ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತಾಗಿ ಇಂದು ಸಂತ್ರಸ್ತ ಯುವತಿಯ ವಿಚಾರಣೆ ನಡೆಯಲಿದೆ. ಈ ಕುರಿತಾಗಿ ಎಸ್‌ಐಟಿ 84 ಪ್ರಶ್ನೆಗಳನ್ನು ಯುವತಿಗೆ ಕೇಳಲು ಸಿದ್ಧತೆ ಮಾಡಿಕೊಂಡಿದೆ. ತನಿಖೆಯಲ್ಲಿ ಎದುರಾದ ಪ್ರಶ್ನೆಗೆ ಸಂತ್ರಸ್ತ ಯುವತಿ ಏನು ಉತ್ತರ ನೀಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಸಿದ್ದತೆ ಮಾಡಿಕೊಂಡ 84 ಪ್ರಶ್ನೆಗಳಲ್ಲಿ ಮೊದಲಿಗೆ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು. ಅಂದರೆ ರಮೇಶ್ ಜಾರಕಿಹೊಳಿ ಹಾಗೂ ಯುವತಿಯ ನಡುವಿನ ಪರಿಚಯದ ಕುರಿತಾಗಿ ಪ್ರಶ್ನೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಸ್‌ಐಟಿ ಸಿದ್ಧತೆ ಮಾಡಿಕೊಂಡಿರುವ ಪ್ರಶ್ನೆಗಳು ಈ ಕೆಳಗಿನಂತಿವೆ:
* ಯಾವ ಸರ್ಕಾರಿ ಉದ್ಯೋಗಕ್ಕೆ ಮಾತುಕತೆ ನಡೆದಿತ್ತು ..?
* ಯಾವ ಡಿಪಾರ್ಟ್‌ಮೆಂಟ್? ಯಾವ ಪೋಸ್ಟ್ ?
* ಅರ್ಜಿ ಹಾಕಿದ್ದೀರಾ ? ನಿಮಗೆ ಯಾರ ಮೂಲಕ ಜಾರಕಿಹೊಳಿ ಅವರ ಸಂಪರ್ಕವಾಯ್ತು ?
* ಯಾವ ಕಿರುಚಿತ್ರ ? ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿದ್ದರಾ?
* ರಮೇಶ್ ಜಾರಕಿಹೊಳಿ ಪೋನ್ ನಂ ಕೊಟ್ಟಿದ್ಯಾರು ?
* ಮೊದಲು ಭೇಟಿ ಯಾವಾಗ? ಸರ್ಕಾರಿ ಉದ್ಯೊಗ ಕೊಡಿಸ್ತೀನಿ ಎಂದು ಭರವಸೆ ಕೊಟ್ಟಿದ್ದು ಎಲ್ಲಿ?
* ಯಾವ ಅಪಾರ್ಟ್‌ಮೆಂಟ್‌ನಲ್ಲಿ ಸೇರಿದ್ರಿ ? ವಿಡಿಯೋ ಶೂಟ್ ಮಾಡಿದ್ದು ಯಾರು?
* ವಿಡಿಯೋ ಶೂಟ್ ಆದ ಮೇಲೆ ಕೆಲಸ ಆಯ್ತು ಅಂತ ಯಾರಿಗೆ ಕಾಲ್ ಮಾಡಿದ್ದಿರಿ?
* ವ್ಯಾನಿಟಿ ಬ್ಯಾಗ್‌ನಲ್ಲಿ ಕ್ಯಾಮರಾ ಯಾಕೆ ತೆಗದುಕೊಂಡು ಹೋಗಿದ್ದಿರಿ?
* ಕ್ಯಾಮರಾ ಇದ್ದ ಮೊಬೈಲ್ ಚಾರ್ಜ್‌ರ್‌ನಲ್ಲಿ ಹೇಗೆ ರೆಕಾರ್ಡ್ ಮಾಡಿಕೊಳ್ತೀರಾ?
* ವಿಡಿಯೋ ರೆಕಾರ್ಡ್ ಬಳಿಕ ಶ್ರವಣ್‌ರನ್ನ ಏಕೆ ಭೇಟಿಯಾದ್ರಿ?
* ಮೊದಲ ಬಾರಿ ಏಕೆ ವಿಡಿಯೋ ಮಾಡಲು ಸಮಸ್ಯೆಯಾಯಿತು?
* ಶ್ರವಣ್, ನರೇಶ್ ನಿಮಗೆ ಹೇಗೆ ಪರಿಚಯವಾಗಿದ್ದರು?
* ವಿಡಿಯೋ ಮಾಡಿದ ದಿನ ಅವರು ನಿಮಗೇಕೆ ಕಾಯುತ್ತಿದ್ದರು?
* ಅಪಾರ್ಟ್‌ಮೆಂಟ್‌ನ ಕೆಳಗೆ ಅವರೇಕೆ ಇದ್ದರು?
* ರೂಮ್‌ನಲ್ಲಿ 9 ಲಕ್ಷ 20 ಸಾವಿರ ದುಡ್ಡು ಎಲ್ಲಿಂದ ಬಂತು?
* ಮಾರ್ಚ್1ರಂದು ಶ್ರವಣ್, ನರೇಶ್ ಜತೆ ಏನು ಚರ್ಚಿಸಿದ್ರಿ?
* ಸೋದರನ ಬಳಿ ಡಿಕೆಶಿ ಹೆಸರು ಪ್ರಸ್ತಾಪ ಮಾಡಿದ್ದು ಏಕೆ?
* ಗೋವಾದಿಂದ ವಾಪಸ್ ಬಂದು ತಲೆಮರೆಸಿಕೊಂಡಿದ್ದು ಏಕೆ?
* ಈಗ ನರೇಶ್, ಶ್ರವಣ್ ಎಲ್ಲಿದ್ದಾರೆ?
ಹೀಗೆ ಇನ್ನೂ ಅನೇಕ ಪ್ರಶ್ನೆಗಳನ್ನು ಸಿಡಿ ಲೇಡಿಗೆ ಕೇಳಲು ಎಸ್‌ಐಟಿ ತಂಡ ಸಿದ್ಧವಾಗಿಸಿಕೊಂಡಿದೆ.
ಇದನ್ನೂ ಓದಿ: ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ
28 ದಿನಗಳ ಕಾಲ ಪತ್ತೆಯಾಗದ ಸಿಡಿ ಪ್ರಕರಣದ ಯುವತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ!
Published On - 12:45 pm, Wed, 31 March 21