ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕಂಟಕಗಳ ಹಾದಿ, ಡಿಕೆಶಿ ಸಾರಥ್ಯಕ್ಕೆ ಕೊನೆ ಹಂತದಲ್ಲಿ ಅಡ್ಡಗಾಲು

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕಂಟಕಗಳ ಹಾದಿ, ಡಿಕೆಶಿ ಸಾರಥ್ಯಕ್ಕೆ ಕೊನೆ ಹಂತದಲ್ಲಿ ಅಡ್ಡಗಾಲು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಒಂದೇ ಮೆಟ್ಟಿಲು ಬಾಕಿ ಎಂಬಂತಹ ವಾತಾವರಣ ಸೃಷ್ಟಿಯಾಗಿರುವ ಬೆನ್ನಿಗೇ ರಾಜ್ಯ ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.ಶಿವಕುಮಾರ್​ಗೆ ಹಲವು ಕಂಟಕಗಳು ಎದುರಾಗಿದೆ. ಡಿಕೆಶಿ ಸಾರಥ್ಯಕ್ಕೆ ಕೊನೆಯ ಹಂತದಲ್ಲಿ ಕೆಲವರು ಜೋರಾಗಿಯೇ ಅಡ್ಡಗಾಲು ಹಅಕಿದ್ದಾರೆ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಟ್ವಿಸ್ಟ್​ ಪಡೆದುಕೊಳ್ತಿದೆ. ಸಭೆ ನಡೆಸಿ ಪ್ರಾಥಮಿಕ ನಿರ್ಧಾರ ಕೈಗೊಳ್ಳುವಂತೆ ಹೈಕಮಾಂಡ್​ ಸೂಚನೆ ನೀಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​, ಕೆ.ಹೆಚ್​​.ಮುನಿಯಪ್ಪ ಮತ್ತು ಡಾ.ಜಿ.ಪರಮೇಶ್ವರ್​​ ಮುಂತಾದ ಪ್ರಮುಖ ನಾಯಕರು ಚರ್ಚಿಸಿ, ಒಂದು ತೀರ್ಮಾನಕ್ಕೆ ಬರಬೇಕಿದೆ. ಬಳಿಕ […]

sadhu srinath

|

Dec 28, 2019 | 2:46 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಒಂದೇ ಮೆಟ್ಟಿಲು ಬಾಕಿ ಎಂಬಂತಹ ವಾತಾವರಣ ಸೃಷ್ಟಿಯಾಗಿರುವ ಬೆನ್ನಿಗೇ ರಾಜ್ಯ ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.ಶಿವಕುಮಾರ್​ಗೆ ಹಲವು ಕಂಟಕಗಳು ಎದುರಾಗಿದೆ. ಡಿಕೆಶಿ ಸಾರಥ್ಯಕ್ಕೆ ಕೊನೆಯ ಹಂತದಲ್ಲಿ ಕೆಲವರು ಜೋರಾಗಿಯೇ ಅಡ್ಡಗಾಲು ಹಅಕಿದ್ದಾರೆ.

ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಟ್ವಿಸ್ಟ್​ ಪಡೆದುಕೊಳ್ತಿದೆ. ಸಭೆ ನಡೆಸಿ ಪ್ರಾಥಮಿಕ ನಿರ್ಧಾರ ಕೈಗೊಳ್ಳುವಂತೆ ಹೈಕಮಾಂಡ್​ ಸೂಚನೆ ನೀಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​, ಕೆ.ಹೆಚ್​​.ಮುನಿಯಪ್ಪ ಮತ್ತು ಡಾ.ಜಿ.ಪರಮೇಶ್ವರ್​​ ಮುಂತಾದ ಪ್ರಮುಖ ನಾಯಕರು ಚರ್ಚಿಸಿ, ಒಂದು ತೀರ್ಮಾನಕ್ಕೆ ಬರಬೇಕಿದೆ. ಬಳಿಕ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಚರ್ಚೆ ಅಗತ್ಯವಿದೆ ಎಂದು ತಿಳಿದುಬಂದಿದೆ.

ಡಿಕೆಶಿ ಸಾರಥ್ಯಕ್ಕೆ ಕೊನೆಯ ಹಂತದಲ್ಲಿ ಕೆಲವರು ಅಡ್ಡಗಾಲು ಹಾಕಿದ್ದಾರೆ. ಜೆಡಿಎಸ್​​ ಜೊತೆ ಡಿಕೆಶಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಮುಂದೆ ಅಡ್ಜಸ್ಟ್​​ಮೆಂಟ್​​ ಸ್ಥಿತಿಗೆ ಹೋದ್ರೆ ಪಕ್ಷಕ್ಕೆ ಕಷ್ಟ ಎಂಬುದು ಒಂದು ತರ್ಕವಾದರೆ ಮತ್ತೊಂದು ದನಿಯಲ್ಲಿ ಒಂದು ವೇಳೆ ಡಿಕೆಶಿ ಮೇಲಿನ ಕೇಸ್​​ ವಿಚಾರ ಎತ್ತಲಾಗಿದೆ. ಅಕಸ್ಮಾತ್ ಇ.ಡಿ. ಕೇಸುಗಳು ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ಪಕ್ಷಕ್ಕೆ ಮುಜುಗರವಾಗಲಿದೆ. ಹೀಗಾಗಿ ಇನ್ನೊಮ್ಮೆ ಯೋಚನೆ ಮಾಡಿ. ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಮಾಡುವುದಕ್ಕೆ ಇನ್ನೊಮ್ಮೆ ಯೋಚಿಸಿ ಎಂದು ಕೆಲ ನಾಯಕರು ಪಕ್ಷದ ಹೈಕಮಾಂಡ್​​ಗೆ ಸಲಹೆ ಕೊಟ್ಟಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ ರಾಜ್ಯ ನಾಯಕರೂ ಒಮ್ಮೆ ಚರ್ಚಿಸಲಿ ಎಂದು ಹೈಕಮಾಂಡ್​ ಬಯಸಿದೆ ಎನ್ನುತ್ತವೆ ಪಕ್ಷದ ಮೂಲಗಳು.

Follow us on

Related Stories

Most Read Stories

Click on your DTH Provider to Add TV9 Kannada