ಕೊರೊನಾದಿಂದ ಮಕ್ಕಳ ಮೇಲೆ ಹೆಚ್ಚಿನ ಅಪಾಯ ಇರುವುದಿಲ್ಲ; ಆದರೆ ಜನರು ಎಚ್ಚರಿಕೆಯಿಂದ ಇರಲೇಬೇಕು: ವಿ ಕೆ ಪೌಲ್

ಭಾರತದಲ್ಲಿ ಲಸಿಕೆ ಬಗ್ಗೆ ಅಧ್ಯಯನಗಳು ನಡೆದು ಫಲಿತಾಂಶ ಲಭ್ಯವಾಗಿದೆ. ಲಸಿಕೆ ಪಡೆದ ಬಳಿಕ ಆರೋಗ್ಯ ಕಾರ್ಯಕರ್ತರಲ್ಲಿ ಆಕ್ಸಿಜನ್ ಅವಶ್ಯಕತೆ ಶೇಕಡಾ 8 ರಷ್ಟು ಮಾತ್ರ ಕಂಡುಬಂದಿದೆ.

ಕೊರೊನಾದಿಂದ ಮಕ್ಕಳ ಮೇಲೆ ಹೆಚ್ಚಿನ ಅಪಾಯ ಇರುವುದಿಲ್ಲ; ಆದರೆ ಜನರು ಎಚ್ಚರಿಕೆಯಿಂದ ಇರಲೇಬೇಕು: ವಿ ಕೆ ಪೌಲ್
ಡಾ. ವಿ.ಕೆ.ಪೌಲ್​
Follow us
TV9 Web
| Updated By: ganapathi bhat

Updated on: Jun 18, 2021 | 5:48 PM

ದೆಹಲಿ: ಕೊರೊನಾ ವ್ಯಾಕ್ಸಿನ್​​ ಪಡೆದ ಬಳಿಕ ರಿಸ್ಕ್ ಕಡಿಮೆ. ಮಕ್ಕಳ ಮೇಲೆ ಹೆಚ್ಚಿನ ಕೊರೊನಾ ಸೋಂಕು ಇರುವುದಿಲ್ಲ. ಮಕ್ಕಳಿಗೆ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ತಯಾರಿಯಲ್ಲಿ ಯಾವುದೇ ಕೊರತೆಯಾಗಲ್ಲ. ಖಾಸಗಿ ವಲಯದ ಸಹಭಾಗಿತ್ವದಲ್ಲಿ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆ ಎಂದು ಕೊರೊನಾ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿಕೆ ನೀಡಿದ್ದಾರೆ. ಆದರೆ, ಜನರು ಈಗಲೂ ಎಚ್ಚರಿಕೆಯಿಂದ ಇರಬೇಕು. ಪಾರ್ಟಿ, ಸಂಭ್ರಮಾಚರಣೆಗಳನ್ನ ಮುಂದೂಡಬೇಕು. ಈಗಲೂ ಕೊರೊನಾದ ಕೆಲ ವಿಷಯಗಳು ನಮಗೆ ಗೊತ್ತಿಲ್ಲ. ಅವುಗಳ ಬಗ್ಗೆ ನಾವು ಇನ್ನೂ ತಿಳಿದುಕೊಳ್ಳುತ್ತಿದ್ದೇವೆ ಎಂದು ವಿ.ಕೆ. ಪೌಲ್ ಹೇಳಿದ್ದಾರೆ.

ಶಾಲೆ ಆರಂಭಿಸಲು ಕೆಲ ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಶಾಲೆ ಆರಂಭಿಸುವ ಸಮಯ ಬೇಗ ಬರಲಿ ಎಂದು ಆಶಯ ಇದೆ. ಈಗಿನ ಸ್ಥಿತಿಯಲ್ಲಿ ಮಕ್ಕಳು, ಶಿಕ್ಷಕರನ್ನ ಒತ್ತಡಕ್ಕೆ ತಳ್ಳಬಾರದು. ಶಾಲೆ ಆರಂಭ ಈಗ ಸೂಕ್ತವಲ್ಲ ಎಂದು ಪರೋಕ್ಷವಾಗಿ ಕೊರೊನಾ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಲಸಿಕೆ ಬಗ್ಗೆ ಅಧ್ಯಯನಗಳು ನಡೆದು ಫಲಿತಾಂಶ ಲಭ್ಯವಾಗಿದೆ. ಲಸಿಕೆ ಪಡೆದ ಬಳಿಕ ಆರೋಗ್ಯ ಕಾರ್ಯಕರ್ತರಲ್ಲಿ ಆಕ್ಸಿಜನ್ ಅವಶ್ಯಕತೆ ಶೇಕಡಾ 8 ರಷ್ಟು ಮಾತ್ರ ಕಂಡುಬಂದಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಅಪಾಯ ಉಂಟಾಗುವ ಪ್ರಮಾಣ ಕಡಿಮೆ ಎಂದು ಅವರು ಮಾತನಾಡಿದ್ದಾರೆ.

ಶೇಕಡಾ 78.6ರಷ್ಟು ಕೊರೊನಾ ಸಕ್ರಿಯ ಕೇಸ್​ಗಳಲ್ಲಿ ಕುಸಿತ ಉಂಟಾಗಿದೆ ಕಳೆದ ವಾರದಲ್ಲಿ ಶೇಕಡಾ 30ರಷ್ಟು ಕೊರೊನಾ ಪ್ರಕರಣಗಳು ಕುಸಿತ ಕಂಡಿದೆ. ದೇಶದ 384 ಜಿಲ್ಲೆಯಲ್ಲಿ ಕೊರೊನಾ ಕೇಸ್ ಪತ್ತೆಯಲ್ಲಿ ಕುಸಿತವಾಗಿದೆ. ದೇಶದ 531 ಜಿಲ್ಲೆಯಲ್ಲಿ 100ಕ್ಕಿಂತ ಹೆಚ್ಚು ಕೇಸ್​ಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಇಂದು (ಜೂನ್ 18) ಹೇಳಿದರು. ಮೇ 10ರಿಂದ 29.4 ಲಕ್ಷ ಕೊರೊನಾ ಸಕ್ರಿಯ ಕೇಸ್ ಕುಸಿತ ಕಂಡಿದೆ. ಮೇ 10ರಿಂದ ಈವರೆಗೂ ಸಕ್ರಿಯ ಪ್ರಕರಣಗಳಲ್ಲಿ ಕುಸಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶೇಕಡಾ 78.6ರಷ್ಟು ಕೊರೊನಾ ಸಕ್ರಿಯ ಕೇಸ್​ಗಳಲ್ಲಿ ಕುಸಿತ ಉಂಟಾಗಿದೆ. ಕೊರೊನಾದಿಂದ ಗುಣಮುಖ ಪ್ರಮಾಣ ಶೇಕಡಾ 96ಕ್ಕೆ ಏರಿಕೆಯಾಗಿದೆ. ಜೂನ್ 11-17ರವರೆಗೆ ಪಾಸಿಟಿವಿಟಿ ದರ ಶೇ‌ಕಡಾ 4ರಷ್ಟಿದೆ. ದೇಶದ 513 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಕೊರೊನಾ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ವೈರಸ್ ಎಲ್ಲೂ‌ ಹೋಗಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಲವ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.

ಬಣ್ಣದ ಆಧಾರದ ಮೇಲೆ ಫಂಗಸ್ ಬಗ್ಗೆ ಚರ್ಚೆ ಬೇಡ. ಕೆಲವು ರಾಜ್ಯಗಳಲ್ಲಿ ಬ್ಯಾಕ್​​ಲಾಗ್ ಸಾವು ವರದಿ ಆಗಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಕೇಸ್ ಕಡಿಮೆಯಾದಾಗ ಆರೋಗ್ಯ ವ್ಯವಸ್ಥೆಯ ಮೇಲೆ ಹೊರೆ ಕಡಿಮೆ ಆಗುತ್ತೆ. ಕೊರೊನಾ ಕೇಸ್, ಸಾವಿನಲ್ಲಿ ‌ನಿರಂತರ ಇಳಿಕೆ ಆಗುತ್ತಿದೆ ಎಂದು ದೆಹಲಿಯಲ್ಲಿ ಲವ್ ಅಗರ್ವಾಲ್ ಮಾತನಾಡಿದ್ದಾರೆ.

ಇದನ್ನೂ ಓದಿ: ಜಾನ್ಸನ್​ ಅಂಡ್​ ಜಾನ್ಸನ್​ ಸಂಸ್ಥೆಯ ಸಿಂಗಲ್​ ಡೋಸ್​ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಪ್ರಯತ್ನ

ಕೊರೊನಾ ಲಸಿಕೆ ಖರೀದಿಗೆ ಹೆಚ್ಚಿನ ಹಣ ನೀಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ