Karnataka Breaking Kannada News Highlights: ತೀವ್ರ ಬರ ನಡುವೆಯೂ ಹೊಸ ಕಾರು ಖರೀದಿಸಿ ಸಚಿವರ ಓಡಾಟ

ವಿವೇಕ ಬಿರಾದಾರ
| Updated By: Rakesh Nayak Manchi

Updated on:Oct 17, 2023 | 10:34 PM

Breaking News Today Live: ಕರ್ನಾಟಕದಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದೆ. ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ಆಗುತ್ತಿವೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮುನಿಸಿಕೊಂಡು ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಹಣದ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ಮಾಡುತ್ತಿವೆ. ಇದರೊಂದಿಗೆ ದಸರಾ, ಹವಾಮಾನ ಹಾಗೂ ಇನ್ನಿತರ ಇಂದಿನ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​​ನಲ್ಲಿ....

Karnataka Breaking Kannada News Highlights: ತೀವ್ರ ಬರ ನಡುವೆಯೂ ಹೊಸ ಕಾರು ಖರೀದಿಸಿ ಸಚಿವರ ಓಡಾಟ
ಪ್ರಾತಿನಿಧಿಕ ಚಿತ್ರ

ಕರ್ನಾಟಕದಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಖಾಸಗಿ ದರ್ಭಾರ ಆರಂಭವಿಗಿದೆ. ಅಲ್ಲದೆ ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಮೈಸೂರು ದಸರಾವನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹಾಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಸರಾ ಹಬ್ಬವನ್ನು ತಮ್ಮದೆಯಾದ ಪಾರಂಪರಿಕ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ದಾಂಡಿಯಾ, ಗೊಂಬೆ ಕೂಡಿಸುವುದು ಇತ್ಯಾದಿ ರೂಪದಲ್ಲಿಮೂಲಕ ಆಚರಿಸುತ್ತಿದ್ದಾರೆ. ಇನ್ನು ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ಆಗುತ್ತಿವೆ. ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಕ್ಕಿದ್ದು, ಇದನ್ನು ರಾಜ್ಯ ಕಾಂಗ್ರೆಸ್​ ನಾಯಕರು ಹೈಕಮಾಂಡ್​​ಗೆ ಕಳಹುಸಲು ಸಂಗ್ರಹಿಸಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಎಸ್​ಎಸ್​ಟಿ ಟ್ಯಾಕ್ಸ್​ ಆರಂಭವಾಗಿದೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್​ ವಿರುದ್ಧ ಹರಿಹಾಯ್ದಿದ್ದಾರೆ. ಹಾಗೆಯೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಮ್ದು ಓರಿಜಿನಲ್​ ಜೆಡಿಎಸ್.​ ಬಿಜೆಪಿ ಜೊತೆಗಿನ ಮೈತ್ರಿ ನಾನು ಒಪ್ಪುವುದಿಲ್ಲ. ನಮ್ಮ ಬೆಂಬಲ ಇಂಡಿಯಾಗೆ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಲೇಟೆಸ್ಟ್​ ಅಪ್ಡೇಟ್ಸ್​​ ಇಲ್ಲಿದೆ.

LIVE NEWS & UPDATES

The liveblog has ended.
  • 17 Oct 2023 10:12 PM (IST)

    Karnataka News Live: ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಎಂಎಲ್​ಸಿ ದಿನೇಶ್ ಗೂಳಿಗೌಡ ಪತ್ರ

    ಬೆಂಗಳೂರು: ಕಾವೇರಿ, ಮೇಕೆದಾಟು ಪಾದಯಾತ್ರೆ ವೇಳೆ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಎಂಎಲ್​ಸಿ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದಾರೆ. ನಾಡಿನ ನೆಲ, ಜಲ, ಭಾಷೆ ಹಿತರಕ್ಷಣೆಗೆ ಹಲವು ಹೋರಾಟಗಳು ನಡೆದಿವೆ. ಜನಪ್ರತಿನಿಧಿಗಳು, ರಾಜಕಾರಣಿಗಳು, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದಾರೆ. ಕಾವೇರಿ, ಮೇಕೆದಾಟು ಹಾಗೂ ಇನ್ನಿತರೆ ವಿಷಯಗಳಿಗೆ ಧರಣಿಗಳು, ಪ್ರತಿಭಟನೆಗಳು ಹಾಗೂ ಪಾದಯಾತ್ರೆಗಳು ನಡೆದಿವೆ. ಅಂದಿನ ಸರ್ಕಾರ ಹೋರಾಟದ ಕಿಚ್ಚನ್ನು ನಿಯಂತ್ರಿಸಲು ಕೇಸ್ ದಾಖಲಿಸಿದೆ. ಇಂತಹ ಪ್ರಕರಣಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತಂದು, ಮರು ಪರಿಶೀಲಿಸಿ. ಪ್ರಕರಣಗಳನ್ನು ಜರೂರಾಗಿ ಕೈಬಿಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ.

  • 17 Oct 2023 08:48 PM (IST)

    Karnataka News Live: ಮೈಸೂರು ದಸರಾ ಮಹೋತ್ಸವ; ಅ.18 ರ ಕಾರ್ಯಕ್ರಮಗಳು ಇಲ್ಲಿವೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅ.18 ರ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ನಾಳೆ ಬೆಳಗ್ಗೆ 11ಕ್ಕೆ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿ ಹಾಗೂ ಮಹಿಳಾ ಕವಿಗೋಷ್ಠಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಕವಯಿತ್ರಿ ಸವಿತಾ ನಾಗಭೂಷಣ್ ನೆರವೇರಿಸಲಿದ್ದಾರೆ. ಇನ್ನು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಸಚಿವರಾದ ಮಧು ಬಂಗಾರಪ್ಪ ಉದ್ಘಾಟನೆ ಮಾಡಿದರೆ,  ಸಂಜೆ 6 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪರವರು ಉದ್ಘಾಟಿಸಲಿದ್ದಾರೆ.

  • 17 Oct 2023 08:24 PM (IST)

    Karnataka News Live: ನೂತನ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪನೆ; ವಿವರಣೆ ನೀಡಲು ಪತ್ರಿಕಾಗೋಷ್ಠಿ ಆಯೋಜನೆ

    ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ನೂತನವಾಗಿ ಸ್ಥಾಪನೆಯಾಗುತ್ತಿದ್ದು, ಈ ಬಗ್ಗೆ ವಿವರಣೆ ನೀಡಲು ನಾಳೆ ಬೆಳಿಗ್ಗೆ 11:30 ಗಂಟೆಗೆ ಪ್ರೆಸ್‌ಕ್ಲಬ್ ಆಫ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದೆ.

  • 17 Oct 2023 08:17 PM (IST)

    Karnataka News Live: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ; ವಿಚಾರಣೆ ಮುಗಿಸಿ ಹೊರಬಂದ ಪ್ರದೀಪ್

    ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುದೀರ್ಘ ಐಟಿ ವಿಚಾರಣೆ ಮುಗಿಸಿ ಹೊರಬಂದ ಆರೋಪಿ ಪ್ರದೀಪ್ ಹೊರಬಂದಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ವಿಚಾರಣೆ ವೇಳೆ ಐಟಿ ಅಧಿಕಾರಿಗಳು ಕೇಳಿದ ದಾಖಲೆ ಒದಗಿಸಿದ್ದೇನೆ. ಮನೆಯಲ್ಲಿ ಪತ್ತೆಯಾದ ಹಣ ಜಮೀನಿಗೆ ಸಂಬಂಧಿಸಿದ್ದು, ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಸ್ನೇಹಿತ ಪ್ರಮೋದ್​ಗೂ ನೋಟೀಸ್ ನೀಡಿದ್ದಾರೆ. ಮನೆಯಲ್ಲಿ ಸಿಕ್ಕ ಹಣ 20 ಕೋಟಿ 2 ಲಕ್ಷ. ಅಕ್ಟೋಬರ್ 21ರಂದು ನೇ ಪ್ರಮೋದ್ ಸಹ ವಿಚಾರಣೆಗೆ ಬರ್ತಾರೆ. ಮತ್ತೆ ನನಗೆ ಅಕ್ಟೋಬರ್ 26 ರಂದು ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದರು.

  • 17 Oct 2023 07:56 PM (IST)

    Karnataka News Live: ಅತ್ತಿಬೆಲೆ ಪಟಾಕಿ ದುರಂತ; ಮ್ಯಾಜೀಸ್ಟೀರಿಯಲ್ ವಿಚಾರಣೆ ನಡೆಸುವಂತೆ ಸರ್ಕಾರ ಆದೇಶ

    ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ಮ್ಯಾಜೀಸ್ಟೀರಿಯಲ್ ವಿಚಾರಣೆ ನಡೆಸುವಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನಲೆ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ವಿಚಾರಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅಕ್ಟೋಬರ್ 7 ರಂದು ಸಂಜೆ 3:30 ರವೇಳೆಗೆ ಅಗ್ನಿ ಅವಘಡ ಸಂಭವಿಸಿತ್ತು. ಅವಘಡದಲ್ಲಿ 16 ಜನ ಕಾರ್ಮಿಕರು ಮೃತರಾಗಿದ್ದರು. ಈ ಪೈಕಿ 14 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಳಿದ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

  • 17 Oct 2023 07:03 PM (IST)

    Karnataka News Live:ಸರ್ಕಾರದ ಖಜಾನೆಯ ಹಣ ಸಿದ್ದರಾಮಯ್ಯ ಮತ್ತು‌ ಡಿಕೆಶಿ ಮನೆಗೆ ಹೋಗಿದೆ; ನಳಿನ್ ಕುಮಾರ್ ಕಟೀಲ್

    ಮಂಗಳೂರು: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಮಾಡಿದ್ದು, ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಸರ್ಕಾರದ ಖಜಾನೆ ಹಣ ಸಿದ್ದರಾಮಯ್ಯ, ಡಿಕೆಶಿ ಮನೆಗೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು. ‘ಖಜಾನೆ ಖಾಲಿ‌ ಮಾಡಿದ ಲೂಟಿಕೋರರ ಸರ್ಕಾರ ತೊಲಗಬೇಕು, ಡಿ.ಕೆ.ಶಿವಕುಮಾರ್​ ಅವರೇ ತಿಹಾರ್ ಜೈಲಿಗೆ ಹೋಗಿ ಬಂದಿದ್ದೀರಿ. ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ಧರಾಗಿ ಎಂದು  ಕಟೀಲ್​ ಕಿಡಿಕಾರಿದ್ದಾರೆ.

  • 17 Oct 2023 06:44 PM (IST)

    Karnataka News Live: ನೋಂದಣಿಗೂ ಮುಂಚೆಯೇ ಹೊಸ ಕಾರಿನಲ್ಲಿ ಸಚಿವರ ಸಂಚಾರ

    ಚಾಮರಾಜನಗರ: ರಾಜ್ಯಾದ್ಯಂತ ತೀವ್ರ ಬರದ ನಡುವೆಯೂ ಹೊಸ ಕಾರು ಖರೀದಿಸಿ ಸಚಿವರು ಓಡಾಟ ನಡೆಸಿದ್ದಾರೆ. ಹೌದು, ನೋಂದಣಿಗೂ ಮುಂಚೆಯೇ ಹೊಸ ಕಾರಿನಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ದರ್ಬಾರ್​ ಮಾಡುತ್ತಿದ್ದು, ತಾತ್ಕಾಲಿಕ ನಂಬರ್ ಪ್ಲೇಟ್ ಕೂಡ ಅಳವಡಿಸದೆ ಸಂಚಾರ ನಡೆಸಿದ್ದಾರೆ.  ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • 17 Oct 2023 06:07 PM (IST)

    Karnataka News Live: ಹೆಚ್​ಡಿಕೆ, ನಿಖಿಲ್ ಉಚ್ಚಾಟನೆಯ ನಕಲಿ ಪತ್ರ ವೈರಲ್; ದೂರು ದಾಖಲಿಸಿದ ಸಿಎಂ ಇಬ್ರಾಹಿಂ

    ಬೆಂಗಳೂರು: ಹೆಚ್​ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಉಚ್ಚಾಟನೆಯ ನಕಲಿ ಪತ್ರ ವೈರಲ್ ಹಿನ್ನೆಲೆ ಇದೀಗ ಜೆ.ಸಿ.ನಗರ ಪೊಲೀಸ್ ಠಾಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ದೂರು ನೀಡಿದ್ದಾರೆ. ಹೌದು, ‘ನಕಲಿ ಉಚ್ಚಾಟನೆಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ನನಗೆ ಮತ್ತು ಪಕ್ಷಕ್ಕೆ ಮುಜುಗರ ಆಗಿದೆ. ಕಿಡಿಗೇಡಿಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಕಲಿ ಪತ್ರ ವೈರಲ್ ಆಗಿರುವುದರಿಂದ ನನಗೆ ವೈಯಕ್ತಿಕವಾಗಿ ಧಕ್ಕೆ ಆಗಿದೆ. ಈ ರೀತಿ ನಕಲಿ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಇಬ್ರಾಹಿಂ ದೂರಿನಲ್ಲಿ ಮನವಿ ಮಾಡಿದ್ದಾರೆ.

  • 17 Oct 2023 05:37 PM (IST)

    Karnataka News Live: ರಾಯಚೂರಿನಲ್ಲಿ ವಿದ್ಯುತ್​ಗಾಗಿ ರೈತರ ಪ್ರತಿಭಟನೆ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

    ರಾಯಚೂರು: ರಾಯಚೂರಿನಲ್ಲಿ ವಿದ್ಯುತ್​ಗಾಗಿ ರೈತರ ಪ್ರತಿಭಟನೆ ವಿಚಾರ ‘ಜೆಸ್ಕಾಂ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಮಾತನಾಡಿದ ವಿಷ  ಸೇವಿಸಿದ ರೈತ ತಿಮ್ಮಪ್ಪ ‘ 12 ಗಂಟೆ ವಿದ್ಯುತ್ ಕೊಡ್ತಿನಿ ಅಂದಿದ್ದು, ಆದರೆ ನೀಡಿಲ್ಲ. ಈ ಹಿನ್ನಲೆ  ಬಹಳ ಜನ ರೈತರು ಪ್ರತಿಭಟಿಸಿಲು ಬಂದಿದ್ದರು. ಕೆಲವರು ವಿಷ ಕುಡಿಯಲು ಮುಂದಾಗಿದ್ರು, ಆಗ ನಾನು ಬೇಸರಿಂದ ಕ್ರಿಮಿನಾಶಕ ಕುಡಿದೆ. ಬಳಿಕ ಮೂರ್ಚೆ ಬಂತು, ನಂತರ ವಾಂತಿ ಬೇಧಿ ಆಗಿದೆ. ಇದೀಗ ಎರಡು ಮಾತ್ರೆ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದರು.

  • 17 Oct 2023 05:15 PM (IST)

    Karnataka News Live: ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಜಗದೀಶ್​ ಶೆಟ್ಟರ್​ ತಿರುಗೇಟು

    ಬೆಂಗಳೂರು: ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪ ‘ ಬಿಜೆಪಿಯಲ್ಲಿ ಇರೋದು ಸತ್ಯಹರಿಶ್ಚಂದ್ರರಾ? ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ‘ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹತ್ತಾರು ಹಗರಣ ಕೇಳಿ ಬಂತು. ಇವರ ಹೇಳಿಕೆಯಿಂದ ಇಡೀ ರಾಜಕೀಯ ಅಸಹ್ಯ ಮೂಡುವಂತೆ ಆಗುತ್ತಿದೆ. ತಾವು ಸತ್ಯಹರಿಶ್ಚಂದ್ರರು ಎಂದು ಬಿಜೆಪಿಯವರು ಹೇಳಲಿ ನೋಡೋಣ. ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

  • 17 Oct 2023 05:00 PM (IST)

    Karnataka News Live: ಮತ್ತೆ ಸುರುವಾದ ಚಿತ್ರದುರ್ಗದ ಪರ ಕೂಗು; ಜಗಳೂರು ತಾಲೂಕು ಚಿತ್ರದುರ್ಗಕ್ಕೆ ಸೇರ್ಪಡೆ‌ ಮಾಡಿ ಎಂಬ ಆಗ್ರಹ

    ದಾವಣಗೆರೆ: ಜಗಳೂರು ತಾಲೂಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆ ಮಾಡುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ತಾಲೂಕು ಕಚೇರಿ ಬಳಿ ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆ ಹೋರಾಟ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪ್ರತಿಭಟನಕಾರರು ತಾಲೂಕು ಕಚೇರಿ ಎದುರು ಜಮಾಯಿಸಿ ತಹಶಿಲ್ದಾರ್​ ಆದ ಸೈಯದ್ ಕಲಿಂ ಉಲ್ಲಾ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  • 17 Oct 2023 04:50 PM (IST)

    Karnataka News Live: ರಮೇಶ್ ಜಾರಕಿಹೊಳಿ ಇಂದು ನನ್ನ ಭೇಟಿಯಾಗಿಲ್ಲ; ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ ಸ್ಪಷ್ಟನೆ

    ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು ನನ್ನ ಭೇಟಿಯಾಗಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ ಎಂದು ಯಾರು ಹೇಳಿದ್ದು, ಈ ಹಿಂದೆ ಹಲವು ಭೇಟಿಯಾಗಿದ್ದಾರೆ. ಆದ್ರೆ, ಇವತ್ತು ಭೇಟಿಯಾಗಿಲ್ಲ. ರಮೇಶ್ ಜಾರಕಿಹೊಳಿ ಜೊತೆ ಯಾವತ್ತೂ ರಾಜಕೀಯ ಚರ್ಚೆ ಆಗಿಲ್ಲ ಎಂದರು.

  • 17 Oct 2023 04:32 PM (IST)

    Karnataka News Live: ಲೋಕಸಭಾ ಚುನಾವಣೆ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್ ಜಾರಕಿಹೊಳಿ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಇದೀಗ ಜಗದೀಶ್ ಶೆಟ್ಟರ್ ಅವರನ್ನು ಆರ್ ಟಿ ನಗರ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಇದರಿಂದ ರಮೇಶ್ ಜಾರಕಿಹೊಳಿ ನಡೆ  ತೀವ್ರ ಕುತೂಹಲ ಮೂಡಿಸಿದೆ. ಈಗಗಲೇ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕ ಭಾಗದ ಆಪರೇಷನ್ ಹಸ್ತದ ಹೊಣೆ ಹೊತ್ತಿದ್ದಾರೆ.

  • 17 Oct 2023 04:02 PM (IST)

    Karnataka News Live: ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ; ಗುತ್ತಿಗೆದಾರ ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು ಎಂದ ಕೆಂಪಣ್ಣ

    ಬೆಂಗಳೂರು: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಾನು, ಗುತ್ತಿಗೆದಾರ ಅಂಬಿಕಾಪತಿ 45 ವರ್ಷಗಳಿಂದ ಸ್ನೇಹಿತರು ಎಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ‘ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು, ಸಿಎಂ ಮನೆಯಿಂದ ನಾನು ನೇರವಾಗಿ ನಮ್ಮ ಮನೆಗೆ ಹೋಗಿದ್ದೇನೆ. ಅಂಬಿಕಾಪತಿ‌ ಮನೆಗೆ ನಾನು ಹೋಗಿಲ್ಲ. ಈ ಆರೋಪ ಸಾಭೀತೂ ಮಾಡಿದ್ರೆ ಅವರ ಕಾಲಡಿ ಇರ್ತೇನೆ ಎಂದರು.

  • 17 Oct 2023 03:30 PM (IST)

    Karnataka News Live: ಕಾರು, ಗೂಡ್ಸ್ ವಾಹನ ನಡುವೆ ಮುಖಾಮುಖಿ‌ ಡಿಕ್ಕಿ; ಇಬ್ಬರು ಮಹಿಳೆಯರು ಸಾವು

    ಬಾಗಲಕೋಟೆ: ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ‌ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಬಳಿ ನಡೆದಿದೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದ ಎಂಟು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲೂನ್ ಒಪನ್ ಆದ ಹಿನ್ನೆಲೆ ಕಾರು ಚಾಲಕನಿಗೆ ಏನು ಆಗಿಲ್ಲ. ಇನ್ನು ಪೊಲೀಸರು, ಮೃತರು ಯಾವ ಊರಿನವರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • 17 Oct 2023 03:02 PM (IST)

    Karnataka News Live: ಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್​

    ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಕಾರ್ಯಕ್ರಮ ಇಂದು(ಅ.17) ನಡೆಸಲಾಗಿದ್ದು, ಇಬ್ಬರು ಸಾಧಕರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್​ ಪದವಿ ನೀಡಿದೆ. ಹೌದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಇಸ್ರೋ ಮುಖ್ಯಸ್ಥ ಎಸ್​​.ಸೋಮನಾಥ್​​ರಿಗೂ ವಿವಿ ಗೌರವ ಡಾಕ್ಟರೇಟ್​ ನೀಡಿ ಗೌರವಿಸಿದೆ.

  • 17 Oct 2023 02:55 PM (IST)

    Karnataka News Live: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ಮಧ್ಯೆ ಹೊಡೆದಾಟ

    ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ಮಧ್ಯೆ ಹೊಡೆದಾಟ ನಡೆದಿದೆ. ಈ ವೇಳೆ ಜೈಲು ಸಿಬ್ಬಂದಿ ಮತ್ತು ಕೈದಿ ಇಬ್ಬರಿಗೂ ಗಾಯವಾಗಿದ್ದು, ಇಬ್ಬರೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೋಹನ ಸಿದ್ದಪ್ಪ ಬಡಿಗೇರ, ಗಾಯಗೊಂಡ ಜೈಲು ಸಿಬ್ಬಂದಿ.  ಪ್ರಶಾಂತ್​ ಅಲಿಯಾಸ್ ಪಾಚು, ಹಲ್ಲೆ ಮಾಡಿದ ಕೈದಿ. ಇನ್ನು ಬಾಚಣಿಕೆಯನ್ನೇ ಚಾಕೂವಿನಂತೆ ಬಳಸಿ ಹೊಡೆದಿರುವ ಸಾಧ್ಯತೆಯಿದೆ.

  • 17 Oct 2023 02:28 PM (IST)

    Karnataka News Live: ಬಿಜೆಪಿ, ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ

    ಬೆಂಗಳೂರು: ಸರ್ಕಾರ ನಡೆಸಲು ಬಿಡದೆ ನಿತ್ಯ ಸಿಎಂ,‌ಡಿಸಿಎಂಗೆ ಕಿರುಕುಳ, ಹಿಂಸೆ ಕೊಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಅವರ ಕುಟುಂಬ ಸೇರಿ ಡಿ.ಕೆ ಸುರೇಶ್​ರನ್ನ ಮುಗಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ‘ಮಾನಸಿಕ ಕಿರುಕುಳ ಕೊಡುವ ಬದಲು ಮುಂಬೈನಿಂದ ಸುಪಾರಿ ಕೊಟ್ಟು ಶೂಟ್ ಮಾಡಿಸಲಿ ಎಂದು ಎರಡು ಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.

  • 17 Oct 2023 01:54 PM (IST)

    Karnataka News Live: ಕಲಾವಿದರ ಹಣಕ್ಕು ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ; ಪರೋಕ್ಷವಾಗಿ ವಿಶ್ವನಾಥ್​ ಕಿಡಿ

    ಮೈಸೂರು: ಮೈಸೂರು ದಸರಾ ಅಧಿಕಾರಿಗಳ ದರ್ಬಾರ್ ಆಗಿದೆ. ದಸರಾ ದೀಪಾಲಂಕಾರ ಚೆನ್ನಾಗಿದೆ. ನಾನೂ‌ ಕೂಡ ಏಳು ದಸರಾ ನಡೆಸಿದ್ದೇನೆ. ಯಾವ ಉಪಸಮಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲ. ಸಂಪೂರ್ಣ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸಾಹಿತ್ಯದಿಂದ ವಿಧಾನಪರಿಷತ್​ಗೆ ನಾಮಂಕಿತನಾಗಿದ್ದೇನೆ. ನನ್ನನ್ನು ಹೇಗೆ ದಸರಾದಲ್ಲಿ ಬಳಸಿಕೊಳ್ಳಬೇಕು.? ಕಾರ್ಯಕ್ರಮಗಳು ಸರಿಯಾಗಿ ಆಗುತ್ತಿಲ್ಲ. ನಾವು ಹಿಂದೆ ಮಾಡಿದ್ದು ಬಿಟ್ಟರೇ‌ ಹೊಸದೇನು‌ ದಸರಾದಲ್ಲಿ ಆಗುತ್ತಿಲ್ಲ. ಕಲಾವಿದರು ಕಾರ್ಯಕ್ರಮಗಳನ್ನು ಕೊಡೋದೆ ಧನ್ಯ ಅಂತಿದ್ದರು. ಹೋಗುವಾಗ ಗೌರವ ಧನ ಕೊಡುತ್ತಿದ್ದೇವು. ಆದರೆ ಇವಾಗ ನೀನು ವಸಿ ತಕೋ ನಾನು ವಸಿ ತಕೋ ಅನ್ನೋ ಆಗೆ ಆಗಿದೆ. ಸಂಸ್ಕೃತಿಯನ್ನ ಹಾಳುಮಾಡುವ ಕೆಲಸ ಆಗುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಲಾವಿದರ ಹಣಕ್ಕು ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ ಎಂದು ಎಂಎಲ್.ಸಿ ವಿಶ್ವನಾಥ್ ಕಿಡಿ ಕಾರಿದರು.

  • 17 Oct 2023 01:41 PM (IST)

    Karnataka News Live: ಬೆಂಗಳೂರಿನ 6 ಕಡೆ ಇಡಿ ಅಧಿಕಾರಿಗಳಿಂದ ದಾಳಿ

    ಬೆಂಗಳೂರು: ಬೆಂಗಳೂರಿನ ಉದ್ಯಮಿಗೆ ಸೇರಿದ 6 ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದ್ಯಮಿ ಉಷಾ ರಾಮನಾನಿ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಉಷಾ ಆಪ್ಟ್ ಸರ್ಕ್ಯೂಟ್ ಇಂಡಿಯಾ ಪ್ರೈ.ಲಿ.ಕಂಪನಿಯ ಎಂಡಿ ಆಗಿದ್ದಾರೆ. ಬೆಳ್ಳಂದೂರಿನ‌ ಕಸವನಹಳ್ಳಿಯಲ್ಲಿರುವ ಉಷಾ ರಾಮನಾನಿ ನಿವಾಸ, ಎಲೆಕ್ಟ್ರಾನಿಕ್ ಸಿಟಿ, ಪುಟ್ಟೇನಹಳ್ಳಿ ಸೇರಿದಂತೆ ಆರು ಕಡೆ ಪರಿಶೀಲನೆ ನಡೆಸಿದ್ದಾರೆ.  ಕಂಪನಿ 2011-16ರ ಅವಧಿಯಲ್ಲಿ ಎಸ್​​ಬಿಐಗೆ ನಕಲಿ ದಾಖಲೆ ಸೃಷ್ಟಿಸಿ 354 ಕೋಟಿ ರೂ. ಸಾಲ ಪಡೆದಿದೆ. ನಂತರ ಬ್ಯಾಂಕ್​​ಗೆ ಸಾಲ ಪಾವತಿಸದೆ ವಂಚಿಸಿದ್ದರು. PMLA ಅಡಿ ಪ್ರಕರಣ ದಾಖಲಿಸಿಕೊಂಡು ಈಡಿ ತನಿಖೆ ನಡೆಸುತ್ತಿದೆ.

  • 17 Oct 2023 12:57 PM (IST)

    Karnataka News Live: ಮೈಸೂರು ಯುವದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ಯುವದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್​ 18ರಿಂದ 21ರವರೆಗೆ 4 ದಿನ ಯುವದಸರಾ ನಡೆಯಲಿದೆ.

    • ಅ.​​18ರಂದು ಯುವದಸರಾ ಉದ್ಘಾಟಿಸಲಿರುವ ನಟ ಶಿವರಾಜ್​​ ಕುಮಾರ್​
    • ಅ.18ರ ರಾತ್ರಿ 7 ಗಂಟೆಗೆ ಆಯೋಜಿಸಿರುವ ಸ್ಯಾಂಡಲ್‌ವುಡ್ ನೈಟ್ಸ್
    • ಅ19ರಂದು ಸಂಜಿತ್​​ ಹೆಗ್ಡೆ ತಂಡ, ಶಿಲ್ಪಾರಾವ್ ತಂಡದಿಂದ ಸಂಗೀತ ಕಾರ್ಯಕ್ರಮ
    • ಅ.20ರಂದು ಆಲ್ ಓಕೆ ಮತ್ತು ಸುಲೈಮಾನ್ ತಂಡದಿಂದ ಕಾರ್ಯಕ್ರಮ
    • ಅ.21ಕ್ಕೆ ಮೋಹನ್ ಸಿಸ್ಟರ್ಸ್, ಬೆನ್ನಿ ದಯಾಳ್ ತಂಡದಿಂದ ಕಾರ್ಯಕ್ರಮ
  • 17 Oct 2023 12:28 PM (IST)

    Karnataka News Live: ಸುರ್ಜೇವಾಲಾ, ವೇಣುಗೋಪಾಲ್‌ ವಿರುದ್ಧ ಬಿಜೆಪಿ ವಾಗ್ದಾಳಿ

    ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲಾ ಮತ್ತು ಕಮಿಷನ್‌ ಏಜೆಂಟ್‌ ಕೆ.ಸಿ. ವೇಣುಗೋಪಾಲ್‌ ಅವರು ಕರ್ನಾಟಕಕ್ಕೆ ದಿಢೀರ್‌ನೇ ಆಗಮಿಸಿರುವ ಕಾರಣಗಳು: ✔️ ₹1000 ಕೋಟಿ ಕಲೆಕ್ಷನ್‌ನ ಮೇಲ್ವಿಚಾರಣೆ ನಡೆಸುವುದು..! ✔️ ನಿಗಮ ಮಂಡಳಿಗಳ ನೇಮಕಾತಿಗೆ ರೇಟ್‌ ಫಿಕ್ಸ್‌ ಮಾಡುವುದು..! ✔️ ಪಂಚ ರಾಜ್ಯ ಚುನಾವಣೆಗೆ ಹಣ ಸಾಗಣೆಯ ಸ್ಥಿತಿಗತಿ ತಿಳಿಯುವುದು..! ✔️ ಗುತ್ತಿಗೆದಾರರಿಗೆ ಹೆಚ್ಚುವರಿ ಪರ್ಸೆಂಟೇಜ್‌ ಫಿಕ್ಸ್‌ ಮಾಡುವುದು..! ✔️ ಅಧಿಕಾರಿಗಳಿಂದ ವಸೂಲಿಯ ವಾಸ್ತವ ಸ್ಥಿತಿ ಅರಿಯುವುದು..! ಹೇಳಿದ ಸಮಯಕ್ಕೆ ಹೊರ ರಾಜ್ಯಗಳಿಗೆ ಇನ್ನೂ ಸಿದ್ದರಾಮಯ್ಯ ಅವರ ಎಟಿಎಮ್​ ಸರ್ಕಾರದ ಲೂಟಿ ಹಣ ತಲುಪದೆ ಇರುವ ಕಾರಣಕ್ಕೆ ಖುದ್ದು ಏಜೆಂಟರ್‌ಗಳೇ ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ರಾಜ್ಯ ಬಿಜೆಪಿ ಘಟನೆ ಟ್ವೀಟ್​ ಮೂಲಕ ವಾಗ್ದಾಳಿ ಮಾಡಿದೆ.

  • 17 Oct 2023 12:18 PM (IST)

    Karnataka News Live: ರಾಜ್ಯವನ್ನ ಲೂಟಿ ಮಾಡಿವುದಲ್ಲಿ ಸರ್ಕಾರ ಮುಳುಗಿದೆ; ಅಶ್ವಥ್ ನಾರಾಯಣ

    ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ಯಡವಟ್ಟು ಮಾಡುತ್ತಾ ಬಂದಿದೆ. 34 ವರ್ಷದಲ್ಲಿ ಎಂದೂ ಕಾಣದ ಬಹುಮತವನ್ನ ರಾಜ್ಯದ ಜನ ಕೊಟ್ಟಿದ್ದಾರೆ. ಆದರೆ ಜನ ಆಶೀರ್ವಾದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯವನ್ನ ಲೂಟಿ ಮಾಡಿವುದಲ್ಲಿ ಸರ್ಕಾರ ಮುಳುಗಿದೆ. ಅಧಿಕಾರ ದಾಹದಿಂದ ಇಡೀ‌ ರಾಜ್ಯವನ್ನ ಲೂಟಿ ಮಾಡಲು ಹೊರಟಿದ್ದಾರೆ. ಎಲ್ಲ ಮಂತ್ರಿಗಳು ಈ ಲೂಟಿಯಲ್ಲಿ ತೊಡಗಿದ್ದಾರೆ. ನಾವು ಯಾವ್ದಕ್ಕೂ ಹೆದರೋದಿಲ್ಲ ಅಂದ ಬಂಡತನ ಪ್ರದರ್ಶಿಸುತ್ತಿದ್ದಾರೆ. ಹಣ ಕೊಟ್ಟರೆ ಸರ್ವೀಸ್ ಕೊಡ್ತೀವಿ ಅಂತ ಭಾಗ್ಯಗಳನ್ನ ಪಡೆಯಬೇಕಾಗಿದೆ ಎಂದು ಶಾಸಕ ಡಾ. ಸಿ.ಎನ್ ಅಶ್ವಥ್ ನಾರಾಯಣ ವಾಗ್ದಾಳಿ ಮಾಡಿದರು.

  • 17 Oct 2023 12:05 PM (IST)

    Karnataka News Live: ಕರ್ನಾಟಕದ ಹಣ 2 ರಾಜ್ಯದ 2 ಎಟಿಎಮ್​​ಗಳಿಗೆ​ ಹೋಗುತ್ತಿದೆ: ಆರ್ ಅಶೋಕ್​

    ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಬಂದು 4 ತಿಂಗಳಾದರೂ ಕಂಟ್ರಾಕ್ಟರ್‌ಗಳಿಗೆ ಹಣ ಬಿಡುಗಡೆ ಮಾಡಿಲ್ಲ, ತನಿಖೆ ಮಾಡುತ್ತೇವೆ, ಆಮೇಲೆ ಹಣ ಬಿಡುಗಡೆ ಮಾಡುತ್ತೇವೆ ಅಂತ ಪುಂಖಾನುಪುಂಖವಾಗಿ ಹೇಳಿದರು. ಆದರೆ ಹಣ ಬಿಡುಗಡೆ ಮಾಡದೆ ಇದ್ದಿದಕ್ಕೆ ಕಾರಣ ಅದಲ್ಲ. ಆಗ ಹಣ ಬಿಡುಗಡೆ ಮಾಡಿದರೇ ಪಂಚರಾಜ್ಯ ಚುನಾವಣೆಗೆ ಹಣ ಕೊಡಲು ಆಗಲ್ಲ. ತೆಲಂಗಾಣ, ಮಧ್ಯಪ್ರದೇಶವನ್ನು ಕರ್ನಾಟಕ ದತ್ತು ತೆಗೆದುಕೊಂಡಿದೆ. ಎರಡು ಕಡೆ ಎರಡು ಎಟಿಎಮ್​ ಇದೆ, ಅಲ್ಲಿಗೆ ಹಣ ಹೋಗುತ್ತಿದೆ ಎಂದು ಮಾಜಿ ಸಚಿವ ಆರ್​ ಅಶೋಕ್​ ವಾಗ್ದಾಳಿ ಮಾಡಿದರು.

  • 17 Oct 2023 11:30 AM (IST)

    Karnataka News Live: ಕಾಂಗ್ರೆಸ್​ ಸರ್ಕಾರದಿಂದ ಕನ್ನಡಿಗರ ಬದುಕು ಪಂಚರ್‌ ಆಗಿದೆ; ಬಿಜೆಪಿ

    ಕಾಂಗ್ರೆಸ್‌ ಬಂದಿದೆ-ಕಲೆಕ್ಷನ್‌ ಜೋರಾಗಿದೆ. ರಾಜ್ಯವನ್ನು ದೋಚುವ ಸ್ಪರ್ಧೆ ತೀವ್ರವಾಗಿದೆ. ಕನ್ನಡಿಗರ ಹಣ ಪಂಚ ರಾಜ್ಯಗಳ ಪಾಲಾಗುತ್ತಿದೆ. ಕನ್ನಡಿಗರ ಬದುಕು ಪಂಚರ್‌ ಆಗಿದೆ ಎಂದು ಫ್ರೀಡಂ ಪಾರ್ಕ್​​ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ.  ಪ್ರತಿಭಟನೆಯಲ್ಲಿ ಮಾಜಿ‌ ಸಚಿವ ಆರ್.ಅಶೋಕ್, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಭಾಗಿಯಾಗಿದ್ದಾರೆ.

  • 17 Oct 2023 11:21 AM (IST)

    Karnataka News Live: ಜೆಡಿಎಸ್ ಅಂದ್ರೆ ದೇವೇಗೌಡರು, ದೇವೇಗೌಡರು ಅಂದ್ರೆ ಜೆಡಿಎಸ್; ಆರ್​ ಅಶೋಕ್​

    ಬೆಂಗಳೂರು: ನಮ್ಮದೇ ಒರಿಜಿನಲ್ ಜೆಡಿಎಸ್, ಬಿಜೆಪಿಯೊಂದಿಗಿನ ಮೈತ್ರಿಗೆ ಬೆಂಬಲ ಇಲ್ಲ ಎಂಬ ಸಿಎಂ ಇಬ್ರಾಹಿಂ ಹೇಳಿಕೆ  ಫ್ರೀಡಂ ಪಾರ್ಕ್ ಬಳಿ ಮಾಜಿ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಾರ್ಟಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರೊ ಹಳೆ ಶಾಸಕರನ್ನು ಇಟ್ಟಿಕೊಂಡು ನಿನ್ನೆ ಸಭೆ ಮಾಡಿದ್ದಾರೆ. ಜೆಡಿಎಸ್ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ನಿನ್ನೆ ಯಾರಿದ್ರೂ, ಎಷ್ಟು ಜನ ಶಾಸಕರು, ಮುಖಂಡರು ಇದ್ರು ಅನ್ನೋದು ನಿಮಗೆ ಗೊತ್ತಿದೆ. ಜೆಡಿಎಸ್ ಅಂದ್ರೆ ದೇವೇಗೌಡರು, ದೇವೇಗೌಡರು ಅಂದ್ರೆ ಜೆಡಿಎಸ್. ಸಿಎಂ ಇಬ್ರಾಹಿಂ ಮಾತನ್ನ ಕೇಳುವವರು ಯಾರು? ಪ್ರಶ್ನಿಸಿದರು.

  • 17 Oct 2023 10:49 AM (IST)

    Karnataka News Live: ಹಿಂದೂ ಕಾರ್ಯಕರ್ತ ಪ್ರಥ್ವಿರಾಜ್ ಮನೆಗೆ ರೇಣುಕಾಚಾರ್ಯ ಭೇಟಿ

    ದಾವಣಗೆರೆ: ಗಣಪತಿ ಶೋಭಾಯಾತ್ರೆ ಸಿದ್ಧತೆ ವೇಳೆ ಪ್ರಥ್ವಿರಾಜ್ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥ್ವಿರಾಜ್ ಮನೆಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿ ನೀಡಿದರು. ದಾವಣಗೆರೆಯ ಬಸವರಾಜಪೇಟ್ ನಿವಾಸಿ, ಹಿಂದೂ ಕಾರ್ಯಕರ್ತ ಪ್ರಥ್ವಿರಾಜ್ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಸಿದ್ಧತೆ ವೇಳೆ ಕ್ರೈನ್ ತಲೆಗೆ ಬಡಿದು ಮೃತಪಟಿದ್ದರು. ಪ್ರಥ್ವಿರಾಜ್ ಕುಟುಂಬದ ಸದಸ್ಯರಿಗೆ ರೇಣುಕಾಚಾರ್ಯ ಸಾಂತ್ವನ ಹೇಳಿದರು.

  • 17 Oct 2023 10:32 AM (IST)

    Karnataka News Live: ತೇವಲುಗೋಸ್ಕರ ಮಾತಬಾಡಬಾರದು, ಇಬ್ರಾಹಿಂ ವಿರುದ್ಧ ಸಮೃದ್ಧಿ ಮಂಜುನಾಥ್ ವಾಗ್ದಾಳಿ

    ಕೋಲಾರ: ಜೆಡಿಎಸ್ ನಲ್ಲಿ 19 ಶಾಸಕರು ಗೆದ್ದರೂ ನೋವಿನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಇಬ್ರಾಹಿಂ ಅವರ ತೇವಲುಗಳಿಗೆ‌ ಚಿಂತನಾ ಮಂಥನ ಕಾರ್ಯಕ್ರಮ‌ ಹಮ್ಮಿಕೊಳ್ಳುವುದು ಸೂಕ್ತವಲ್ಲ. ಇಬ್ರಾಹಿಂ ಅವರ ಗಮನಕ್ಕೆ ಬಾರೆದೆ ಪಕ್ಷದಲ್ಲಿ‌ ಏನು ನಡೆದಿಲ್ಲ. ಮತ್ತೊಂದು ದಿನ ನಾನು ಬಾಯಿ ಬಿಚ್ಚಬೇಕಾಗುತ್ತೆ. ಹೈಕಮಾಂಡ್ ನನಗೆ ಬಾಯಿ ಬಿಚ್ಚಲು ಅನುಮತಿ ನೀಡಿಲ್ಲ. ಅವರ ತೇವಲುಗೋಸ್ಕರ ಮಾತಬಾಡಬಾರದು. ಶಾಸಕರ‌ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ‌ ಸೋತ ಕಾರಣ ನೈತಿಕ ಹೊಣೆ ಹೊತ್ತು ಯುವ ಘಟಕಕ್ಕೆ ರಾಜಿನಾಮೇ ಕೊಟ್ಟರು. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದು‌ ಯಾರು? ಕುಮಾರಸ್ವಾಮಿ‌ ಅವರನ್ನು ‌ಪಕ್ಷದಿಂದ‌ ಉಚ್ಚಾಟನೆ ಮಾಡುವುದಾಗಿ ಹೇಳುವ ಇಬ್ರಾಹಿಂ, ಮೊದಲು ಅವರ ಆತ್ಮಸಾಕ್ಷ್ಮಿಯನ್ನು ಮುಟ್ಟಿ ನೋಡಿಕೊಳ್ಳಲಿ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿರುಗೇಟು ನೀಡಿದರು.

  • 17 Oct 2023 10:15 AM (IST)

    Karnataka News Live: ಇಬ್ರಾಹಿಂ ಅವರೇ ಒರಿಜಿನಲ್ ಎಂದು ಬೋರ್ಡ್​ ಹಾಕಿಕೊಳ್ಳಲಿ; ಕುಮಾರಸ್ವಾಮಿ

    ಬೆಂಗಳೂರು: ‘ಒರಿಜಿನಲ್ ಜೆಡಿಎಸ್​ ನಮ್ಮದೇ, ಅಧ್ಯಕ್ಷ ಸ್ಥಾನದಿಂದ ತೆಗೆಯಲು ಆಗಲ್ಲ’ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಸಿ.ಎಂ.ಇಬ್ರಾಹಿಂ ಅವರೇ ಒರಿಜಿನಲ್ ಎಂದು ಬೋರ್ಡ್​ ಹಾಕಿಕೊಳ್ಳಲಿ. ಉಚ್ಚಾಟನೆಯಾದರೂ ಮಾಡಲಿ ಏನಾದರೂ ಮಾಡಿಕೊಳ್ಳಲಿ ಅವರಿಗೆ ಬಿಟ್ಟಿದ್ದು. ನಾವು ಎಲ್ಲವನ್ನೂ ಸರಿ ಮಾಡುತ್ತೇವೆ. ಸಿ.ಎಂ.ಇಬ್ರಾಹಿಂ ಫ್ರೀ ಇದ್ದಾರೆ ಏನು ಬೇಕಾದರೂ ಮಾತನಾಡಲಿ. ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

  • 17 Oct 2023 09:59 AM (IST)

    Karnataka News Live: ಕೊಡಗು; ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ

    ಮಡಿಕೇರಿ: ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ  ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕಾವೇರಿ, ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವಾಗಲಿದೆ . ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

  • 17 Oct 2023 09:09 AM (IST)

    Karnataka News Live: ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಶಾಸಕ ಸಮೃದ್ದಿ ಮಂಜುನಾಥ್ ವಾಗ್ದಾಳಿ

    ಕೋಲಾರ: ರಾಜ್ಯದಲ್ಲಿ‌ ಎಟಿಎಂ‌ ಸರ್ಕಾರವಿದೆ. ಉಪ್ಪು ತಿಂದ‌ ಮೇಲೆ ನೀರು ಕುಡಿಯಲೇ‌‌ ಬೇಕು. ಇಷ್ಟು ದಿನ ಕಾಂಗ್ರೆಸ್ ನವರು 40%  ಸರ್ಕಾರ ಎನ್ನುತ್ತಿದ್ದರು. ಈಗ ಎರಡು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವುದನ್ನು ಜನತೆ ಗಮನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ಬಗ್ಗೆ ಕಾದು ನೋಡಬೇಕಾಗಿದೆ. ವರ್ಗಾವಣೆ‌ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಮುಳಬಾಗಲು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು.

  • 17 Oct 2023 08:42 AM (IST)

    Karnataka News Live: ಕಾಂಗ್ರೆಸ್​ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ

    ಬೆಂಗಳೂರು: ಪಂಚ ರಾಜ್ಯಗಳಿಗೆ ರಾಜ್ಯದಿಂದ ಹಣ ರವಾನೆ ಆರೋಪಿಸಿ ಪ್ರತಿಭಟನೆ ಇಂದು ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಬಿಜೆಪಿ ಪ್ರತಿಭಟನೆ ಮಾಡಲಿದೆ. ಪ್ರಕರಣವನ್ನ ಸಿಬಿಐಗೆ ವಹಿಸಿ ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಲಿದೆ. ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಮಾಜಿ ಸಚಿವ ಆರ್.ಅಶೋಕ್, ಸಿ.ಎನ್ ಅಶ್ವತ್ಥ್​ ನಾರಾಯಣ್, ಶಾಸಕ ಕೆ.ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಾಜಿ ಮೇಯರ್, ಬಿಬಿಎಂಪಿ ಮಾಜಿ ಸದಸ್ಯರುಗಳು ಭಾಗಿಯಾಗಲಿದ್ದಾರೆ.

  • 17 Oct 2023 08:11 AM (IST)

    Karnataka News Live: ಮೈಸೂರಿನ ಕಲಾಮಂದಿರದಲ್ಲಿ ಇಂದು ಲಲಿತಕಲೆ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಮೂರನೇ ದಿನವಾದ ಇಂದು ಮಕ್ಕಳಿಗೆ ಲಲಿತಕಲೆ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವ ಡಾ.ಹೆಚ್‌ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಕಾವ್ಯ ಸಂಭ್ರಮ, ಹಾಸ್ಯ ಚುಟುಕು ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಚಾಲನೆ ನೀಡಲಿದ್ದಾರೆ.

  • Published On - Oct 17,2023 8:08 AM

    Follow us
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
    ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ