ಕರ್ನಾಟಕ ಕೇಬಲ್ ಟಿವಿ ಆಪರೇಟರುಗಳ ಒಕ್ಕೂಟಕ್ಕೆ ಇಂದು ಮಹತ್ವದ ದಿನವಾಗಿದ್ದು, ಬೆಂಗಳೂರಿನ ಕೋರಮಂಗಲದಲ್ಲಿ ಇಂದು ತನ್ನ ಸ್ವಂತ ಕಚೇರಿಯನ್ನು ತೆರೆದಿದೆ.
ಕರ್ನಾಟಕ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ (Karnataka Cable TV Operators Association) ಸ್ವಂತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಾದ್ಯಂತ ಎಲ್ಲ ಕೇಬಲ್ ಆಪರೇಟರುಗಳು ಪಾಲ್ಗೊಂಡಿದ್ದರು. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಸಮಾರಂಭವನ್ನು ಉದ್ಘಾಟಿಸಿ, ಮಾಧ್ಯಮದ ಜೊತೆ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಬಲ್ ಆಪರೇಟರುಗಳಿಗೆ ಶುಭಾಶಯ ಕೋರುವೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಈ ಸಂದರ್ಭದಲ್ಲಿ ಹೇಳಿದರು.
ಸ್ವಂತ ಕಚೇರಿ ಉದ್ಘಾಟನೆಗೊಂಡ ಈ ಮಹತ್ವದ ದಿನದಂದು ಒಕ್ಕೂಟದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಅವರು ಮಹತ್ತರ ಘೋಷಣೆಯೊಂದನ್ನು ಮಾಡಿದ್ದಾರೆ. ಕೇಬಲ್ ಆಪರೇಟರ್ಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ಕುಟುಂಬ ವರ್ಗಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಇದೀಗ ತಂತ್ರಜ್ಞಾನ ಯುಗ. ಅದಕ್ಕೆ ತಕ್ಕಂತೆ ನಾವೂ ತಂತ್ರಜ್ಞಾನದ ಉನ್ನತೀಕರಣ ಮಾಡಿಕೊಳ್ಳಬೇಕು. ಹಾಗಾಗಿ, ಗ್ರಾಮೀಣ ಭಾಗದ ಕೇಬಲ್ ಆಪರೇಟರುಗಳು ಮತ್ತು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಪ್ಯಾಟ್ರಿಕ್ ರಾಜು ಇದೇ ಸಂದರ್ಭದಲ್ಲಿ ಹೇಳಿದರು. ಇದೇ ವೇಳೆ ತಿರುಮಲೇಶ್ ದೇಸಾಯಿ ನೇತೃತ್ವದಲ್ಲಿ ಪ್ರತ್ಯೇಕ ಮಾಧ್ಯಮ ಮಾಹಿತಿ ವಿಭಾಗದ ನೆರವು ಪಡೆಯುವಂತೆ ಒಕ್ಕೂಟದ ಸದಸ್ಯರಿಗೆ ಅವರು ಕರೆ ನೀಡಿದರು.
ಇದನ್ನೂ ಓದಿ: ಫೈಬರ್ ಕೇಬಲ್ ಅಳವಡಿಕೆಯಲ್ಲಿ ಅಕ್ರಮ ಆರೋಪ: ವಿಜಯಪುರದ BSNL ಕಚೇರಿ ಮೇಲೆ CBI ದಾಳಿ
Published On - 1:40 pm, Fri, 26 March 21