ಕೇರಳದಲ್ಲಿ 25,772 ಹೊಸ ಕೊವಿಡ್ ಪ್ರಕರಣ ಪತ್ತೆ; ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್ಡೌನ್ ಇರಲ್ಲ: ಪಿಣರಾಯಿ ವಿಜಯನ್
Kerala: ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್ ನಿರ್ಧಾರ ಹಿಂಪಡೆಯಲು ಉನ್ನತ ಮಟ್ಟದ ಯೋಗದಲ್ಲಿ ನಿರ್ಧರಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ನಿರ್ಧಾರವನ್ನು ಸರ್ಕಾರ ಹಿಂಪಡೆದಿದೆ.
ತಿರುವನಂತಪುರಂ: ಕೇರಳದಲ್ಲಿ ಇಂದು 25,772 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಎರ್ನಾಕುಲಂ -3194, ಮಲಪ್ಪುರಂ- 2952, ಕೋಯಿಕ್ಕೋಡ್-2669, ತ್ರಿಶ್ಶೂರ್ -2557, ಕೊಲ್ಲಂ -2548, ಪಾಲಕ್ಕಾಡ್ -2332, ಕೋಟ್ಟಯಂ- 1814, ತಿರುವನಂತಪುರಂ- 1686, ಕಣ್ಣೂರ್ -1649, ಆಲಪ್ಪುಳ- 1435, ಪತ್ತನಂತಿಟ್ಟ- 1016, ಇಡುಕ್ಕಿ 925, ವಯನಾಡು -607, ಕಾಸರಗೋಡು- 388 ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,62,428 ಮಾದರಿಗಳನ್ನು ಪರಿಶೀಲಿಸಲಾಗಿದೆ. ಟೆಸ್ಟ್ ಪೋಸಿಟಿವಿಟಿ ದರ 15.87 ಆಗಿದೆ. ಇದುವರೆಗೆ 3,26,70,564 ಒಟ್ಟು ಮಾದರಿಗಳನ್ನು ಪರಿಶೀಲಿಸಲಾಗಿದೆ. ಪ್ರತಿವಾರ ಇನ್ಫೆಕ್ಷನ್ ಪೊಪ್ಪುಲೇಷನ್ ದರ ಏಳಕ್ಕಿಂತ ಹೆಚ್ಚು ಇರುವ 296 ಸ್ಥಳೀಯ ಆಡಳಿತ ಪ್ರದೇಶಗಳಿವೆ. ಅದರಲ್ಲಿ 81 ನಗರ ಪ್ರದೇಶಗಳಾಗಿದ್ದು , 215 ಗ್ರಾಮ ಪ್ರದೇಶಗಳಾಗಿವೆ. ಕಳೆದ ದಿನಗಳಲ್ಲಿರುವ 189 ಸಾವಿಗೆ ಕೊವಿಡ್ ಕಾರಣ ಎಂದು ಇವತ್ತು ದೃಢಪಟ್ಟಿದೆ. ಒಟ್ಟು ಸಾವಿನ ಸಂಖ್ಯೆ 21,820 ಆಗಿದೆ.
ಇಂದು ರೋಗ ದೃಢೀಕರಿಸಿದವರಲ್ಲಿ 133 ಮಂದಿ ಹೊರ ರಾಜ್ಯದಿಂದ ಬಂದವರು. 24,253ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿತವಾಗಿದೆ. 1261 ಮಂದಿಯ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. 125 ಆರೋಗ್ಯ ಕಾರ್ಯಕರ್ತರು ರೋಗ ಬಾಧಿತರಾಗಿದ್ದಾರೆ.
ರೋಗ ದೃಢಪಟ್ಟು ಚಿಕಿತ್ಸೆಯಲ್ಲಿರುವ 27,320 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡವರ ಜಿಲ್ಲಾವಾರು ಲೆಕ್ಕ ಇಂತಿದೆ. ತಿರುವನಂತಪುರಂ -2085, ಕೊಲ್ಲಂ -3490, ಪತ್ತನಂತಿಟ್ಟ- 1243, ಆಲಪ್ಪುಳ- 1909, ಕೋಟ್ಟಯಂ- 1457, ಇಡುಕ್ಕಿ- 422, ಎರ್ನಾಕುಲಂ- 2319, ತ್ರಿಶ್ಶೂರ್- 2776, ಪಾಲಕ್ಕಾಡ್- 1996, ಮಲಪ್ಪುರಂ 3964, ಕೋಯಿಕ್ಕೋಡ್-3319, ವಯನಾಡು -914, ಕಣ್ಣೂರ್- 914, ಕಾಸರಗೋಡಿನಲ್ಲಿ 512 ಮಂದಿ ಚೇತರಿಸಿಕೊಂಡಿದ್ದಾರೆ. 2,37,045 ರೋಗಿಗಳು ಚಿಕಿತ್ಸೆಯಲ್ಲಿದ್ದು. 39,93,877 ಮಂದಿ ಕೊವಿಡ್ನಿಂದ ಚೇತರಿಸಿದ್ದಾರೆ.
ರಾಜ್ಯವನ್ನು ವಿವಿಧ ಜಿಲ್ಲೆಗಳಾಗಿ 6,18,684 ಜನರು ಈಗ ನಿಗಾದಲ್ಲಿದ್ದಾರೆ. ಇವರಿನಲ್ಲಿ 5,85,749 ಮಂದಿ ಮನೆ/ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿದ್ದು 32,93 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 2464 ಮಂದಿಯನ್ನು ಆಸ್ಪತ್ರೆಗೆ ಪ್ರವೇಶಿಸಲಾಯಿತು.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್ಡೌನ್ ಇಲ್ಲ: ಪಿಣರಾಯಿ ವಿಜಯನ್ ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್ ನಿರ್ಧಾರ ಹಿಂಪಡೆಯಲು ಉನ್ನತ ಮಟ್ಟದ ಯೋಗದಲ್ಲಿ ನಿರ್ಧರಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ನಿರ್ಧಾರವನ್ನು ಸರ್ಕಾರ ಹಿಂಪಡೆದಿದೆ. ಭಾನುವಾರ ಲಾಕ್ ಡೌನ್ ಘೋಷಿಸಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು ಭಾನುವಾರದ ಲಾಕ್ ಡೌನ್ ಶನಿವಾರದ ನೂಕು ನುಗ್ಗಲಿಗೆ ಮಾತ್ರ ಸಹಕರಿಸುತ್ತದೆ ಎಂದು ವಿಪಕ್ಷ ಟೀಕಿಸಿತ್ತು.
ರಾಜ್ಯದ ರೆಸಿಡೆನ್ಶಿಯಲ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ವಯಸ್ಸಿನ ಮೇಲಿನ ತರಬೇತಿ ಸಂಸ್ಥೆಗಳು, ಬಯೋಬಲ್ ಮಾದರಿಯಲ್ಲಿ ಒಂದು ಡಾಸ್ ವ್ಯಾಕ್ಸೀನ್ ಪೂರ್ಣಗೊಳಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: Nipah Virus: ಕೊವಿಡ್ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?
ಇದನ್ನೂ ಓದಿ: Coronavirus cases in India: ಭಾರತದಲ್ಲಿ 31,222 ಹೊಸ ಕೊವಿಡ್ ಪ್ರಕರಣ ಪತ್ತೆ, 290 ಮಂದಿ ಸಾವು
(Kerala reports 25,772 new coronavirus cases 27,320 recoveries and 189 deaths on Tuesday)