AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid 19 Update: ಕರ್ನಾಟಕದಲ್ಲಿ 889 ಜನರಲ್ಲಿ ಕೊವಿಡ್ ದೃಢ, 1080 ಜನರು ಗುಣಮುಖ

ಕರ್ನಾಟಕದಲ್ಲಿ ಕೊವಿಡ್ ಸೋಂಕು ಹೆಚ್ಚುತ್ತಿದೆಯಾ? ಕಡಿಮೆಯಾಗುತ್ತಿದೆಯಾ? ಓದಿ

Karnataka Covid 19 Update: ಕರ್ನಾಟಕದಲ್ಲಿ 889 ಜನರಲ್ಲಿ ಕೊವಿಡ್ ದೃಢ, 1080 ಜನರು ಗುಣಮುಖ
ಕೊವಿಡ್ 19 ಲಸಿಕೆ
TV9 Web
| Updated By: guruganesh bhat|

Updated on: Sep 18, 2021 | 8:39 PM

Share

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 889 ಜನರಲ್ಲಿ ಕೊವಿಡ್ ಸೋಂಕು ಹೊಸದಾಗಿ ಪತ್ತೆಯಾಗಿದ್ದಾರೆ. ರಾಜಧಾನಿ ಬೆಂಗಳೂರು ನಗರದಲ್ಲಿ 263 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 15,755 ಜನರಲ್ಲಿ ಕೊವಿಡ್ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,080 ಜನರು ಕೊವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ. ಮತ್ತು 14 ಜನರು ಕೊವಿಡ್ನಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 263 ಪ್ರಕರಣ ಹೊರತುಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 133, ಉಡುಪಿಯಲ್ಲಿ 86, ಮೈಸೂರಿನಲ್ಲಿ 74, ತುಮಕೂರು ಜಿಲ್ಲೆಯಲ್ಲಿ 27 ಜನರಲ್ಲಿ ಕೊವಿಡ್ ಸೋಂಕು ಖಚಿತಪಟ್ಟಿರುವುದು ವರದಿಯಾಗಿದೆ. ಈವರೆಗೆ ಕರ್ನಾಟಕದಲ್ಲಿ 29,69,083 ಜನರಿಗೆ ಕೊವಿಡ್ ಸೋಂಕು ತಗುಲಿದ್ದು, ಅವರ ಪೈಕಿ 29,13,713ವ ಜನರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ:  

Covid Vaccine | ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್

ಅಕ್ಟೋಬರ್-ನವೆಂಬರ್‌ ಅತ್ಯಂತ ನಿರ್ಣಾಯಕ, ಕೊವಿಡ್ ಉಲ್ಬಣಕ್ಕೆ ಅವಕಾಶ ನೀಡಬಾರದು : ಕೇಂದ್ರ ಸರ್ಕಾರ

(Karnataka Covid 19 Update 889 new cases and 1080 discharged)