Karnataka Covid Update: ಕರ್ನಾಟಕದಲ್ಲಿ ಇಂದು 5,783 ಜನರಿಗೆ ಕೊವಿಡ್ ದೃಢ, 168 ಜನರು ನಿಧನ; ಪಾಸಿಟಿವಿಟಿ ದರ ಶೇ 4.05
ಇಂದು ಒಂದೇ 15, 290 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ. ಇಂದಿನ ಅಂಕಿ ಅಂಶಗಳ ಪ್ರಕಾರ ರಾಜ್ಯದ ಕೊವಿಡ್ ಪಾಸಿಟಿವಿಟಿ ದರ ಶೇ.4.05ಕ್ಕೆ ಇಳಿದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದು 5,783 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 168 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 1,100 ಜನರಿಗೆ ಕೊವಿಡ್ ದೃಢಪಟ್ಟಿದ್ದು, 39 ಜನರು ಮೃತಪಟ್ಟಿದ್ದಾರೆ. ಇಂದಿನ ಸೋಂಕಿತರನ್ನೂ ಸೇರಿಸಿ ಈವರೆಗಿನ ಕೊವಿಡ್ ಸೋಂಕಿತರ ಸಂಖ್ಯೆ 27,96,121ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗಿನ ಸೋಂಕಿತರ ಪೈಕಿ 26, 25,447 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 1,37,050 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಒಂದೇ 15, 290 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ. ಇಂದಿನ ಅಂಕಿ ಅಂಶಗಳ ಪ್ರಕಾರ ರಾಜ್ಯದ ಕೊವಿಡ್ ಪಾಸಿಟಿವಿಟಿ ದರ ಶೇ.4.05ಕ್ಕೆ ಇಳಿದಿದೆ.
ಬಾಗಲಕೋಟೆ 7, ಬಳ್ಳಾರಿ 155, ಬೆಳಗಾವಿ 139 , ಬೆಂಗಳೂರು ಗ್ರಾಮಾಂತರ 207, ಬೆಂಗಳೂರು ನಗರ 1,100, ಬೀದರ್ 11, ಚಾಮರಾಜನಗರ 83, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 278, ಚಿತ್ರದುರ್ಗ 114, ದಕ್ಷಿಣ ಕನ್ನಡ 1,006, ದಾವಣಗೆರೆ 174, ಧಾರವಾಡ 65, ಗದಗ 23, ಹಾಸನ 390, ಹಾವೇರಿ 28, ಕಲಬುರಗಿ 18, ಕೊಡಗು 147, ಕೋಲಾರ 89, ಕೊಪ್ಪಳ 60, ಮಂಡ್ಯ 249, ಮೈಸೂರು 551, ಉಡುಪಿ 188, ರಾಮನಗರ 41, ಶಿವಮೊಗ್ಗ 199, ತುಮಕೂರು 153 , ರಾಯಚೂರು 15, ಉತ್ತರ ಕನ್ನಡ 132, ವಿಜಯಪುರ 44, ಯಾದಗಿರಿ ಜಿಲ್ಲೆಯಲ್ಲಿಂದು 13 ಜನರಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 168 ಜನರು ನಿಧನರಾಗಿದ್ದಾರೆ. ಬೆಂಗಳೂರು 39, ಮೈಸೂರು ಜಿಲ್ಲೆ 15, ದಕ್ಷಿಣ ಕನ್ನಡ, ಬಳ್ಳಾರಿ ಜಿಲ್ಲೆ 14, ದಾವಣಗೆರೆ ಜಿಲ್ಲೆ 10, ಧಾರವಾಡ, ಹಾಸನ ಜಿಲ್ಲೆ 9, ಕೋಲಾರ ಜಿಲ್ಲೆ 7, ಶಿವಮೊಗ್ಗ ಜಿಲ್ಲೆ 6, ಬೆಳಗಾವಿ, ಚಿಕ್ಕಬಳ್ಳಾಪುರ ಜಿಲ್ಲೆ 5, ಚಿಕ್ಕಮಗಳೂರು, ಹಾವೇರಿ ಜಿಲ್ಲೆ 4, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಮಂಡ್ಯ, ತುಮಕೂರು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಲಾ 3, ರಾಯಚೂರು ಜಿಲ್ಲೆ ಇಬ್ಬರು, ಚಿತ್ರದುರ್ಗ, ಗದಗ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ತಲಾ 1 ಕೊವಿಡ್ ನಿಧನ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 33,602 ಜನರು ನಿಧನರಾಗಿದ್ದಾರೆ.
ಇದನ್ನೂ ಓದಿ: Coronavirus 3rd Wave: ಭಾರತದಲ್ಲಿ ಅಕ್ಟೋಬರ್ಗೆ ಕೊವಿಡ್ 3ನೇ ಅಲೆ: ವೈದ್ಯಕೀಯ ಕ್ಷೇತ್ರದ ತಜ್ಞರ ವಿಶ್ಲೇಷಣೆ
Yoga Day 2021: ಕರ್ನಾಟಕದ 311 ಮಂಡಲಗಳ 622 ಕಡೆ ಕೊವಿಡ್ ನಿಯಮ ಅನುಸರಿಸಿ ಯೋಗ ದಿನ ಆಚರಣೆ
(Karnataka Covid Update today 5783 new cases in state and 1100 in Bengaluru)
Published On - 8:38 pm, Fri, 18 June 21