ಡಿಸೆಂಬರ್​ 8: ಭಾರತ್ ಬಂದ್ ದಿನ ಕರ್ನಾಟಕ ಕೂಡ ಬಂದ್.. ಬಂದ್..​ ಬಂದ್​..

ಡಿಸೆಂಬರ್ 8ರಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಅಂದು ಕರ್ನಾಟಕ ಕೂಡ ಬಂದ್ ಮಾಡಲು ಚಿಂತಿಸಲಾಗಿದೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಬಂದ್ ಮಾಡಲಾಗುತ್ತೆ.

ಡಿಸೆಂಬರ್​ 8: ಭಾರತ್ ಬಂದ್ ದಿನ ಕರ್ನಾಟಕ ಕೂಡ ಬಂದ್.. ಬಂದ್..​ ಬಂದ್​..
Follow us
ಆಯೇಷಾ ಬಾನು
|

Updated on:Dec 06, 2020 | 1:13 PM

ಬೆಂಗಳೂರು: ಡಿಸೆಂಬರ್ ​5ರ ಕರ್ನಾಟಕ ಬಂದ್​ ಬಳಿಕ ಮತ್ತೊಂದು ಬಂದ್ ಮಾಡಲು ಸಿದ್ಧತೆಗಳು ನಡೆದಿವೆ. ಡಿಸೆಂಬರ್ 8ರಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಅಂದು ಕರ್ನಾಟಕ ಕೂಡ ಬಂದ್ ಮಾಡಲು ಚಿಂತಿಸಲಾಗಿದೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಬಂದ್ ಮಾಡಲಾಗುತ್ತೆ.

ಹಾಗೂ ಡಿಸೆಂಬರ್ 9ರಂದು ಬಾರು ಕೋಲು ಚಳವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಾಹಿತಿ ನೀಡಿದೆ. ಬಂದ್ ಹಾಗೂ ಪ್ರತಿಭಟನೆ ಕುರಿತು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ.

ಡಿ.8ರಂದು ರಾಜ್ಯದಲ್ಲೂ ಭಾರತ್ ಬಂದ್ ಆಚರಿಸುತ್ತೇವೆ: ಇನ್ನು ಬಂದ್ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರ ರೈತರ ದೆಹಲಿ ಪ್ರವೇಶ ತಡೆದಿದೆ. ರೈತ ವಿರೋಧಿ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಹೊಸ ಕೃಷಿ ಸುಧಾರಣಾ ಕಾನೂನುಗಳ ರೈತ ವಿರೋಧಿ ಮಸೂದೆ ವಿರೋಧಿಸಿ ಭಾರತ ಬಂದ್ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ರೈತ ಸಂಘಟನೆಯಿಂದ ಬಂದ್ ಆಚರಿಸಲಾಗುತ್ತೆ. 8 ರಂದು ರಾಜ್ಯದಲ್ಲಿ ಎಲ್ಲಾ ಹೆದ್ದಾರಿಗಳು ಹಾಗೂ ಎಲ್ಲಾ ಜಿಲ್ಲೆ ಕೇಂದ್ರದಲ್ಲಿಯೂ ರೈತರಿಂದ ಬಂದ್ ಮಾಡಲಾಗುತ್ತೆ. ಡಿಸೆಂಬರ್‌ 9ರಂದು ರೈತರಿಂದ ಬಾರುಕೋಲು ಚಳವಳಿ ನಡೆಯುತ್ತೆ ಎಂದು ತಿಳಿಸಿದ್ರು.

ಡಿ.8ಕ್ಕೆ ಕರ್ನಾಟಕ ಬಂದ್ ಆದ್ರೂ ಸ್ತಬ್ಧವಾಗಲ್ಲ ಬೆಂಗಳೂರು: ಡಿ.8 ಮಂಗಳವಾರ ‘ಬೆಂಗಳೂರು ಬಂದ್’ ಆಗಲ್ಲ. ಡಿಸೆಂಬರ್ 9 ರಂದು ಬೆಂಗಳೂರು ಬಂದ್ ಆಗಲಿದೆ. ಮಂಗಳವಾರ ಕರ್ನಾಟಕ ಬಂದ್, ಬುಧವಾರ ಬೆಂಗಳೂರು ಬಂದ್ ಮಾಡಲಾಗುತ್ತೆ. ಬಾರುಕೋಲು ಚಳವಳಿ ಮೂಲಕ 10 ಸಾವಿರ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ನಾವು ಹಿಂಸಾತ್ಮಕ ಬಂದ್ ಮಾಡಲ್ಲ, ನಮ್ಮದು ಶಾಂತಿಯುತ ಬಂದ್. ರೈತರ ಬಂದ್ ತಡೆಯವ ಕೆಲಸವನ್ನು ಸಿಎಂ ಮಾಡಬಾರದು ಎಂದು ಸಿಎಂ BSYಗೆ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.

Published On - 12:30 pm, Sun, 6 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ