ಶಾಲೆ ಪುನಾರಂಭ ಯಾವಾಗ? ಈ ಬಗ್ಗೆ ಕೇಂದ್ರದ ಅಧಿಕಾರಿಗಳು ಏನು ಹೇಳುತ್ತಾರೆ? ಇಲ್ಲಿದೆ ವಿವರ
ಭಾರತದಲ್ಲಿ ಲಸಿಕೆ ಬಗ್ಗೆ ಅಧ್ಯಯನಗಳು ನಡೆದು ಫಲಿತಾಂಶ ಲಭ್ಯವಾಗಿದೆ. ಲಸಿಕೆ ಪಡೆದ ಬಳಿಕ ಆರೋಗ್ಯ ಕಾರ್ಯಕರ್ತರಲ್ಲಿ ಆಕ್ಸಿಜನ್ ಅವಶ್ಯಕತೆ ಶೇಕಡಾ 8 ರಷ್ಟು ಮಾತ್ರ ಕಂಡುಬಂದಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಅಪಾಯ ಉಂಟಾಗುವ ಪ್ರಮಾಣ ಕಡಿಮೆ ಎಂದು ಅವರು ಮಾತನಾಡಿದ್ದಾರೆ.
ದೆಹಲಿ: ಕೊರೊನಾ ಎರಡನೇ ಅಲೆಯ ಆಘಾತದಿಂದಾಗಿ ಬೋರ್ಡ್ ಪರೀಕ್ಷೆಗಳನ್ನು ಮಾಡದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಾಗೂ ಬಹುತೇಕ ರಾಜ್ಯ ಸರ್ಕಾರಗಳು ಕೂಡ ಕೈಗೊಂಡಿದ್ದವು. ಇದೀಗ ಶಾಲೆ ಪುನಾರಂಭದ ಬಗ್ಗೆಯೂ ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ಅಥವಾ ಬಹುತೇಕ ಎಲ್ಲಾ ಶಿಕ್ಷಕರು ಲಸಿಕೆ ಪಡೆದ ನಂತರ ಹಾಗೂ ಕೊರೊನಾದಿಂದ ಮಕ್ಕಳ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ವಿಚಾರ ತಿಳಿದ ಬಳಿಕವೇ ಶಾಲೆ ಪುನಾರಂಭಿಸುವ ಬಗ್ಗೆ ಯೋಚಿಸಲಾಗುವುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಇಂದು (ಜೂನ್ 18) ತಿಳಿಸಿದ್ದಾರೆ.
ಆ ಸಮಯ ಶೀಘ್ರವೇ ಬರಲಿದೆ. ಆದರೆ, ನಾವು ಈ ವೇಳೆ ವಿದೇಶದಲ್ಲಿ ಹೇಗೆ ಶಾಲಾ ಮರುಆರಂಭ ಮಾಡಲಾಗಿದೆ. ಅವರು ಮತ್ತೆ ಶಾಲೆ ಮುಚ್ಚುವಂತೆ ಆಗಿರುವುದರ ಬಗ್ಗೆ ಗಮನಹರಿಸಬೇಕು. ನಮ್ಮ ಶಿಕ್ಷಕರು ಮತ್ತು ಮಕ್ಕಳು ಸಂಕಷ್ಟ ಎದುರಿಸಬಾರದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೊರೊನಾದಿಮದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಖಚಿತ ಆಗುವವರೆಗೂ ನಾವು ಇಂತಹ ನಿರ್ಧಾರ ಕೈಗೊಳ್ಳಲು ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಡಾ. ಪೌಲ್ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಏಮ್ಸ್, 18 ವರ್ಷದ ಒಳಗಿನವರು ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ವೃದ್ಧಿಸಿಕೊಂಡಿದ್ದಾರೆ. ಹಾಗೂ ಮೂರನೇ ಅಲೆಯಿಂದ ಅವರು ಅಂತಹ ಸಮಸ್ಯೆ ಎದುರಿಸುವ ಸಾಧ್ಯತೆ ಕಡಿಮೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಪೌಲ್ ಹೀಗೆ ಹೇಳಿದ್ದಾರೆ.
ಹಾಗೆಂದ ಮಾತ್ರಕ್ಕೆ, ಶಾಲೆಗಳು ತೆರೆಯುವಂತಿಲ್ಲ. ಮಕ್ಕಳು ಸಾಮಾಜಿಕ ಅಂತರ ಪಾಲಿಸುವುದು ಕೂಡ ಸುಲಭ ಸಾಧ್ಯವಿಲ್ಲ. ನಮಗೆ ಇನ್ನೂ ಕೊರೊನಾದ ಬಗ್ಗೆ ಹಲವಾರು ವಿಚಾರಗಳು ತಿಳಿದಿಲ್ಲ. ಶಾಲೆಯನ್ನು ಪುನಾರಂಭಿಸುವುದು ಬೇರೆಯದೇ ವಿಷಯವಾಗಿದೆ. ಇದರಲ್ಲಿ ಮಕ್ಕಳು, ಶಿಕ್ಷಕರು ಎಲ್ಲರೂ ಭಾಗಿಯಾಗುತ್ತಾರೆ. ಇಂದು ಮಕ್ಕಳಲ್ಲಿ ಕಡಿಮೆ ಪರಿಣಾಮ ಬೀರುತ್ತಿರುವ ಕೊರೊನಾ, ನಾಳೆಯ ದಿನ ಗಾಢ ಪ್ರಭಾವ ಬೀರುವುದಿಲ್ಲ ಎನ್ನಲು ಯಾವುದೇ ಪುರಾವೆ ಇಲ್ಲ ಎಂದು ಪೌಲ್ ಹೇಳಿದ್ದಾರೆ.
ಭಾರತದಲ್ಲಿ ಲಸಿಕೆ ಬಗ್ಗೆ ಅಧ್ಯಯನಗಳು ನಡೆದು ಫಲಿತಾಂಶ ಲಭ್ಯವಾಗಿದೆ. ಲಸಿಕೆ ಪಡೆದ ಬಳಿಕ ಆರೋಗ್ಯ ಕಾರ್ಯಕರ್ತರಲ್ಲಿ ಆಕ್ಸಿಜನ್ ಅವಶ್ಯಕತೆ ಶೇಕಡಾ 8 ರಷ್ಟು ಮಾತ್ರ ಕಂಡುಬಂದಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಅಪಾಯ ಉಂಟಾಗುವ ಪ್ರಮಾಣ ಕಡಿಮೆ ಎಂದು ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಮಕ್ಕಳ ಮೇಲೆ ಹೆಚ್ಚಿನ ಅಪಾಯ ಇರುವುದಿಲ್ಲ; ಆದರೆ ಜನರು ಎಚ್ಚರಿಕೆಯಿಂದ ಇರಲೇಬೇಕು: ವಿ ಕೆ ಪೌಲ್
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಡೋಸ್ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಪ್ರಯತ್ನ