Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus 3rd Wave: ಭಾರತದಲ್ಲಿ ಅಕ್ಟೋಬರ್​ಗೆ ಕೊವಿಡ್ 3ನೇ ಅಲೆ: ವೈದ್ಯಕೀಯ ಕ್ಷೇತ್ರದ ತಜ್ಞರ ವಿಶ್ಲೇಷಣೆ

ಭಾರತದಲ್ಲಿ ಸೋಂಕಿನ ಮತ್ತೊಂದು ಅಲೆ ಯಾವಾಗ ಕಾಣಿಸಿಕೊಳ್ಳಬಹುದು ಎಂಬ ಬಗ್ಗೆ ರಾಯಿಟರ್ಸ್​ ಸುದ್ದಿಸಂಸ್ಥೆಯು ವೈದ್ಯಕೀಯ ಕ್ಷೇತ್ರದ ಸುಮಾರು 40 ತಜ್ಞರ ಅಭಿಪ್ರಾಯ ಸಂಗ್ರಹಿಸಿದ ನಂತರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಕೊವಿಡ್ ಸೋಂಕಿನ ಅಲೆ ಕಾಣಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.

Coronavirus 3rd Wave: ಭಾರತದಲ್ಲಿ ಅಕ್ಟೋಬರ್​ಗೆ ಕೊವಿಡ್ 3ನೇ ಅಲೆ: ವೈದ್ಯಕೀಯ ಕ್ಷೇತ್ರದ ತಜ್ಞರ ವಿಶ್ಲೇಷಣೆ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 18, 2021 | 8:03 PM

ಬೆಂಗಳೂರು: ಇದೀಗ ತಾನೆ ಕೊರೊನಾ ಸೋಂಕಿನ 2ನೇ ಅಲೆಯ ಹಿಡಿತದಿಂದ ಹೊರಬಂದಿರುವ ಭಾರತದಲ್ಲಿ ಸೋಂಕಿನ ಮತ್ತೊಂದು ಅಲೆ ಯಾವಾಗ ಕಾಣಿಸಿಕೊಳ್ಳಬಹುದು ಎಂಬ ಬಗ್ಗೆ ರಾಯಿಟರ್ಸ್​ ಸುದ್ದಿಸಂಸ್ಥೆಯು ವೈದ್ಯಕೀಯ ಕ್ಷೇತ್ರದ ಸುಮಾರು 40 ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಕೊವಿಡ್ ಸೋಂಕಿನ ಅಲೆ ಕಾಣಿಸಿಕೊಳ್ಳಬಹುದು ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸುದ್ದಿಸಂಸ್ಥೆ ವರದಿ ಮಾಡಿದೆ. ಕೊವಿಡ್ ಪಿಡುಗಿನ ಆತಂಕವು ಭಾರತದಲ್ಲಿ ಮತ್ತೊಂದು ವರ್ಷ ಮುಂದುವರಿಯುವ ಎಲ್ಲ ಲಕ್ಷಣಗಳೂ ಇವೆ ಎಂದು ವರದಿಯು ಎಚ್ಚರಿಸಿದೆ.

ವಿಶ್ವದ ವಿವಿಧೆಡೆಯಿರುವ ವೈದ್ಯಕೀಯ ಕ್ಷೇತ್ರದ 40 ತಜ್ಞರಿಂದ ಸುದ್ದಿಸಂಸ್ಥೆಯು ಮಾಹಿತಿ ಸಂಗ್ರಹಿಸಿತ್ತು. ವೈದ್ಯರು, ವಿಜ್ಞಾನಿಗಳು, ಸಾಂಕ್ರಾಮಿಕರೋಗ ತಜ್ಞರು ಮತ್ತು ಪ್ರಾಧ್ಯಾಪಕರ ಅಭಿಪ್ರಾಯವನ್ನು ಸಂಗ್ರಸಹಿಸಲಾಗಿದೆ. ಜೂನ್ 3ರಿಂದ 17ರ ನಡುವೆ ಈ ಸಂದರ್ಶನಗಳು ನಡೆದಿವೆ. ಭಾರತದಲ್ಲಿ 3ನೇ ಅಲೆ ಕಾಣಿಸಿಕೊಳ್ಳುತ್ತದೆ ಎಂಬುದು ಶೇ 85ರಷ್ಟು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು 24 ತಜ್ಞರಿಗೆ ಪ್ರಶ್ನೆ ಕೇಳಲಾಗಿತ್ತು. ಅವರ ಪೈಕಿ 21 ಜನರು ಅಕ್ಟೋಬರ್ ವೇಳೆಗೆ 3ನೇ ಅಲೆ ವ್ಯಾಪಿಸಲಿದೆ ಎಂದು ಹೇಳಿದರು. 12 ಮಂದಿ ಸೆಪ್ಟೆಂಬರ್​ ಒಳಗೆ 3ನೇ ಅಲೆ ಕಾಣಿಸಿಕೊಳ್ಳಬಹುದು ಎಂದರು. ಇತರರು ನವೆಂಬರ್​ ಮತ್ತು 2022ರ ಫೆಬ್ರುವರಿ ನಡುವಣ ಅವಧಿಯಲ್ಲಿ 3ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಒಂದು ವೇಳೆ 3ನೇ ಅಲೆ ಕಾಣಿಸಿಕೊಂಡರೆ ಅದನ್ನು 2ನೇ ಅಲೆಗಿಂತಲೂ ಚೆನ್ನಾಗಿ ನಿಭಾಯಿಸುವ ಅವಕಾಶವಿದೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದ 34 ಮಂದಿಯ ಪೈಕಿ 24 ಜನರು ಉತ್ತರಿಸಿದರು. ಭಾರತದಲ್ಲಿ ಏಪ್ರಿಲ್-ಮೇ ತಿಂಗಳ ನಡುವೆ ಕೊವಿಡ್-19ರ ಎರಡನೇ ಅಲೆಯು ಉತ್ತುಂಗದಲ್ಲಿತ್ತು. ಈ ಅವಧಿಯಲ್ಲಿ ದೇಶದಲ್ಲಿ ಪ್ರತಿದಿನ ವರದಿಯಾಗುತ್ತಿದ್ದ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೊಸ ದಾಖಲೆ ಬರೆದಿತ್ತು. ಲಸಿಕೆಗಳು, ಆಕ್ಸಿಜನ್, ಔಷಧಿಗಳು ಮತ್ತು ಆಸ್ಪತ್ರೆ ಬೆಡ್​ಗಳ ಕೊರತೆಯೂ ತೀವ್ರವಾಗಿ ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಕ್ರಮೇಣ ಸೋಂಕು ನಿಯಂತ್ರಣಕ್ಕೆ ಬಂತು. ವಿವಿಧ ರಾಜ್ಯ ಸರ್ಕಾರಗಳು ನಿರ್ಬಂಧ ಹೇರಿದ ನಂತರ ನಿತ್ಯ ವರದಿಯಾಗುವ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಕರಣಗಳೂ ಕಡಿಮೆಯಾದವು.

3ನೇ ಅಲೆಯು ಮೊದಲ ಎರಡು ಅಲೆಗಳಷ್ಟು ಬಹುಶಃ ಹಾನಿ ಮಾಡುವುದಿಲ್ಲ. ಲಸಿಕೆ ಅಭಿಯಾನಕ್ಕೆ ಈಗ ಹೊಸ ವೇಗ ದೊರೆತಿದೆ. ಜನರಲ್ಲಿಯೂ ಪ್ರತಿರೋಧ ಶಕ್ತಿ ಸಾಕಷ್ಟು ಬೆಳೆದಿರುತ್ತೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (All India Institute of Medical Sciences – AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದರು.

ಮೂರನೇ ಅಲೆಯು ಮಕ್ಕಳ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬ ಬಗ್ಗೆ ತಜ್ಞರಲ್ಲಿ ಇಂದಿಗೂ ಸಹಮತ ಮೂಡಿಲ್ಲ. ರಾಯಿಟರ್ಸ್​ಗೆ ಪ್ರತಿಕ್ರಿಯಿಸಿದ 40 ವೈದ್ಯರ ಪೈಕಿ 26 ಮಂದಿ ಮಕ್ಕಳಿಗೆ 3ನೇ ಅಲೆ ಅಪಾಯಕಾರಿ ಎಂದು ಹೇಳಿದ್ದಾರೆ. ಇತರ 14 ಮಂದಿ ಮೊದಲೆರೆಡು ಅಲೆಗಳಿಗಿಂತಲೂ ಭಿನ್ನ ರೀತಿಯಲ್ಲಿ ಇದು ಪರಿಣಾಮ ಬೀರಲಿದೆ ಎಂದಿದ್ದಾರೆ. ಭಾರತದ ಪಾಲಿಗೆ ಕೊರೊನಾ ಪಿಡುಗು ಇನ್ನೂ ಒಂದು ವರ್ಷ ಬಾಧಿಸಲಿದೆ ಎಂದು 30 ತಜ್ಞರು ಪ್ರತಿಕ್ರಿಯಿಸಿದ್ದಾರೆ.

(India Likely to Face Covid 19 3rd Wave in October Opines Experts)

ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಕೊವಿಡ್ 3ನೇ ಅಲೆಯ ಕಾರ್ಮೋಡ; 8 ಲಕ್ಷ ಮಂದಿಗೆ ಸೋಂಕು ತಗುಲುವ ಆತಂಕ

ಇದನ್ನೂ ಓದಿ: ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು

Published On - 7:55 pm, Fri, 18 June 21

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!