Karnataka Covid Update: ಕರ್ನಾಟಕದಲ್ಲಿ ಇಂದು 5,815 ಜನರಿಗೆ ಕೊವಿಡ್ ದೃಢ, 161 ಜನರು ನಿಧನ; ಪಾಸಿಟಿವಿಟಿ ದರ ಶೇ 3.38
ಇಂದು ರಾಜ್ಯದಲ್ಲಿ 11,832 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇಂದಿನ ಕೊವಿಡ್ ಸೋಂಕಿತರನ್ನೂ ಸೇರಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದು 5,815 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 161 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 1,263 ಜನರಿಗೆ ಸೋಂಕು ಖಚಿತವಾಗಿದ್ದು, 23 ಜನರು ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 11,832 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇಂದಿನ ಕೊವಿಡ್ ಸೋಂಕಿತರನ್ನೂ ಸೇರಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 26,37,279 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 33,763 ಜನರ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ 1,263, ದಕ್ಷಿಣ ಕನ್ನಡ ಜಿಲ್ಲೆ 832, ಮೈಸೂರು 594, ಹಾಸನ 391, ಶಿವಮೊಗ್ಗ 223, ಬೆಳಗಾವಿ 222, ಮಂಡ್ಯ 208, ದಾವಣಗೆರೆ 194, ತುಮಕೂರು 182, ಚಿಕ್ಕಮಗಳೂರು 177, ಉಡುಪಿ 174, ಬೆಂಗಳೂರು ಗ್ರಾಮಾಂತರ 161, ಉತ್ತರ ಕನ್ನಡ 144, ಕೊಡಗು 135, ಕೋಲಾರ 132, ಬಳ್ಳಾರಿ 128, ಚಾಮರಾಜನಗರ 113, ಚಿತ್ರದುರ್ಗ 113, ಚಿಕ್ಕಬಳ್ಳಾಪುರ 105, ಧಾರವಾಡ 83, ಕೊಪ್ಪಳ 62, ವಿಜಯಪುರ 44, ಕಲಬುರಗಿ 28, ಗದಗ 28, ರಾಮನಗರ 24, ಹಾವೇರಿ 20, ರಾಯಚೂರು 16, ಬಾಗಲಕೋಟೆ 11, ಯಾದಗಿರಿ 5, ಬೀದರ್ ಜಿಲ್ಲೆ 3 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 161 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು 23, ಮೈಸೂರು ಜಿಲ್ಲೆ 17, ದಕ್ಷಿಣ ಕನ್ನಡ ಜಿಲ್ಲೆ 16, ದಾವಣಗೆರೆ ಜಿಲ್ಲೆ 11, ಬಳ್ಳಾರಿ ಜಿಲ್ಲೆ 10, ಬೆಳಗಾವಿ, ಧಾರವಾಡ, ಮಂಡ್ಯ ಜಿಲ್ಲೆ 8, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ 7, ಹಾವೇರಿ, ಕೋಲಾರ ಜಿಲ್ಲೆ 6, ಉತ್ತರ ಕನ್ನಡ ಜಿಲ್ಲೆ 5, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆ 4, ಹಾಸನ, ಕೊಪ್ಪಳ, ಉಡುಪಿ ಜಿಲ್ಲೆ ತಲಾ ಮೂವರು, ಚಿಕ್ಕಬಳ್ಳಾಪುರ, ರಾಯಚೂರು, ತುಮಕೂರು, ವಿಜಯಪುರ ಜಿಲ್ಲೆ 2, ಚಾಮರಾಜನಗರ, ಗದಗ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ತಲಾ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಕೊವಿಡ್ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್; ಕಾರಣ ಏನು? (Karnataka Covid update 5815 new cases in state and 161 deaths)
Published On - 8:26 pm, Sat, 19 June 21