ಲೋಕಸಭಾ ಚುನಾವಣೆ ಫಲಿತಾಂಶ: ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಶಾಸಕ ಸ್ವರೂಪ್ ನೇತೃತ್ವದಲ್ಲಿ ಕಾರ್ಯಕರ್ತರಿಂದ ದೇವಸ್ಥಾನದಲ್ಲಿ ಪೂಜೆ
ಲೋಕಸಭಾ ಚುನಾವಣೆ ಫಲಿತಾಂಶ: ಜೆಡಿಎಸ್ ಕಾರ್ಯಕರ್ತರ ಅಭಿಮಾನವನ್ನು ನಾವು ಪ್ರಸ್ತಾಪಿಸಿರುವ ಕಾರಣ ದೃಶ್ಯಗಳಲ್ಲಿ ಕಾಣಿಸುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ನೇತೃತ್ವದಲ್ಲಿ ನಗರದ ಎಂಜಿ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪ್ರಜ್ವಲ್ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಹಾಸನ: ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಿಗೆ ತಮ್ಮ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೇಲೆ ಅಭಿಮಾನ ಕಡಿಮೆಯಾಗಿಲ್ಲ. ಲೈಂಗಿಕ ಅಪರಾಧಗಳ (sexual offences) ಪ್ರಕರಣದಲ್ಲಿ ಆರೋಪಿಯಾಗಿ ದೇಶದಿಂದ ತಲೆಮರೆಸಿಕೊಂಡು ಒಂದು ತಿಂಗಳು ನಂತರ ವಾಪಸ್ಸು ಬಂದು ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದರೂ ಕಾರ್ಯಕರ್ತರು ಅವರ ಮೇಲೆ ವಿಶ್ವಾಸವಿರಿಸಿಕೊಂಡಿದ್ದಾರೆ. ಪ್ರಜ್ವಲ್ ಸೆಕ್ಸ್ ಟೇಪುಗಳು ಹೊರಬಿದ್ದ ಬಳಿಕ ಹಾಸನದ ಜನ ಜೆಡಿಎಸ್ ಅಭ್ಯರ್ಥಿಯ ಬಗ್ಗೆ ಯಾವ ಭಾವನೆ ತಳೆದಿದ್ದಾರೋ ಗೊತ್ತಿಲ್ಲ, ಇನ್ನು ಸ್ವಲ್ಪ ಹೊತ್ತಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ (Shreyas Patel) ಹಣೆಬರಹದ ಬಗ್ಗೆ ಗೊತ್ತಾಗಲಿದೆ. ಜೆಡಿಎಸ್ ಕಾರ್ಯಕರ್ತರ ಅಭಿಮಾನವನ್ನು ನಾವು ಪ್ರಸ್ತಾಪಿಸಿರುವ ಕಾರಣ ದೃಶ್ಯಗಳಲ್ಲಿ ಕಾಣಿಸುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ (Swaroop Prakash) ನೇತೃತ್ವದಲ್ಲಿ ನಗರದ ಎಂಜಿ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪ್ರಜ್ವಲ್ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮೊಂಡಾಟ: ಹಾಸನ ಲೋಕಸಭೆ ರಿಸಲ್ಟ್ಗೂ ಮುನ್ನ ಎಸ್ಐಟಿ ಮೆಗಾ ಪ್ಲಾನ್