Covid 19 Karnataka Update: ಕರ್ನಾಟಕದಲ್ಲಿ 851 ಮಂದಿಗೆ ಕೊರೊನಾ ಸೋಂಕು, 15 ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 07, 2021 | 7:50 PM

ಕರ್ನಾಟದಲ್ಲಿ ಮಂಗಳವಾರ ಒಟ್ಟು 851 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 851 ಮಂದಿಗೆ ಕೊರೊನಾ ಸೋಂಕು, 15 ಸಾವು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟದಲ್ಲಿ ಮಂಗಳವಾರ ಒಟ್ಟು 851 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡು 790 ಜನರು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 0.71 ಇದ್ದರೆ, ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 1.76 ಇದೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 17,432 ಸಕ್ರಿಯ ಪ್ರಕರಣಗಳಿವೆ. ಈವರೆಗೆ 29,56,988 ಮಂದಿಯಲ್ಲಿ ಸೋಂಕು ಖಚಿತವಾಗಿದ್ದು, 29,02,089 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 37,441 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದ 248 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 362 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 12,39,972 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,16,873 ಮಂದಿ ಚೇತರಿಸಿಕೊಂಡಿದ್ದಾರೆ. 7063 ಸಕ್ರಿಯ ಪ್ರಕರಣಗಳಿವೆ. ಈವರೆಗೆ 16,035 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 248, ದಕ್ಷಿಣ ಕನ್ನಡ 227, ಉಡುಪಿ 74, ಮೈಸೂರು 53, ಚಿಕ್ಕಮಗಳೂರು 49, ತುಮಕೂರು 44, ಕೊಡಗು 31, ಹಾಸನ 25, ಶಿವಮೊಗ್ಗ 20, ಮಂಡ್ಯ 12, ಕೋಲಾರ 10, ದಾವಣಗೆರೆ 9, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ 8, ಚಾಮರಾಜನಗರ 7, ಚಿತ್ರದುರ್ಗ 4, ಕಲಬುರಗಿ, ಬಳ್ಳಾರಿ 3, ಚಿಕ್ಕಬಳ್ಳಾಪುರ, ರಾಯಚೂರು 2, ಬೆಳಗಾವಿ, ಬೀದರ್, ರಾಮನಗರ, ಹಾವೇರಿ, ಯಾದಗಿರಿ 1.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ದಕ್ಷಿಣ ಕನ್ನಡ 4, ಬೆಂಗಳೂರು ನಗರ 3, ಕೊಡಗು, ಮೈಸೂರು, ಶಿವಮೊಗ್ಗ 2, ಹಾಸನ, ಉತ್ತರ ಕನ್ನಡ 1.

(Karnataka Covid Numbers 851 infected 15 deaths due to coronavirus on September 7)

ಇದನ್ನೂ ಓದಿ: ಕೇರಳದಲ್ಲಿ 25,772 ಹೊಸ ಕೊವಿಡ್ ಪ್ರಕರಣ ಪತ್ತೆ; ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್​​ಡೌನ್ ಇರಲ್ಲ: ಪಿಣರಾಯಿ ವಿಜಯನ್

ಇದನ್ನೂ ಓದಿ: Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?