ನನ್ನನ್ನು ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತಿದೆ: ಪೊಲೀಸರ ಮೇಲೆ ವಕೀಲ ಜಗದೀಶ್ ನೇರ ವಾಗ್ದಾಳಿ
ಇನ್ನು ಫೇಸ್‌ಬುಕ್ ಲೈವ್ ಬಳಿಕ ಟಿವಿ9 ಜೊತೆ ಮಾತನಾಡಿದ ವಕೀಲ ಜಗದೀಶ್ ಕುಮಾರ್ ಬೇಸತ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಸಂತ್ರಸ್ತೆ ವಿಡಿಯೋ ಪ್ರಸಾರ ಆಗಿದ್ದರ ಬಗ್ಗೆ ಬೇಸರ ಇದೆ. ಆರೋಪಿ ವಿರುದ್ದ ಸಾಕಷ್ಟು ಸಾಕ್ಷಿ ಇದೆ. ಕೆಲ ಸಾಕ್ಷ್ಯಾಧಾರಗಳನ್ನ ಕೊಟ್ಟಿದ್ದೀವಿ.
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ಗೆ ಸಂಬಂಧಿಸಿ ಸಿಡಿ ಯುವತಿ ಪರ ವಕೀಲ ಕೆ ಎನ್ ಜಗದೀಶ್ ಕುಮಾರ್ ಇದೀಗತಾನೆ ಫೇಸ್‌ಬುಕ್ ಲೈವ್ ಮಾಡಿದ್ದಾರೆ. ಯುವತಿಯನ್ನು ಆಕೆಯ ಕುಟುಂಬದವರೇ ಕೈಬಿಟ್ಟಿದ್ದಾರೆ. ನಾನೇ ಸಹೋದರನಾಗಿ ಯುವತಿಗೆ ನ್ಯಾಯ ಕೊಡಿಸುತ್ತಿದ್ದೇನೆ. ಈ ಹೋರಾಟದಲ್ಲಿ ನಾನು ಡೆಸ್ಟ್ರಾಯ್ ಆಗಲೂ ಸಿದ್ಧನಿದ್ದೇನೆ ಎಂದು ವಕೀಲ ಜಗದೀಶ್ ಫೇಸ್‌ಬುಕ್ ಲೈವ್ ವೇಳೆ ತಿಳಿಸಿದ್ದಾರೆ.
ಈ ವೇಳೆ ಫೇಸ್‌ಬುಕ್ ಲೈವ್ನಲ್ಲಿ ಮಾತನಾಡುತ್ತ ಎಸ್ಐಟಿ ಅಧಿಕಾರಿಗಳು ನನ್ನ ಕಕ್ಷಿದಾರರ ತನಿಖೆ ಮಾಡಿ, ನಿಮಗೆ ಸಂಪೂರ್ಣ ಅಧಿಕಾರವಿದೆ. ಪೋಲಿಸರು ಆರೋಪಿಗೆ ಸಹಾಯ ಮಾಡುತ್ತಿದೆ ಅನ್ನೋದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಆದ್ರೆ ಈ ಬಗ್ಗೆ ಎಸ್ಐಟಿ ಉತ್ತರ ಕೊಡುತ್ತಾ? ಹೆಣ್ಣು ಮಗುವನ್ನ ಖಾಸಗಿಯಾಗಿ ಕಾಪಾಡಲು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಯಾವುದೋ ಒಂದು ಫಾರಿನ್ ಮೂವಿ ರೀತಿ ರಕ್ಷಣೆ ನೀಡಿ ಕೋರ್ಟ್ಗೆ ಕರೆದುಕೊಂಡು ಬಂದಿದ್ದೇವೆ. ನಿನ್ನೆ ಕೋರ್ಟ್ನಲ್ಲಿ 500 ಕ್ಕೂ ಹೆಚ್ಚು ಲಾಯರ್ಗಳು ಭಾಗಿಯಾಗಿದ್ರು. ನಾವು ಯಾರನ್ನೂ ಕರೆದಿರಲಿಲ್ಲ. ನಮ್ಮ ಸೀನಿಯರ್ಸ್ ಬಂದು ನಮ್ಮ ಸಪೋರ್ಟ್ಗೆ ನಿಂತಿದ್ರು. ನಾವು ವಕಾಲತ್ತು ಹಾಕಿದ್ದಕ್ಕೆ ಯಾಕೆ ಆರೋಪಿಗಳಾಗುತ್ತೇವೆ. ನಾನು ಆಕೆಯನ್ನ ವಿಚಾರಣೆ ಮಾಡುವ ಸ್ಥಳದ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳೇ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದಾರೆ ಎಂದು ವಕೀಲ ಜಗದೀಶ್ ಫೇಸ್‌ಬುಕ್ ಲೈವ್ನಲ್ಲಿ ಆರೋಪಿಸಿದ್ದಾರೆ.
ನನ್ನನ್ನು ರೌಡಿ ಶೀಟರ್ ಎಂದು ಬಿಂಬಸಲಾಗುತ್ತಿದೆ ನನ್ನನ್ನು ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತಿದೆ ಎಂದು ವಕೀಲ ಜಗದೀಶ್ ಅವರು ಮಾಜಿ ಸಚಿವ, ಎಸ್‌ಐಟಿ ಹಾಗೂ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ನಾನು ನಂದಿ ಅಲ್ಲ ನಾನು ಜಗದೀಶ್. ಸರ್ಕಾರ ಬಿದ್ದು ಹೋಗುತ್ತದೆ ಎಂಬುದನ್ನು ನಾನು ಹೇಳ್ತಿಲ್ಲ. ನಿಮಗೇ ಗೊತ್ತಾಗುತ್ತೆ ಎಂದದು ಹೇಳಿದ ಜಗದೀಶ್, ಕಾಂಗ್ರೆಸ್ ವಕೀಲ ಇದ್ದ ಯುವತಿ ವಿಡಿಯೋವನ್ನು ಮಾಧ್ಯಮಗಳಿಗೆ ಪೊಲೀಸರೇ ನೀಡಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರೇ ವಿಡಿಯೋ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧವೂ ವಕೀಲ ಜಗದೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಕೈಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಪೂಲೀಸರ ವಿರುದ್ದ ಏಕವಚನ ಪ್ರಯೋಗ ಮಾಡಿದ್ರು.
ಸಂತ್ರಸ್ತೆಯ ಫೋಟೋ ವಿಡಿಯೋ ವೈರಲ್ ಬಗ್ಗೆ ಬೇಸರವಿದೆ ಇನ್ನು ಫೇಸ್‌ಬುಕ್ ಲೈವ್ ಬಳಿಕ ಟಿವಿ9 ಜೊತೆ ಮಾತನಾಡಿದ ವಕೀಲ ಜಗದೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಸಂತ್ರಸ್ತೆ ವಿಡಿಯೋ ಪ್ರಸಾರ ಆಗಿದ್ದರ ಬಗ್ಗೆ ಬೇಸರ ಇದೆ. ಆರೋಪಿ ವಿರುದ್ದ ಸಾಕಷ್ಟು ಸಾಕ್ಷಿ ಇದೆ. ಕೆಲ ಸಾಕ್ಷ್ಯಾಧಾರಗಳನ್ನ ಕೊಟ್ಟಿದ್ದೀವಿ. ವಿಚಾರಣೆ ನಡೆಸುತ್ತಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ಜಗದೀಶ್ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ