Karnataka Covid Update: ಕರ್ನಾಟಕದಲ್ಲಿ ಇಂದು 1,213 ಜನರಿಗೆ ಕೊವಿಡ್ ದೃಢ, 25 ಜನರು ನಿಧನ
ಇಂದು ಖಚಿತಪಟ್ಟ ಕೊವಿಡ್ ಸೋಂಕು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಯುತ್ತಿದೆ ಎಂಬ ಭಾವನೆ ಮೂಡಿಸುವಂತಿದೆ. ಆದರೆ ಯಾವುದೇ ಕಾರಣಕ್ಕೂ ಕೊವಿಡ್ ತಡೆ ನಿಯಮಗಳನ್ನು ಮರೆಯುವಂತಿಲ್ಲ.
ಬೆಂಗಳೂರು: ಕರ್ನಾಟಕದಲ್ಲಿ ಇಂದು 1,213 ಹೊಸ ಕೊವಿಡ್ ಪ್ರಕರಣಗಳು ದೃಢಪಟ್ಟಿದ್ದು, 25 ಜನರು ನಿಧನರಾಗಿದ್ದಾರೆ. ಇಂದು ರಾಜ್ಯದ ವಿವಿಧ ಕೊವಿಡ್ ಆಸ್ಪತ್ರೆಗಳಿಂದ 1,206 ಜನರು ಕೊವಿಡ್ ಸೋಂಕುಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 19,300 ಕೊವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಅಂದಹಾಗೆ ಇಂದಿನ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 0.64. ಇಂದು ಖಚಿತಪಟ್ಟ ಸೋಂಕಿತರ ಸಂಖ್ಯೆಯೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 29,43,463ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 319 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದೆ. ಇಬ್ಬರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದ ದಕ್ಷಿಣ ಕನ್ನಡದಲ್ಲಿಯೂ ಇಂದು ಕೊಂಚ ಇಳಿಮುಖ ಕಂಡುಬಂದಿದೆ. ಇಂದು ದಕ್ಷಿಣ ಕನ್ನಡದಲ್ಲಿ 269 ಪ್ರಕರಣಗಳು ಖಚಿತಗೊಂಡಿದ್ದರೆ, ಉಡುಪಿಯಲ್ಲಿ 113 ಜನರಿಗೆ ಕೊವಿಡ್ ದೃಢಪಟ್ಟಿದೆ. ಮೈಸೂರಿನಲ್ಲಿ 98, ಹಾಸನದಲ್ಲಿ 90 ಜನರಿಗೆ ಕೊವಿಡ್ ಖಚಿತಗೊಂಡಿದೆ.
ರಾಜ್ಯದಾದ್ಯಂತ ಇಂದು 1,18,187 ಜನರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. ಇಂದು ಖಚಿತಪಟ್ಟ ಕೊವಿಡ್ ಸೋಂಕು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಯುತ್ತಿದೆ ಎಂಬ ಭಾವನೆ ಮೂಡಿಸುವಂತಿದೆ. ಆದರೆ ಯಾವುದೇ ಕಾರಣಕ್ಕೂ ಕೊವಿಡ್ ತಡೆ ನಿಯಮಗಳನ್ನು ಮರೆಯುವಂತಿಲ್ಲ.
ಇಂದಿನ 26/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/Qtn8SjqxkH @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/dCxBDc47PX
— K’taka Health Dept (@DHFWKA) August 26, 2021
ಇದನ್ನೂ ಓದಿ:
ರಾಜ್ಯಕ್ಕೆ ಪ್ರತಿದಿನ 5 ಲಕ್ಷ ಡೋಸ್ ಕೊವಿಡ್ ಲಸಿಕೆ ನೀಡಲು ಕೇಂದ್ರ ಒಪ್ಪಿದೆ: ಸಿಎಂ ಬೊಮ್ಮಾಯಿ
ಆಗಸ್ಟ್ 30ರಂದು 1ರಿಂದ 8 ನೇ ತರಗತಿವರೆಗಿನ ಶಾಲೆ ಆರಂಭದ ಕುರಿತು ಅಂತಿಮ ತೀರ್ಮಾನ: ಶಿಕ್ಷಣ ಸಚಿವ ಬಿ ಸಿ ನಾಗೇಶ್
(Karnataka Covid 19 update 1213 new cases and 25 death in state)