮೇಲೆ ಗಾಂಜಾ ದಂದೆಕೋರರು ಹಲ್ಲೆ ಮಾಡುತ್ತಿದ್ದಾಗ ಉಳಿದ ಪೊಲೀಸ್ ಸಿಬ್ಬಂದಿ ರಕ್ಷಣೆಗೆ ಬರಲಿಲ್ಲ ಏಕೆ?
ಚಿಕಿತ್ಸೆ ಪಡೆಯುತ್ತಿರುವ ಸಿಪಿಐ ಶ್ರೀಮಂತ ಇಲ್ಲಾಳ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 28, 2022 | 7:38 AM

Share

ಕಲಬುರಗಿ: ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಗಾಂಜಾ ದಂದೆಕೋರರ ಹಲ್ಲೆ ವಿಚಾರ ಸಂಬಂಧ ಗಾಂಜಾ ದಂದೆಕೋರರ ಅಡ್ಡೆ ಮೇಲೆ ದಾಳಿಗೆ ಹೋದವರು ಹತ್ತು ಜನ ಪೊಲೀಸ್ ಸಿಬ್ಬಂದಿಗಳು. ಆದರೆ ಹಲ್ಲೆಯಾಗಿದ್ದು ಶ್ರೀಮಂತ್ ಇಲ್ಲಾಳ್ ಮೇಲೆ ಮಾತ್ರ. ಹಾಗಾದರೆ ಉಳಿದವರನ್ನು ಬಿಟ್ಟು ಕೇವಲ ಶ್ರೀಮಂತ್ ಇಲ್ಲಾಳ್ ಮೇಲೆ ಯಾಕೆ ಹಲ್ಲೆ ನಡೆಯಿತು. ಮತ್ತು ಹಲ್ಲೆ ನಡೆಯುತ್ತಿದ್ದರು ಉಳಿದ ಸಿಬ್ಬಂದಿ ರಕ್ಷಣೆಗೆ ಯಾಕೆ ಬರಲಿಲ್ಲಾ ಎನ್ನುವ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಗಡಿಭಾಗದಲ್ಲಿರುವ ಮಂಠಾಳ ಮತ್ತು ಉಮ್ಮರ್ಗಾ ಠಾಣೆಯ ಪೊಲೀಸರ ಯಾಕೆ ದಿಡೀರೆನೆ ಸಹಾಯಕ್ಕೆ ಬರಲಿಲ್ಲ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ಕರ ಸಿಗಬೇಕಿದೆ. ಅದಕ್ಕಾಗಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹಿಂದುಳಿದ ವರ್ಗಗಳ ಜಾತಿಗಳ ಒಕ್ಕೂಟ ಮತ್ತು ಶ್ರೀಮಂತ್ ಇಲ್ಲಾಳ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಸೆ 23ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ಸುಮಾರು 50 ಮಂದಿ ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ತುರೂರಿ ಸಮೀಪದ ವಾಡಿ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲ್ಲೂಕಿನ ಹೊನ್ನಳಿಯ ಜಮೀನಿನಲ್ಲಿ ಪೊಲೀಸರು ಕಾರ್ಯಾಚರಣೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿತ್ತು.

ಸದ್ಯ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಶ್ರೀಮಂತ್ ಇಲ್ಲಾಳ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಬ್ಬಿಣದ ರಾಡ್​ನಿಂದ ಅನೇಕ ಕಡೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ನಿಧಾನವಾಗಿ ಬಾವು ಕಡಿಮೆಯಾಗುತ್ತಿದೆ. ಕುಟುಂಬದ ಜೊತೆ ಕಲಬುರಗಿ ಜಿಲ್ಲೆಯ ಇಬ್ಬರು ಪೊಲಿಸ್ ಅಧಿಕಾರಿಗಳನ್ನು ಎಸ್ಪಿ ಇಶಾ ಪಂತ್ ನಿಯೋಜನೆ ಮಾಡಿದ್ದಾರೆ. ಇಲ್ಲಾಳ್​ರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ.

8 ಜನರ ಬಂಧನ:

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ದುಷ್ಕರ್ಮಿಗಳು ಕಸಿದುಕೊಂಡಿದ್ದ ಶ್ರೀಮಂತ್ ಇಲ್ಲಾಳ್ ಅವರ ಸರ್ವೀಸ್ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಾಯಾಳು ಸಿಪಿಐಗೆ ಚಿಕಿತ್ಸೆ ಮುಂದುವರಿದಿದ್ದು, ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಪೊಲೀಸರ ಬಂಧನದಲ್ಲಿರುವ 8 ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಗಾಂಜಾ ಮಾರಾಟಗಾರ ಸಂತೋಷ್ ಎಂಬಾತನನ್ನು ಬಂಧಿಸಿದ್ದ ಪೊಲೀಸರಿಗೆ ವಿಚಾರಣೆ ವೇಳೆ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುವ ಗ್ಯಾಂಗ್ ಇರುವುದು ತಿಳಿದುಬಂದಿತ್ತು. ಗಾಂಜಾ ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದಿಢೀರನೆ ನಲವತ್ತು ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಗಾಯಾಳು ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್​ಲಿಫ್ಟ್ ಮಾಡಲಾಯಿತು.

ಸುಮಾರು 40 ಜನರ ತಂಡ ಏಕಾಏಕಿ ದಾಳಿ ನಡೆಸಿದ್ದರಿಂದ ಶ್ರೀಮಂತ್ ಇಲ್ಲಾಳ್ ಅವರ ಮುಖ, ಎದೆ ಮತ್ತು ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರ ಪೊಲೀಸರು ಹಾಗೂ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಮಂತ ಇಲ್ಲಾಳರನ್ನು ರಕ್ಷಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:30 am, Wed, 28 September 22