ಗುಜರಾತ್​ ಅಹಮದಾಬಾದ್​ನ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆ!

ಕೊರೊನಾ ವೈರಾಣು ಪತ್ತೆ ಕೇವಲ ಅಷ್ಟಕ್ಕೇ ನಿಂತಿಲ್ಲ. ಕನಕಾರಿಯಾ, ಚಾಂದೋಲ ಕೆರೆಯ ನೀರಿನ ಮಾದರಿಯಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿದೆ. ಈ ಬಗ್ಗೆ ಐಐಟಿ ಗಾಂಧಿ ನಗರ ಸೇರಿದಂತೆ ಎಂಟು ಸಂಸ್ಥೆಗಳಿಂದ ಸಂಶೋಧನೆ ನಡೆಸಲಾಗಿದೆ.

ಗುಜರಾತ್​ ಅಹಮದಾಬಾದ್​ನ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆ!
ಸಾಂದರ್ಭಿಕ ಚಿತ್ರ
TV9kannada Web Team

| Edited By: ganapathi bhat

Jun 18, 2021 | 8:41 PM

ಗಾಂಧಿನಗರ: ಕೊರೊನಾ ಮೊದಲನೇ ಅಲೆ ಬಳಿಕ, ಎರಡನೇ ಅಲೆಯೇ ಭಾರತಕ್ಕೆ ಬಂದೊದಗಿದ್ದೇ ಬಹಳ ಚಿಂತಾಜನಕ ಸ್ಥಿತಿ ಉಂಟುಮಾಡಿತ್ತು. ಅದರಿಂದ ದೇಶದಲ್ಲಿ ತುಂಬಾ ಕಷ್ಟನಷ್ಟ ಉಂಟಾಗಿತ್ತು. ಆ ಬಳಿಕ, ಪ್ರಾಣಿಗಳಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದೀಗ ಮತ್ತೊಂದು ಅಚ್ಚರಿಯ ಮಾಹಿತಿ ತಿಳಿದುಬಂದಿದೆ. ಗುಜರಾತ್​ ಅಹಮದಾಬಾದ್ನ‌ ಸಬರಮತಿ ನದಿ ನೀರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ನೀರಿನಲ್ಲೂ ಕೊರೊನಾ ವೈರಾಣು ಕಂಡುಬಂದಿದೆ. ನದಿಯಲ್ಲಿ ಪಡೆದ ಎಲ್ಲಾ ನೀರಿನ ಸ್ಯಾಂಪಲ್​ಗಳಲ್ಲೂ ಕೊರೊನಾ ವೈರಸ್ ಪತ್ತೆಯಾಗಿದೆ.

ಕೊರೊನಾ ವೈರಾಣು ಪತ್ತೆ ಕೇವಲ ಅಷ್ಟಕ್ಕೇ ನಿಂತಿಲ್ಲ. ಕನಕಾರಿಯಾ, ಚಾಂದೋಲ ಕೆರೆಯ ನೀರಿನ ಮಾದರಿಯಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿದೆ. ಈ ಬಗ್ಗೆ ಐಐಟಿ ಗಾಂಧಿ ನಗರ ಸೇರಿದಂತೆ ಎಂಟು ಸಂಸ್ಥೆಗಳಿಂದ ಸಂಶೋಧನೆ ನಡೆಸಲಾಗಿದೆ. ದೆಹಲಿಯ ಜೆಎನ್​ಯು ಪರಿಸರ ವಿಜ್ಞಾನದ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಅಸ್ಸಾಂನ ಭರೂ ನದಿಯ ನೀರಿನ ಸ್ಯಾಂಪಲ್​ನಲ್ಲಿಯೂ ಕೊರೊನಾ ವೈರಸ್ ಕಂಡುಬಂದಿದೆ.

ಗಾಂಧಿನಗರದ ಐಐಟಿ ಭೂ ವಿಜ್ಞಾನ ವಿಭಾಗದ ಮನೀಶ್ ಕುಮಾರ್​ರಿಂದ ಸಂಶೋಧನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ‌ ತಂಡ ಪರೀಕ್ಷಿಸಿದ ಎಲ್ಲ ನೀರಿನ ಸ್ಯಾಂಪಲ್​ಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಸೆಪ್ಟೆಂಬರ್ 3 ರಿಂದ ಡಿಸೆಂಬರ್ 29 ರವರೆಗೆ ಸಬರಮತಿ ನದಿ ನೀರಿನ 694 ನೀರಿನ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ. ಸ್ವಚ್ಚ ನೀರಿನಲ್ಲೂ ಕೊರೊನಾ ವೈರಸ್ ಉಳಿಯುತ್ತೆ ಎಂದು ಮನೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಶಾಲೆ ಪುನಾರಂಭ ಯಾವಾಗ? ಈ ಬಗ್ಗೆ ಕೇಂದ್ರದ ಅಧಿಕಾರಿಗಳು ಏನು ಹೇಳುತ್ತಾರೆ? ಇಲ್ಲಿದೆ ವಿವರ

ಕೊರೊನಾದಿಂದ ಮಕ್ಕಳ ಮೇಲೆ ಹೆಚ್ಚಿನ ಅಪಾಯ ಇರುವುದಿಲ್ಲ; ಆದರೆ ಜನರು ಎಚ್ಚರಿಕೆಯಿಂದ ಇರಲೇಬೇಕು: ವಿ ಕೆ ಪೌಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada