AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Evening News: ದಿನದ ಪ್ರಮುಖ ಸುದ್ದಿಯ ರೌಂಡಪ್; BSFನ ಹೆಚ್ಚುವರಿ ಮಹಾನಿರ್ದೇಶಕರ ನೇಮಕ, ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ 1 ಕೋಟಿ ಪರಿಹಾರದವರೆಗೆ

ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ (ಡಿ.31)ರ ಪ್ರಮುಖ ಸುದ್ದಿಗಳು: ಏನು ಮಾಡಬಾರದೆಂದು ಸದಾ ನೆನಪಿಸುತ್ತಲೇ ಇರುವ ಬಿಜೆಪಿ ನನ್ನ ಗುರು ಎಂದ ರಾಹುಲ್​ ಗಾಂಧಿ, 42 ಐಎಎಸ್, 53 ಐಪಿಎಸ್​ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ನ್ಯೂ ಇಯರ್​ ಗಿಫ್ಟ್ ಒಳಗೊಂಡ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ

Evening News: ದಿನದ ಪ್ರಮುಖ ಸುದ್ದಿಯ ರೌಂಡಪ್; BSFನ ಹೆಚ್ಚುವರಿ ಮಹಾನಿರ್ದೇಶಕರ ನೇಮಕ, ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ 1 ಕೋಟಿ ಪರಿಹಾರದವರೆಗೆ
TV9 Web
| Edited By: |

Updated on:Dec 31, 2022 | 8:22 PM

Share

ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ (ಡಿ.31)ರ ಪ್ರಮುಖ ಸುದ್ದಿಗಳು: ಏನು ಮಾಡಬಾರದೆಂದು ಸದಾ ನೆನಪಿಸುತ್ತಲೇ ಇರುವ ಬಿಜೆಪಿ ನನ್ನ ಗುರು ಎಂದ ರಾಹುಲ್​ ಗಾಂಧಿ, ಭಾರತಕ್ಕೆ ಕಾಲಿಟ್ಟ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್​ಎಕ್ಸ್​ಬಿ.1.5, 42 ಐಎಎಸ್, 53 ಐಪಿಎಸ್​ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ನ್ಯೂ ಇಯರ್​ ಗಿಫ್ಟ್ ಒಳಗೊಂಡ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ.

BSFನ ಹೆಚ್ಚುವರಿ ಮಹಾನಿರ್ದೇಶಕರ ಸುಜೋಯ್ ಲಾಲ್ ಥಾಸೆನ್ ನೇಮಕ

ಬಿಎಸ್‌ಎಫ್‌ನ ಹೆಚ್ಚುವರಿ ಮಹಾನಿರ್ದೇಶಕರ ಜವಾಬ್ದಾರಿ ಜವಾಬ್ದಾರಿ ಸುಜೋಯ್ ಲಾಲ್ ಥಾಸೆನ್ ನೀಡಲಾಗಿದೆ. ಸುಜೋಯ್ ಲಾಲ್ ಥಾಸೆನ್‌ರನ್ನು ನೇಮಿಸಿ ಕೇಂದ್ರಸರ್ಕಾರ ಆದೇಶ ನೀಡಿದೆ. ಸುಜೋಯ್ ಲಾಲ್ ಸಿಆರ್‌ಪಿಎಫ್‌ನ ಮುಖ್ಯಸ್ಥರಾಗಿದ್ದರು. ಇದೀಗ ಸುಜೋಯ್ ಲಾಲ್‌ಗೆ ಬಿಎಸ್‌ಎಫ್‌ ಡಿಜಿ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಸಿಆರ್‌ಪಿಎಫ್ ಮಹಾನಿರ್ದೇಶಕ (ಡಿಜಿ) ಸುಜೋಯ್ ಲಾಲ್ ಥಾಸೆನ್ ಅವರಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಡಿಜಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದ್ದು, ಡಿಸೆಂಬರ್ 31 ರಂದು ಹಾಲಿ ಪಂಕಜ್ ಕುಮಾರ್ ಸಿಂಗ್ ಅವರು ನಿವೃತ್ತಿ ಹೊಂದಿದರು. ಪಂಕಜ್ ಸಿಂಗ್, 1988-ಬ್ಯಾಚ್ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ರಾಜಸ್ಥಾನ ಕೇಡರ್‌ನವರು ಈ ಡಿಸೆಂಬರ್‌ನಲ್ಲಿ ಬಿಎಸ್‌ಎಫ್ ಮುಖ್ಯಸ್ಥರಾಗಿ 1.4 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ. ಅವರು ಕಳೆದ ವರ್ಷ ಆಗಸ್ಟ್ 31 ರಂದು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಏನು ಮಾಡಬಾರದೆಂದು ಸದಾ ನೆನಪಿಸುತ್ತಲೇ ಇರುವ ಬಿಜೆಪಿ ನನ್ನ ಗುರು

‘ಭಾರತ್ ಜೋಡೋ ಯಾತ್ರೆ’ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಸರ್ಕಾರವು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ನಾನು ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರೆಸುತ್ತೇನೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಭದ್ರತಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸುವುದು ಮತ್ತು ಕೋವಿಡ್ ಕಳವಳಗಳ ಕಾರಣ ಪಾದಯಾತ್ರೆಯನ್ನು ನಿಲ್ಲಿಸುವಂತೆ ಪತ್ರಗಳನ್ನು ಕಳುಹಿಸುವುದು ಈ ರೀತಿಯ ಕೆಲಸಗಳನ್ನು ಬಿಜೆಪಿ ಮಾಡುತ್ತಲೇ ಇದೆ. ಬಿಜೆಪಿ ರೋಡ್​ ಶೋಗಳನ್ನು ಮಾಡುವಾಗ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಭಾರತಕ್ಕೆ ಕಾಲಿಟ್ಟ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್​ಎಕ್ಸ್​ಬಿ.1.5

ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಒಮಿಕ್ರಾನ್ ರೂಪಾಂತರಿ BF.7 ಭಾರತದಲ್ಲಿ ಹರಡುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್​ನಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್​ಎಕ್ಸ್​ಬಿ.1.5 ದೇಶಕ್ಕೆ ವಕ್ಕರಿಸಿರುವ ಬಗ್ಗೆ ವರದಿಯಾಗಿದೆ. ಕೋವಿಡ್​​ನ ಹೊಸ ರೂಪಾಂತರಿ ಗುಜರಾತ್​ನಲ್ಲಿ ಪತ್ತೆಯಾಗಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಮಾಜಿ ಪೋಪ್ ಬೆನೆಡಿಕ್ಟ್ XVI 95ನೇ ವಯಸ್ಸಿನಲ್ಲಿ ನಿಧನ

ಮಾಜಿ ಪೋಪ್ ಬೆನೆಡಿಕ್ಟ್ ಅವರು ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾದಲ್ಲಿ ಶನಿವಾರ ನಿಧನರಾದರು ಎಂದು ಹೋಲಿ ಸೀ ವಕ್ತಾರರು ತಿಳಿಸಿದ್ದಾರೆ. ಪೋಪ್ ಎಮೆರಿಟಸ್, ಬೆನೆಡಿಕ್ಟ್ XVI, ಇಂದು ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ 9.34ಕ್ಕೆ ನಿಧನರಾದರು ಎಂದು ನಾನು ನಿಮಗೆ ದುಃಖದಿಂದ ತಿಳಿಸುತ್ತೇನೆ. ಹೆಚ್ಚಿನ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಒದಗಿಸಲಾಗುವುದು ಎಂದು ವಕ್ತಾರರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

42 ಐಎಎಸ್, 53 ಐಪಿಎಸ್​ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ನ್ಯೂ ಇಯರ್​ ಗಿಫ್ಟ್​​

42 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಹಾಗೂ 53 ಐಪಿಎಸ್ ​ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ನ್ಯೂ ಇಯರ್​ ಗಿಫ್ಟ್​​ ಕೊಟ್ಟಿದೆ. ಈ ಆದೇಶ ಹೊಸವರ್ಷದ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

ಹೊಸ ವರ್ಷದಂದು ಪಬ್-ರೆಸ್ಟೋರೆಂಟ್ ಮತ್ತು ಪಿಜಿ​​ಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು

ಹೊಸ ವರ್ಷ ಸಂಭ್ರಮಾಚರಣೆ ಯಂದು ಕೆಲವೊಂದು ಕಹಿ ಘಟನೆಗಳು ನಡೆಯುವ ಸಾಧ್ಯತೆ ಹಿನ್ನಲೆ ಪೊಲೀಸ್ ಇಲಾಖೆ ಪಬ್, ರೆಸ್ಟೋರೆಂಟ್ ಹಾಗೂ ಪಿಜಿ ಮಾಲೀಕರಿಗೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಪಬ್-ರೆಸ್ಟೋರೆಂಟ್​​ಗಳಲ್ಲಿ ಹಾಗೂ ಪಿಜಿಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಉಲ್ಲೇಖಿಸಿ ಪೊಲೀಸ್​ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಅಪರಾಧ ನಡೆದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ. ಪೊಲೀಸರು ಸೂಚಿಸಿದ ಕ್ರಮಗಳು ಹೀಗಿವೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಬೆಂಗಳೂರು ಸೇರಿ ಈ ಜಿಲ್ಲೆಗಳ KSRTCಯ ಮೊದಲ ಇಲೆಕ್ಟ್ರಿಕ್ ಬಸ್​​ಗೆ ಚಾಲನೆ

ಕರ್ನಾಟಕದಲ್ಲಿ ಇಂದಿನಿಂದ ಕೆಎಸ್​​ಆರ್​ಟಿಸಿ ಯ ಮೊದಲ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಲಾಯಿತು. MEIL ಹಾಗೂ KSRTC ಜಂಟಿಯಾಗಿ ಇಂದಿನಿಂದ ರಸ್ತೆಗಿಳಿದಿರುವ ಪರಿಸರ ಸ್ನೇಹಿ ಬಸ್​​ಗೆ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದರು. ಇದು ಬೆಂಗಳೂರು ಮತ್ತು ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿ ನಡುವೆ ಪ್ರಯಾಣಿಸುವ ಕರ್ನಾಟಕದ ಜನರಿಗೆ ಒಂದು ಸಿಹಿ ಸುದ್ದಿಯಾಗಿದೆ.

ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ ಸಚಿವ ಬಿ. ಶ್ರೀರಾಮುಲು ನೆರವು ನೀಡಿದ್ದು, 1 ಕೋಟಿ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ. ಡಿಪೋದ ಚಾಲಕ ಕಂ ನಿರ್ವಾಹಕರಾಗಿದ್ದ J.S​​.ಉಮೇಶ್ ಇತ್ತೀಚೆಗೆ ಅಪಘಾತದಲ್ಲಿ ಮೃತ್ತಪಟ್ಟಿದ್ದರು. ಇನ್ಶೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂ. ಮತ್ತು ಕೆಎಸ್ಆರ್​ಟಿಸಿ ನಿಗಮದಿಂದ ಪ್ರತ್ಯೇಕವಾಗಿ 13 ಲಕ್ಷ ರೂ. ಪರಿಹಾರವನ್ನು ಶಾಂತಿನಗರದ KSRTC ಕೇಂದ್ರ ಕಚೇರಿಯಲ್ಲಿ ಉಮೇಶ್ ಕುಟುಂಬವನ್ನ ಕರೆಸಿ ಚೆಕ್ ವಿತರಣೆ ಮಾಡಲಾಗಿದೆ. ಅಲ್ಲಿಗೆ ಮಾತಿಗೆ ತಕ್ಕಂತೆ ಚಿತ್ರದುರ್ಗ ಕೆಎಸ್​​ಆರ್​ಟಿಸಿ ನಿಗಮ ನಡೆದುಕೊಂಡಿದೆ.

8 ವರ್ಷದ ಬಾಲಕನ ಗುಪ್ತಾಂಗಕ್ಕೆ ದಾರ ಕಟ್ಟಿ ಚಿತ್ರಹಿಂಸೆ ನೀಡಿದ ವಿದ್ಯಾರ್ಥಿಗಳು!

ದೆಹಲಿಯ ಕಿದ್ವಾಯಿ ನಗರ ಪ್ರದೇಶದ ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಯಲ್ಲಿ ವಿದ್ಯಾರ್ಥಿಗಳ ಗುಂಪೊಂದು 8 ವರ್ಷದ ಬಾಲಕನ ಖಾಸಗಿ ಅಂಗಕ್ಕೆ ನೈಲಾನ್ ದಾರ ಕಟ್ಟಿ ಚಿತ್ರಹಿಂಸೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ ಬುಧವಾರ ಈ ಘಟನೆ ನಡೆದಿದೆ. ಆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ಮಾಹಿತಿ

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಕ್ಕಳು ಕೂಡ ಹಣ ಸಂಪಾದಿಸುವ ಅವಕಾಶಗಳು ಸೃಷ್ಟಿಯಾಗಿವೆ. ಹದಿಹರೆಯದ ಯುವಕ ಯುವತಿಯರು ಹಲವು ಮಾಧ್ಯಮಗಳ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಅನೇಕರು ಚಿಕ್ಕ ವಯಸ್ಸಿನಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಸಂಪಾದನೆ ಮಾಡುವ ಉದಾಹರಣೆಗಳು ಇವೆ. ಹೀಗೆ ಮಕ್ಕಳು ಸಂಪಾದಿಸುತ್ತಿರುವ ಹಣಕ್ಕೆ ಆದಾಯ ತೆರಿಗೆ ಇದೆಯೇ? ಈ ವಿಚಾರದಲ್ಲಿ ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ? ಮಕ್ಕಳು ಗಳಿಸುವ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

Published On - 8:19 pm, Sat, 31 December 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?