ಕಲಬುರ್ಗಿ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಅಶ್ಲೀಲ ಸಿಡಿ ಪ್ರಕರಣ ಈಗಾಗಲೇ ಎಸ್ಐಟಿ ತನಿಖಾಧಿಕಾರಿಗಳ ಅಂಗಳ ಸೇರಿದೆ. ಎಲ್ಲಾ ತೆರನಾದ ಆರೋಪ ಪ್ರತ್ಯಾರೋಪಗಳಿಗೆ ಸಿಲುಕಿ ರಾದ್ಧಾಂತ ಮೂಡಿಸಿರುವ ಈ ಪ್ರಕರಣದ ಬೆನ್ನಲ್ಲೇ ಕಲಬುರ್ಗಿ ವಿಶ್ವವಿದ್ಯಾನಿಲಯದಲ್ಲಿ ನೌಕರಿಗಾಗಿ ಮಹಿಳಾ ಸಿಬ್ಬಂದಿಯನ್ನು ದುರುಪಯೋಗಪಡಿಸಿಕೊಂಡ ಸಂಗತಿಯೊಂದು ಬಯಲಾಗಿದೆ.
ಕಲಬುರ್ಗಿಯ ವಿಶ್ವವಿದ್ಯಾನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ, ವಿವಿ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಎಂಬಾತ ಖಾಯಂ ಕೆಲಸ ಕೊಡಿಸುವ ಆಮಿಷವೊಡ್ಡಿ ಬೆತ್ತಲೆ ವಿಡಿಯೋ ಕಳುಹಿಸಲು ಬೇಡಿಕೆ ಇಟ್ಟಿದ್ದರಂತೆ. ಆಮಿಷಕ್ಕೆ ಮರುಳಾದ ಮಹಿಳೆ ತನ್ನ ಬೆತ್ತಲೆ ವಿಡಿಯೋಗಳನ್ನು ಆತನಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ವ್ಯಕ್ತಿ ನಂತರದಲ್ಲಿ ವಿಡಿಯೋವನ್ನು ಬೇರೆ ಬೇರೆ ಗ್ರೂಪ್ಗಳಲ್ಲಿ ಹಂಚಿದ್ದು ಬೆಳಕಿಗೆ ಬಂದಿದೆ.
ಪ್ರಸ್ತುತ ಈ ಬಗ್ಗೆ ಆಕ್ರೋಶಿತಳಾಗಿರುವ ಮಹಿಳೆ ತನಗೆ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ. ಬೆತ್ತಲೆ ವಿಡಿಯೋ ಮಾಡಿ ಮೊಬೈಲ್ಗೆ ಕಳುಹಿಸಿದರೆ ಖಾಯಂ ನೌಕರಿ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದ ಶರಣಪ್ಪ, ಇದೀಗ ವಿಡಿಯೋವನ್ನು ಹಂಚಿಕೊಂಡಿರುವುದಾಗಿ ಆರೋಪ ಹೊರಿಸಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಶರಣಪ್ಪ ವಿರುದ್ಧ ಸೆಕ್ಷನ್ 292, 407, 420, 354 (ಎ) ಅಡಿ ದೂರು ದಾಖಲಾಗಿದೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ದಾಖಲಾದ ಆಸ್ಪತ್ರೆಗೇ ಭೇಟಿ ನೀಡಿ ಆರೋಗ್ಯ ಸಂಬಂಧಿ ದಾಖಲೆ ಪರಿಶೀಲಿಸಿದ ಎಸ್ಐಟಿ