AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,857 ಜನರಿಗೆ ಕೊರೊನಾ ದೃಢ; 29 ಮಂದಿ ಸಾವು

ಬೆಂಗಳೂರಲ್ಲಿ ಇಂದು ಒಂದೇ ದಿನ 551 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,24,595 ಕ್ಕೆ ಏರಿಕೆಯಾಗಿದೆ. 12,24,595 ಸೋಂಕಿತರ ಪೈಕಿ 12,00,419 ಜನರು ಗುಣಮುಖ ಆಗಿದ್ದಾರೆ.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,857 ಜನರಿಗೆ ಕೊರೊನಾ ದೃಢ; 29 ಮಂದಿ ಸಾವು
ಸಾಂಕೇತಿಕ ಚಿತ್ರ
TV9 Web
| Updated By: ganapathi bhat|

Updated on: Jul 24, 2021 | 9:16 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 24) ಹೊಸದಾಗಿ 1,857 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,93,556 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,33,276 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 29 ಜನರ ಸಾವು ಸಂಭವಿಸಿದೆ. ಅದರಂತೆ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36352 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ 23,905 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 551 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,24,595 ಕ್ಕೆ ಏರಿಕೆಯಾಗಿದೆ. 12,24,595 ಸೋಂಕಿತರ ಪೈಕಿ 12,00,419 ಜನರು ಗುಣಮುಖ ಆಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 9 ಜನರ ಬಲಿಯಾಗಿದೆ. ಅದರಂತೆ, ಕೊರೊನಾದಿಂದ ಈವರೆಗೆ 15,829 ಜನ ಸಾವನ್ನಪ್ಪಿದ್ದಾರೆ. 8,346 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ ಬಾಗಲಕೋಟೆ 1, ಬಳ್ಳಾರಿ 12, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 551, ಬೀದರ್ 1, ಚಾಮರಾಜನಗರ 34, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 57, ಚಿತ್ರದುರ್ಗ 14, ದಕ್ಷಿಣ ಕನ್ನಡ 269, ದಾವಣಗೆರೆ 16, ಧಾರವಾಡ 7, ಗದಗ 3, ಹಾಸನ 111, ಹಾವೇರಿ 6, ಕಲಬುರಗಿ 8, ಕೊಡಗು 79, ಕೋಲಾರ 23, ಕೊಪ್ಪಳ 2, ಮಂಡ್ಯ 37, ಮೈಸೂರು 177, ರಾಮನಗರ 1, ಶಿವಮೊಗ್ಗ 51, ತುಮಕೂರು 99, ಉಡುಪಿ 129, ಉತ್ತರ ಕನ್ನಡ 59, ವಿಜಯಪುರ ಜಿಲ್ಲೆಯಲ್ಲಿ 2 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ವರದಿ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 9 ಜನರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4, ಮೈಸೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯಲ್ಲಿಂದು ಕೊರೊನಾಗೆ ತಲಾ 2, ಉತ್ತರ ಕನ್ನಡ, ವಿಜಯಪುರ, ತುಮಕೂರು, ಶಿವಮೊಗ್ಗ, ರಾಮನಗರ, ಕೋಲಾರ, ಕೊಡಗು, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿಂದು ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,352 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: IND vs ENG: ಟೆಸ್ಟ್ ಸರಣಿಗೆ ಕೊಹ್ಲಿ ಪಡೆ ರೆಡಿ.. ಕೊರೊನಾ ಗೆದ್ದು ಟೀಂ ಇಂಡಿಯಾ ಸೇರಿಕೊಂಡ ಇಬ್ಬರು ಕ್ರಿಕೆಟಿಗರು

Tokyo Olympics: ಚಿಲಿ ಮತ್ತು ನೆದರ್‌ಲ್ಯಾಂಡ್ಸ್‌ ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ಪತ್ತೆ; ಒಟ್ಟು 8 ಆಟಗಾರರಿಗೆ ಸೋಂಕು ಧೃಡ

(Karnataka Corona Virus Covid 19 New Cases Death Toll Active Cases Bengaluru Coronavirus)