ವಿಕೆ ಶಶಿಕಲಾಗೆ ಜೈಲಿನಲ್ಲಿ ಸೌಕರ್ಯ ಕಲ್ಪಿಸಲು ಲಂಚ ಪಡೆದ ಆರೋಪ; ತನಿಖಾ ವರದಿ ಸಲ್ಲಿಕೆ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ
Karnataka HC: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಗೆ ಶಿಕ್ಷೆ ನೀಡಲಾಗಿತ್ತು. ಜೈಲಿನಲ್ಲಿದ್ದಾಗ ಲಂಚ ಪಡೆದು ವಿ.ಕೆ. ಶಶಿಕಲಾಗೆ ಸೌಲಭ್ಯ ಒದಗಿಸಿರುವ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಎಸಿಬಿ ದೂರು ದಾಖಲಿಸಿಕೊಂಡಿತ್ತು.
ಬೆಂಗಳೂರು: ಜೈಲಿನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಗೆ ಸೌಕರ್ಯ ಕಲ್ಪಿಸಲು ಲಂಚ ಆರೋಪಕ್ಕೆ ಸಂಬಂಧಿಸಿ, ಅಧಿಕಾರಿಗಳ ವಿರುದ್ಧ ತನಿಖಾ ವರದಿ ಸಲ್ಲಿಕೆ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ಹೊರಹಾಕಿದೆ. 1 ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸದಿದ್ದರೆ ಹಾಜರಾಗಬೇಕು. ಗೃಹ ಕಾರ್ಯದರ್ಶಿ ಹಾಜರಾಗಬೇಕೆಂದು ಸೂಚನೆ ನೀಡಿದೆ.
ತನಿಖೆ ಪೂರ್ಣಗೊಂಡಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿದೆ. ಸಕ್ಷಮ ಪ್ರಾಧಿಕಾರ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಿದೆ. ಅನುಮತಿ ಸಿಕ್ಕ ಕೂಡಲೇ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೈಕೋರ್ಟ್‌ಗೆ ಎಸಿಬಿಯಿಂದ ಪ್ರಮಾಣಪತ್ರ ಸಲ್ಲಿಕೆ ಮಾಡಲಾಗಿದೆ. ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ನಿಗದಿಪಡಿಸಿದೆ. ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆ ನೀಡಲಾಗಿತ್ತು. ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಗೆ ಶಿಕ್ಷೆ ನೀಡಲಾಗಿತ್ತು. ಜೈಲಿನಲ್ಲಿದ್ದಾಗ ಲಂಚ ಪಡೆದು ವಿ.ಕೆ. ಶಶಿಕಲಾಗೆ ಸೌಲಭ್ಯ ಒದಗಿಸಿರುವ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಎಸಿಬಿ ದೂರು ದಾಖಲಿಸಿಕೊಂಡಿತ್ತು. ತನಿಖೆ ವಿಳಂಬ ಪ್ರಶ್ನಿಸಿ ಕೆ.ಎಸ್. ಗೀತಾ ಪಿಐಎಲ್ ಸಲ್ಲಿಸಿದ್ದರು.
ಬಿಬಿಎಂಪಿ ಮಳಿಗೆ ಹಂಚಿಕೆ- ಹೈಕೋರ್ಟ್ ಅಸಮಾಧಾನ ಟೆಂಡರ್ ಕರೆಯದೆ ಬಿಬಿಎಂಪಿ ಮಳಿಗೆ ಹಂಚಿದ ಆರೋಪದಡಿ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಏಕೆ ದಾಖಲಿಸಬಾರದು ಎಂದು ಪ್ರಶ್ನಿಸಿದ ಹೈಕೋರ್ಟ್, ಕಾರಣ ಕೇಳಿ ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನ ಮಳಿಗೆಯೊಂದನ್ನು ಟೆಂಡರ್ ಮೂಲಕವೇ ಹಂಚಲಾಗುವುದು ಎಂದು ಈ ಹಿಂದೆ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ತದನಂತರ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದಂತೆ ಬಿಬಿಎಂಪಿ ನಡೆದುಕೊಂಡಿರಲಿಲ್ಲ. ಟೆಂಡರ್ ಕರೆಯದೇ ಮಳಿಗೆಗಳ ಹಂಚಿಕೆ ಮಾಡಿತ್ತು. ಬಿಬಿಎಂಪಿಯ ಈ ನಡೆಯ ಕುರಿತು ಎಂ.ಶರಣು ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿಯ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ವಿಳಂಬ ಮಾಡದೇ ತನಿಖೆ ನಡೆಸಿ ಸಬ್ ರಿಜಿಸ್ಟ್ರಾರ್ ಕಚೇರಿಗಳ ಫ್ರಾಂಕಿಂಗ್ ನಕಲು ಆರೋಪದ ಸಿಬಿಐ ತನಿಖೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಪ್ರಕರಣದ ಬಗ್ಗೆ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ತನಿಖೆಯ ಹೊಣೆಯನ್ನ ಹಿರಿಯ ಅಧಿಕಾರಿಗೆ ವಹಿಸಲಾಗಿದೆ. ಹೀಗಾಗಿ ತನಿಖೆಗೆ 3 ತಿಂಗಳ ಕಾಲಾವಕಾಶ ರಾಜ್ಯ ಸರ್ಕಾರ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ವಿಳಂಬ ಮಾಡದಂತೆ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ.
ಇದನ್ನೂ ಓದಿ: ಹೈಕೋರ್ಟ್ ಸುದ್ದಿಗಳು: ರಸ್ತೆಗಳಲ್ಲಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ನಿರ್ಬಂಧ
ಇದನ್ನೂ ಓದಿ: ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ವಜಾ; ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ
Published On - 8:28 pm, Tue, 7 September 21