ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗುವುದಿಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ

ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಬಿಜೆಪಿ ಬೆಂಬಲಿಸಿದ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆ ಎಂದು ಮಸ್ಕಿ ಬೈಎಲೆಕ್ಷನ್ ಉಸ್ತುವಾರಿ ಹೊತ್ತಿದ್ದ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗುವುದಿಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ
ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ
Follow us
preethi shettigar
|

Updated on:May 02, 2021 | 12:43 PM

ಬೆಂಗಳೂರು:  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಸ್ಕಿ ಬೈಎಲೆಕ್ಷನ್ ಉಸ್ತುವಾರಿ ಹೊತ್ತಿದ್ದರು. ಇದೀಗ ಸೋಲು ಖಚಿತವಾಗುತ್ತಿದ್ದಂತೆ ಟ್ವೀಟ್ ಮಾಡಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗುವುದಿಲ್ಲ. ನಿಮ್ಮ ಪರಿಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿದ್ದು, ಕಾರ್ಯಕರ್ತನಾಗಿ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಹೇಳಿದ್ದಾರೆ.

ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಬಿಜೆಪಿ ಬೆಂಬಲಿಸಿದ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆ ಎಂದು ಮಸ್ಕಿ ಬೈಎಲೆಕ್ಷನ್ ಉಸ್ತುವಾರಿ ಹೊತ್ತಿದ್ದ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ: ಪ್ರತಾಪಗೌಡ ಪಾಟೀಲ್ ಮತ ಎಣಿಕೆ ಕೇಂದ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿಕೆ ನೀಡಿದ್ದು, ಜನ ಬದಲಾವಣೆ ಬಯಸಿ, ಬದಲಾವಣೆ ಮಾಡಿದ್ದಾರೆ. ಇವತ್ತು ನನಗೆ ವಿಶ್ವಾಸದ್ರೋಹ ಆಗಿದೆ. ಅಭಿವೃದ್ಧಿ, ಒಳ್ಳೆಯತನ ಮುಖ್ಯವಲ್ಲ ಎಂದು ಸಾಬೀತಾಗಿದೆ. ಯಾರೇ ಬಂದು ಪ್ರಚಾರ ಮಾಡಿದರೂ ಏನೂ ಆಗಲ್ಲ. ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ. ಕ್ಷೇತ್ರದ ಜನರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇಲ್ಲ ಅಂದುಕೊಂಡ ಕಡೆ ಕಾಂಗ್ರೆಸ್ ಮುನ್ನಡೆಯಾಗಿದೆ. ನನಗೆ ಒಳಗೊಳಗೆ ಮೋಸವಾಗಿದೆ. ಬಿಜೆಪಿಯಿಂದ ನಾನು ಯಾವುದೇ ನಿರೀಕ್ಷೆ ಮಾಡುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ನಮ್ಮ ಸರ್ಕಾರ ಇರುವುದರಿಂದ ಜನರಿಗೆ ಸಹಾಯ ಮಾಡುವೆ ಎಂದು ಟಿವಿ9 ಡಿಜಿಟಲ್​ಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ತಿಳಿಸಿದ್ದಾರೆ.

ಆಡಳಿತ ವಿರೋಧಿ ಅಲೆಯಿಂದ ಹಿನ್ನಡೆಯಾಗಿದೆ. ಕಳೆದ ಮೂರು ಸಲ ಶಾಸಕರಾಗಿ ಅಭಿವೃದ್ಧಿ ಮಾಡಿದ್ದೆ. ಆದರೂ ಮತದಾರರು ನಮ್ಮ ವಿರುದ್ಧ ಮತ ಹಾಕಿರುವುದು ಆಡಳಿತ ವಿರೋಧಿ ಅಲೆಯಿದೆ ಎಂಬುದನ್ನು ಬಯಲು ಗೊಳಿಸಿದೆ. ಹುತೇಕ ಕಡೆ ನಿರೀಕ್ಷೆಯಂತೆ ಮತ ಬಂದಿಲ್ಲ. ನಮ್ಮ ಪಕ್ಷದವರೇ ನಮ್ಮ ವಿರುದ್ಧ ಕೆಲಸ ಮಾಡಿರುವುದು ಸ್ಪಷ್ಟ. ಕಾಂಗ್ರೆಸ್​ ಮುಖಂಡರಿಲ್ಲದ ಕಡೆಯೂ ಕಾಂಗ್ರೆಸ್​ಗೆ ಹೆಚ್ಚಿನ‌ ಮತ ಬಂದಿವೆ ಎಂದು ಪ್ರತಾಪಗೌಡ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರ ಅವರು ಮಸ್ಕಿ ಹೊಣೆಗಾರಿಕೆ ವಹಿಸಿಕೊಂಡಿದ್ದರೂ ಹಿನ್ನಡೆಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಸ್ಕಿ ಮತದಾರರೇ ತಮ್ಮ ಆಡಳಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಸ್ಪಷ್ಟ. ಮುಂದಿನ ಎರಡು ವರ್ಷ ಮಸ್ಕಿಯ ಮತದಾರರ ಪರ ಕೆಲಸ ಮಾಡುವೆ. ಸರಕಾರ ಬಿಜೆಪಿಯದ್ದೇ ಇರುವುದರಿಂದ ಮತದಾರರ ಬೇಕು ಬೇಡಗಳ ಅರಿತು ಕಾರ್ಯನಿರ್ವಹಿಸುವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಹಿನ್ನಡೆಯಾಗಿದೆ ಎಂದು ಅನಿಸಿಲ್ಲ ಎಂದು ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ:

UP Panchayat Election Results 2021: ಉತ್ತರಪ್ರದೇಶ ಪಂಚಾಯತ್​ ಚುನಾವಣೆ ಮತ ಎಣಿಕೆ; ಪ್ರಿಯಾಂಕಾ ಗಾಂಧಿ ತೀವ್ರ ಅಸಮಾಧಾನ

ಮಸ್ಕಿ ಉಪ-ಚುನಾವಣೆ ಮತ ಎಣಿಕೆಗೆ ಸಿದ್ಧತೆ: ಎಣಿಕೆಗೆ 210 ಸಿಬ್ಬಂದಿ, ಭದ್ರತೆಗೆ 102 ಪೊಲೀಸರ ನಿಯೋಜನೆ

Published On - 12:38 pm, Sun, 2 May 21

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್