ಶಾಸಕರು ರಾಜೀನಾಮೆ ನೀಡಿದ್ದ 15 ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್
ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯದ 15 ಕ್ಷೇತ್ರಗಳಿಗೆ ಅ. 21ರಂದು ಉಪಚುನಾವಣೆ ನಡೆಯಲಿದೆ. ಉಳಿದ 2 ಕ್ಷೇತ್ರಗಳಾದ ಮಸ್ಕಿ, ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪ ಚುನಾವಣೆ ನಡೆಯುವುದಿಲ್ಲ. ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ವಿವರ: ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶದಿಂದ ಕಾಂಗ್ರೆಸ್, ಜೆಡಿಎಸ್ನ 17 ಶಾಸಕರು ರಾಜೀನಾಮೆ ನೀಡಿದ್ದರು. ಹೀಗಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದರು. ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. […]
ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯದ 15 ಕ್ಷೇತ್ರಗಳಿಗೆ ಅ. 21ರಂದು ಉಪಚುನಾವಣೆ ನಡೆಯಲಿದೆ. ಉಳಿದ 2 ಕ್ಷೇತ್ರಗಳಾದ ಮಸ್ಕಿ, ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪ ಚುನಾವಣೆ ನಡೆಯುವುದಿಲ್ಲ.
ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ವಿವರ: ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶದಿಂದ ಕಾಂಗ್ರೆಸ್, ಜೆಡಿಎಸ್ನ 17 ಶಾಸಕರು ರಾಜೀನಾಮೆ ನೀಡಿದ್ದರು. ಹೀಗಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದರು. ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ.
ಯಲ್ಲಾಪುರ ಕ್ಷೇತ್ರ-ಅರೆಬೈಲ್ ಶಿವರಾಮ್ ಹೆಬ್ಬಾರ್, ಯಶವಂತಪುರ ಕ್ಷೇತ್ರ-ಎಸ್.ಟಿ.ಸೋಮಶೇಖರ್, ವಿಜಯನಗರ ಕ್ಷೇತ್ರ-ಆನಂದ್ ಸಿಂಗ್, ಶಿವಾಜಿನಗರ ಕ್ಷೇತ್ರ-ಆರ್.ರೋಷನ್ ಬೇಗ್, ಹೊಸಕೋಟೆ ಕ್ಷೇತ್ರ-ಎಂಟಿಬಿ ನಾಗರಾಜ್, ಹುಣಸೂರು ಕ್ಷೇತ್ರ-ಅಡಗೂರು ಹೆಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರ-ಕೆ.ಸಿ.ನಾರಾಯಣಗೌಡ, ಕೆ.ಆರ್.ಪುರಂ ಕ್ಷೇತ್ರ-ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ-ಕೆ.ಗೋಪಾಲಯ್ಯ, ಚಿಕ್ಕಬಳ್ಳಾಪುರ ಕ್ಷೇತ್ರ-ಡಾ.ಕೆ.ಸುಧಾಕರ್, ಗೋಕಾಕ್ ಕ್ಷೇತ್ರ-ರಮೇಶ್ ಎಲ್.ಜಾರಕಿಹೊಳಿ, ಅಥಣಿ ಕ್ಷೇತ್ರ-ಮಹೇಶ್ ಕುಮಟಳ್ಳಿ, ರಾಣೆಬೆನ್ನೂರು ಕ್ಷೇತ್ರ-ಕೆಪಿಜೆಪಿಯಿಂದ ಗೆದ್ದಿದ್ದ ಆರ್.ಶಂಕರ್, ಕಾಗವಾಡ ಕ್ಷೇತ್ರ-ಶ್ರೀಮಂತ ಪಾಟೀಲ, ಹಿರೇಕೆರೂರು ಕ್ಷೇತ್ರ-ಬಿ.ಸಿ.ಪಾಟೀಲ್ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. ಈಗ ಈ 15 ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿದೆ.
ಉಪಚುನಾವಣೆ ನಡೆಯದ ಕ್ಷೇತ್ರಗಳು: ಉಳಿದ ಎರಡು ಕ್ಷೇತ್ರಗಳಾದ ರಾಯಚೂರಿನ ಮಸ್ಕಿ-ಪ್ರತಾಪ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ-ಮುನಿರತ್ನ ಸಹ ಅನರ್ಹಗೊಂಡಿದ್ದಾರೆ. ಆದ್ರೆ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಕಾರಣ ಈ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವುದಿಲ್ಲ.
ಯಾವುದೇ ಅನರ್ಹ ಶಾಸಕರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದು ಕಾನೂನುರೀತ್ಯವೇ ಇದೆ. ಸರಿಯಾಗಿ ಒಂದು ತಿಂಗಳಿಗೆ ಅಂದ್ರೆ ಅಕ್ಟೋಬರ್ 21ರಂದು ಸೋಮವಾರ ಕರ್ನಾಟಕದಲ್ಲಿ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸುನೀಲ್ ಅರೋರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Published On - 12:47 pm, Sat, 21 September 19