ವಾಚ್​ ಬೆನ್ನಲ್ಲೇ ಶುದ್ಧ ಹಸ್ತ ರಾಜಕಾರಣಿ ಎನಿಸಿಕೊಂಡ ಸಿದ್ದರಾಮಯ್ಯಗೆ ಮತ್ತೊಂದು ಗಿಫ್ಟ್ ಕಂಟಕ

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯವಾಗಿ ವಿಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರನ್ನು ಟೀಕಿಸುತ್ತವೆ. ಆದ್ರೆ, ಅಷ್ಟೇ ಸಿದ್ದರಾಮಯ್ಯನವರನ್ನು ಹೊಗಳುತ್ತಾರೆ. ಕಾರಣ ಅವರ ಮೇಲೆ ಒಂದೇ ಒಂದು ಹಗರಣ, ಭ್ರಷ್ಟಾಚಾರ ಪ್ರಕರಣಗಳು ಇಲ್ಲ. ಹೀಗಾಗಿ ಸಿದ್ದರಾಮಯ್ಯನವರ ಶುದ್ಧ ಹಸ್ತ ರಾಜಕಾರಣಿ ಎಂದು ಕರೆಯಲಾಗುತ್ತೆ. ಆದ್ರೆ, ಕಳೆದ ಬಾರಿ ಸಿಎಂ ಆಗಿದ್ದಾಗ ಹ್ಯೂಬ್ಲೊಟ್‌ ವಾಚ್‌ನ್ನು ಉಡುಗೊರೆಯಾಗಿ ಸ್ವೀಕರಿಸಿದ್ದು, ಅವರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಅದು ರಾಜಕೀಯವಾಗಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಆ ವಾಚ್​ ಆರೋಪ ಇನ್ನೂ ಕಾಡುತ್ತಿರುವಂತೆಯೇ ಸಿದ್ದರಾಮಯ್ಯಗೆ ಮತ್ತೊಂದು ಉಡುಗೊರೆ ಕಂಟಕ ಎದುರಾಗಿದೆ.

ವಾಚ್​ ಬೆನ್ನಲ್ಲೇ ಶುದ್ಧ ಹಸ್ತ ರಾಜಕಾರಣಿ ಎನಿಸಿಕೊಂಡ ಸಿದ್ದರಾಮಯ್ಯಗೆ ಮತ್ತೊಂದು ಗಿಫ್ಟ್ ಕಂಟಕ
ಸಿದ್ದರಾಮಯ್ಯ
Follow us
|

Updated on:Jul 02, 2024 | 6:11 PM

ಬೆಂಗಳೂರು, (ಜುಲೈ 02): ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ತಮ್ಮದೇ ಆದ ವರ್ಚಸ್ಸು ಇದೆ. ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗಿ ಬೊಟ್ಟು ಮಾಡುವಂತಹ ಭ್ರಷ್ಟಾಚಾರದ ಆರೋಪ ಇಲ್ಲ. ಯಾವುದೇ ಹಗರಣಗಳು ಅವರ ಸುತ್ತ ಸುತ್ತಿಕೊಂಡಿಲ್ಲ. ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ. ಆರ್ಕಾವತಿ ಹಗರಣ ಅವರು ಈ ಹಿಂದೆ ಸಿಎಂ ಆಗಿದ್ದಾಗ ಆರೋಪಗಳು ಕೇಳಿಬಂದಿದ್ದರೂ ಅದರಲ್ಲಿ ಇವರ ನೇರ ಪಾತ್ರದ ಬಗ್ಗೆ ಸಾಬೀತಾಗಿಲ್ಲ. ಅವರ ಪುತ್ರನ ಫೋನ್ ಸಂಭಾಷಣೆಯನ್ನು ಮುಂದಿಟ್ಟುಕೊಂಡು ವರ್ಗಾವಣೆ ದಂಧೆಯ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡಿದ್ದರೂ, ಅದು ಯಶಸ್ವಿಯಾಗಿಲ್ಲ. ಹೀಗಾಗಿ ವೈಯಕ್ತಿಕ ಭ್ರಷ್ಟಾಚಾರದ ಆರೋಪಗಳಿಲ್ಲದೇ. ಸಿದ್ದರಾಮಯ್ಯ ಅವರನ್ನು ಶುದ್ಧ ಹಸ್ತ ರಾಜಕಾರಣಿ ಎಂದು ಕರೆಯಲಾಗಿತ್ತೆ. ಆದ್ರೆ, ಅವರಿಗೆ ರಾಜಕೀಯವಾಗಿ ಕಾಡಿದ್ದು ಗಿಫ್ಟ್​. ಈ ಹಿಂದೆ ಅವರ ಸಿಎಂ ಆಗಿದ್ದಾಗ ಉದ್ಯಮಿಯೊಬ್ಬರಿಂದ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೊಟ್‌ ವಾಚ್‌ನ್ನು ಉಡುಗೊರೆಯಾಗಿ ಸ್ವೀಕರಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದರಿಂದ ಸಿದ್ದರಾಮಯ್ಯ ಮುಜುಗರಕ್ಕೀಡಾಗಿದ್ದರು. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರಿಗೆ ಮತ್ತೊಂದು ಗಿಫ್ಟ್​ ಕಂಟಕ ಎದುರಾಗಿದೆ. ಹೌದು… ಬಾಮೈದ ತಮ್ಮ ಹೆಂಡ್ತಿಗೆ ನೀಡಿರುವ ಜಮೀನು ಉಡುಗೊರೆ ಇದೀಗ ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿದೆ.

ಉದ್ಯಮಿಯೊಬ್ಬರಿಂದ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೊಟ್‌ ವಾಚ್‌ನ್ನು ಉಡುಗೊರೆಯಾಗಿ ಸ್ವೀಕರಿಸಿದ ಆರೋಪ ಇನ್ನೂ ಕಾಡುತ್ತಿರುವಂತೆಯೇ ಬಾಮೈದ ತಮ್ಮ ಪತ್ನಿಗೆ ನೀಡಿರುವ ಜಮೀನು ಉಡುಗೊರೆ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಮೊದಲಿಗೆ ಗಿಫ್ಟ್​ ಬಂದ ವಾಚ್​​​ನ ಪ್ರಕರಣದ ಬಗ್ಗೆ ನೋಡೋಣ.

ಇದನ್ನೂ ಒದಿ: ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್​​ ನೀಡಿದ್ದಾನೆ; ಸಿದ್ದರಾಮಯ್ಯ

ಸಿದ್ದರಾಮಯ್ಯಗೆ ಕಪ್ಪು ಚುಕ್ಕೆಯಾಗಿದ್ದ ವಾಚ್​ ಗಿಫ್ಟ್​

ಸಿದ್ದರಾಮಯ್ಯ ಅವರು ಹಿಂದೆ ಅಂದರೆ 2013ರಿಂದ 2018ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದರಿಂದ ಅವರಿಗೆ ಉದ್ಯಮಿಯೊಬ್ಬರು ವಜ್ರ ಖಚಿತ ಹ್ಯೂಬ್ಲೊಟ್‌ ವಾಚ್‌ನ್ನು ಉಡುಗೊರೆಯಾಗಿ ನೀಡಿದ್ದರು. ಆದ್ರೆ, ಗಿಫ್ಟ್​ ಬಂದ ವಾಚ್​ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿತ್ತು. ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದವು. ಹೋದ ಕಡೆಗಳಲ್ಲೆಲ್ಲ ವಾಚ್​ ಪ್ರಕರಣದ ಬಗ್ಗೆ ಕೆದುಕುತ್ತಿದ್ದವುದ್ದ. ಈ ಹಿನ್ನೆಲೆಯಲ್ಲಿ ಎಲ್ಲೂ ನೋಡಿದರೂ ವಾಚ್​ ಬಗ್ಗೆ ಚರ್ಚೆಗಳಾಗುತ್ತಿದ್ದವು. ಕೊನೆಗೆ ಈ ವಾಚ್​ ಪ್ರಕರಣ ಇದು ರಾಷ್ಟ್ರಮಟ್ಟ ಮಟ್ಟದ ಸುದ್ದಿ ಆಯ್ತು. ಇದಾದ ಬಳಿಕ ಸಿಎಂ ವಾಚ್​ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿತ್ತು. ಬಳಿಕ ಸಿದ್ದರಾಮಯ್ಯನವರು ತನಿಖೆಗಾಗಿ ವಾಚ್​ ಗಿಫ್ಟ್ ನೀಡಿದ್ದ ದುಬೈನ ಡಾ ವರ್ಮ ಎಂಬುವರು ಪ್ರಮಾಣ ಪತ್ರ ಸಲ್ಲಿಸಿ ರಸೀದಿ ಕೂಡ ನೀಡಿದ್ದರು.

ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ತಮಗೆ ಗಿಫ್ಟ್​ ಆಗಿ ಬಂದು ಪಜ್ರ ಖಚಿತ ವಾಚ್​ ಅನ್ನು ಸರ್ಕಾರಕ್ಕೆ ಒಪ್ಪಿಸಲು ನಿರ್ಧರಿಸಿದರು. ಅದರಂತೆ ಸಿದ್ದರಾಮಯ್ಯ ಅವರು 2026ರಲ್ಲಿ ನಡೆದ ಅಧಿವೇಶನದಲ್ಲಿ ಅಂದಿನ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರ ಮೂಲಕ ಹ್ಯೂಬ್ಲೊಟ್‌ ವಾಚ್‌ನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಆದರೂ ಸಹ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದ್ದರು. ವಾಚ್ ಎಲ್ಲಿಂದ ಬಂತು?, ವಾಚ್ ಉಡುಗೊರೆಯಾಗಿ ಕೊಟ್ಟ ಗಿರೀಶ್ ಚಂದ್ರ ವರ್ಮಾ ಯಾರು? ಎಂದು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ಕೊನೆಗೆ ಸಿದ್ದರಾಮಯ್ಯ ಅವರು ವಾಚ್‌ ಅನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಮೂಲಕ ಹಲವು ದಿನಗಳ ವಿವಾದಕ್ಕೆ ತೆರೆ ಎಳೆದಿದ್ದರು.

ಇದನ್ನೂ ಓದಿ: ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ

ವಾಚ್​ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಗಿಫ್ಟ್ ಕಂಟಕ

ವಾಚ್ ಪ್ರಕರಣ ಸಿದ್ದರಾಮಯ್ಯನವರ ರಾಜಕಾರಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯಾಗಿತ್ತು. ಇದಾದ ಬಳಿಕ ಇದೀಗ ಹೆಂಡ್ತಿಗೆ ಬಂದ ಜಮೀನು ಗಿಫ್ಟ್​ ಸಿದ್ದರಾಮಯ್ಯಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಹೌದು.. 1998ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ.

ಪತ್ನಿ ಪಾರ್ವತಿ ಅವರಿಗೆ ಮುಡಾ ಸೈಟ್​ ಹಂಚಿಕೆ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ,  ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿಲ್ಲ. ಆದರೆ ಮುಡಾದವರು ಆ ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೆ ಆಯ್ತು. ಅದಕ್ಕೆ ಮುಡಾದವರು ನಿಮಗೆ 50:50 ಅನುಪಾತದಲ್ಲಿ ಜಮೀನು ಕೊಡುತ್ತೇವೆ ಅಂದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ? ಕಾನೂನಿನ ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಒದಿ: ಮೈಸೂರು ಮುಡಾದಲ್ಲಿ ಹಗರಣ: ನಿವೇಶನಗಳ ಹಂಚಿಕೆ ರದ್ದು, ಅಧಿಕಾರಿಗಳ ತಲೆದಂಡ

ಇನ್ನೊಂದೆಡೆ ಈ ಬಗ್ಗೆ ವಿಪಕ್ಷಗಳ ಸಹ ಅರ್ಲರ್ಟ್ ಆಗಿದ್ದು, ಈ ಬಗ್ಗೆ ಸೂಕ್ತ ದಾಖಲೆಗಳನ್ನು ಕಲೆಹಾಕುತ್ತಿವೆ. ಎಲ್ಲಾ ದಾಖಲೆಗಳೊಂದಿಗೆ ಇದೇ ಜುಲೈ 15ರಿಂದ ಆರಂಭವಾಗುವ ಮುಂಗಾರು ಅಧೀವೇಶದಲ್ಲಿ ಚರ್ಚೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಿದ್ದರಾಮಯ್ಯನವರು ಯಾವ ರೀತಿ ಉತ್ತರ ಕೊಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ವಾಚ್​ ಗಿಫ್ಟ್​  ಸಿದ್ದರಾಮಯ್ಯನವರ ರಾಜಕೀಯಕ್ಕೆ  ಕಪ್ಪು ಚೆಕ್ಕೆ ತಂದಿರುವ ಬೆನ್ನಲ್ಲೇ ಇದೀಗ ಬಾಮೈದ ನೀಡಿರುವ ಜಮೀನು ಗಿಫ್ಟ್​ ಸಂಕಷ್ಟ ತಂದೊಡ್ಡಿದ್ದು, ಇದರಿಂದ ಹೇಗೆ ಪಾರಾಗುತ್ತಾರೆ ಎನ್ನುವುದೇ ಕುತೂಹಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:08 pm, Tue, 2 July 24

ತಾಜಾ ಸುದ್ದಿ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ