ಬೆಂಗಳೂರು: ಬಹಳಷ್ಟು ಕಸರತ್ತಿನ ಬಳಿಕ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಸಚಿವ ಸಂಪುಟವನ್ನು ಇದೀಗತಾನೆ ರಚಿಸಿದ್ದಾರೆ. ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಸಚಿವರನ್ನು ಉಳಿಸಿಕೊಳ್ಳಲಾಗಿದೆ. 7 ಸಚಿವರಿಗೆ ಈ ಬಾರಿ ಕೊಕ್ ನೀಡಲಾಗಿದೆ. ಜೊತೆಗೆ ಹೊಸಬರನ್ನೂ ಸಿಎಂ ಬೊಮ್ಮಾಯಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನ ರಾಜಭವನದ ಗಾಜಿನ ಮನೆಯಲ್ಲಿ ನೂತನ 29 ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ನಡೆಸಿ, ಬಿಜೆಪಿ ಹೈಕಮಾಂಡ್ ಜೊತೆ ಸಮಾಲೋಚಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಡಿಸಿಎಂ ಇಲ್ಲ; ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಇಲ್ಲ:
ಈ ಬಾರಿ ಯಾರಿಗೂ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಇಲ್ಲವಾಗಿದೆ. ಡಿಸಿಎಂ ಸ್ಥಾನ ಸೃಷ್ಟಿಯ ಗೊಂದಲವೇ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಹೈಕಮಾಂಡ್ ಸದ್ಯಕ್ಕೆ ಡಿಸಿಎಂ ಸ್ಥಾನದ ಹಂಚಿಕೆ ಬೇಡ ಆಮೇಲೆ ನೋಡೋಣ ಎಂದಿದೆ. ಈ ಮಧ್ಯೆ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಸಂಪುಟದಲ್ಲಿ ಸ್ಥಾನ ಪಡೆದಿಲ್ಲ.
ಮಹಿಳಾ ಕೋಟಾದಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಮೊದಲ ಹಂತದ ಸಂಪುಟ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ತಮ್ಮ ಸಂಪುಟವನ್ನು ವಿಸ್ತರಣೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಬಾರಿ ಸಂಪುಟದಲ್ಲಿ ಅನುಭವ, ಹೊಸಬರು ಇದ್ದಾರೆ. 8 ಲಿಂಗಾಯತ, 7 ಒಬಿಸಿ, 3 ದಲಿತ, 1 ಎಸ್‌ಟಿ ಮತ್ತು ಮಹಿಳಾ ಶಾಸಕಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಂಪುಟ ರಚನೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೆಲ ಹಿರಿಯರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ 7 ಸಚಿವರಿಗೆ ಈ ಬಾರಿ ಕೊಕ್ ನೀಡಲಾಗಿದೆ: ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್, ಎಸ್. ಸುರೇಶ್ ಕುಮಾರ್, ಸಿ.ಪಿ.ಯೋಗೇಶ್ವರ್, ಶ್ರೀಮಂತ್ ಪಾಟೀಲ್, ಆರ್.ಶಂಕರ್, ಲಕ್ಷ್ಮಣ್ ಸವದಿ ಸಂಪುಟದಿಂದ ಹೊರಗೆ ಉಳಿದಿದ್ದಾರೆ.
ಈ ಬಾರಿ ಸಂಪುಟದಲ್ಲಿ 13 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ:
ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಮೈಸೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನವಿಲ್ಲ.
ಬೆಂಗಳೂರು ನಗರ ಜಿಲ್ಲೆಗೆ ಸಂಪುಟದಲ್ಲಿ ಬಂಪರ್
ಬೆಂಗಳೂರು ನಗರ ಜಿಲ್ಲೆಗೆ ಒಟ್ಟು 7 ಸಚಿವ ಸ್ಥಾನ ದೊರೆತಿದ್ದು, ಬೆಂಗಳೂರು ನಗರ ಜಿಲ್ಲೆಗೆ ಸಂಪುಟದಲ್ಲಿ ಬಂಪರ್ ಸಿಕ್ಕಿದೆ. ರಾಜ್ಯದ 7 ಜಿಲ್ಲೆಗಳಿಗೆ ಸಂಪುಟದಲ್ಲಿ ಡಬಲ್ ಧಮಾಕಾ – ಹಾವೇರಿ, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆ.
ಜಾತಿವಾರು ಮೂಲಕ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದವರ ವಿವರ:
ಲಿಂಗಾಯತರು:
ವಿ.ಸೋಮಣ್ಣ,
ಶಂಕರ್ ಪಾಟೀಲ್ ಮುನೇನಕೊಪ್ಪ
ಜೆ.ಸಿ.ಮಾಧುಸ್ವಾಮಿ
ಮುರುಗೇಶ್ ನಿರಾಣಿ
ಬಿ.ಸಿ.ಪಾಟೀಲ್
ಸಿ.ಸಿ.ಪಾಟೀಲ್
ಉಮೇಶ್ ಕತ್ತಿ
ಶಶಿಕಲಾ ಜೊಲ್ಲೆ
ಹಿಂದುಳಿದ ವರ್ಗ – ಕುರುಬ:
ಕೆ.ಎಸ್.ಈಶ್ವರಪ್ಪ
ಭೈರತಿ ಬಸವರಾಜ್
ಎಂಟಿಬಿ ನಾಗರಾಜ್
ಬಲಿಜ:
ಮುನಿರತ್ನ
ಈಡಿಗ:
ವಿ.ಸುನಿಲ್ ಕುಮಾರ್
ಕೋಟ ಶ್ರೀನಿವಾಸ ಪೂಜಾರಿ
ರಜಪೂತ:
ಆನಂದ್ ಸಿಂಗ್
ದಲಿತ:
ಎಸ್.ಅಂಗಾರ
ಗೋವಿಂದ ಕಾರಜೋಳ
ಪ್ರಭು ಚೌಹಾಣ್
ಬ್ರಾಹ್ಮಣ:
ಶಿವರಾಮ್ ಹೆಬ್ಬಾರ್
ಬಿ.ಸಿ. ನಾಗೇಶ್
ಎಸ್‌ಟಿ:
ಬಿ.ಶ್ರೀರಾಮುಲು
ಒಕ್ಕಲಿಗ:
ಸಿ.ಎನ್ ಅಶ್ವತ್ಥ್ ನಾರಾಯಣ ,
ಕೆ.ಸಿ.ನಾರಾಯಣ ಗೌಡ
ಆರ್.ಅಶೋಕ್
ಕೆ.ಸುಧಾಕರ್
ಆರಗ ಜ್ಞಾನೇಂದ್ರ
ಕೆ.ಗೋಪಾಲಯ್ಯ
ಎಸ್.ಟಿ ಸೋಮಶೇಖರ್
rnataka Cabinet: ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ನಾಳೆಯೇ ಅಸ್ತಿತ್ವಕ್ಕೆ: 24 ಮಂದಿಗೆ ಅವಕಾಶ ಸಾಧ್ಯತೆ
(Karnataka Cabinet Formation chief minister Basavaraj Bommai announces his maiden cabinet)
Published On - 11:31 am, Wed, 4 August 21