ತಬ್ಲಿಘಿ ವಿಚಾರದಲ್ಲಿ ದ್ವೇಷಪೂರಿತ ವರದಿ ಪ್ರಸಾರ: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ವಿರುದ್ಧ ಕಠಿಣ ಕ್ರಮ
ನ್ಯೂಸ್ 18 ಕನ್ನಡದಲ್ಲಿ ಏಪ್ರಿಲ್ 1, 2020ರಂದು ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಹಾಗೂ ಸುವರ್ಣ ನ್ಯೂಸ್ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4, 2020ರ ವರೆಗೆ ಪ್ರಸಾರವಾಗಿದ್ದ ಕೆಲವು ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ದೆಹಲಿ: ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ವಿಚಾರದಲ್ಲಿ ದ್ವೇಷಪೂರಿತ ವರದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಕನ್ನಡದ ಎರಡು ಖಾಸಗಿ ವಾರ್ತಾ ವಾಹಿನಿಗಳು ಹಾಗೂ ಇಂಗ್ಲಿಷ್ನ ಒಂದು ನ್ಯೂಸ್ ಚಾನಲ್ ವಿರುದ್ಧ ನೇಷನಲ್ ಬ್ರಾಡ್ಕ್ಯಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಕ್ರಮ ಕೈಗೊಂಡಿದೆ. ದ್ವೇಷ ಹರಡುವಿಕೆ ವಿರುದ್ಧ 2020ರಲ್ಲಿ ನಡೆದ ಚಳುವಳಿ ಹಾಗೂ ದೂರಿನ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊರೊನಾ ಮೊದಲನೇ ಅಲೆ ಕಂಡುಬಂದ ಸಂದರ್ಭದಲ್ಲಿ ಈ ಖಾಸಗಿ ವಾರ್ತಾ ವಾಹಿನಿಗಳು ತಬ್ಲಿಘಿ ಜಮಾತ್ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವರದಿ ಮಾಡಿದ್ದವು. ದ್ವೇಷ ಹರಡುವಿಕೆ ನೆಲೆಯಲ್ಲಿ ಸುದ್ದಿ ನೀಡಿದ್ದವು. ಆದ್ದರಿಂದ ಎನ್ಬಿಎಸ್ಎ ಈ ವಾಹಿನಿಗಳ ವಿರುದ್ಧ ಕ್ರಮ ಕೈಗೊಂಡಿದೆ.
ಕ್ಯಾಂಪೇನ್ ಅಗೈನ್ಸ್ಟ್ ಹೇಟ್ ಸ್ಪೀಚ್ (CAHS) ಫೆಬ್ರವರಿ 2020ರಲ್ಲಿ ನಿಯೋಜನೆಗೊಂಡಿದ್ದು, ಮಾಧ್ಯಮದಲ್ಲಿ ವರದಿಯಾಗುವ ಧ್ವೇಷಪೂರಿತ ಸುದ್ದಿಗಳನ್ನು ಗಮನಿಸಿ, ಕ್ರಮ ಕೈಗೊಳ್ಳುತ್ತದೆ. ಇದೀಗ ಸಿಎಎಚ್ಎಸ್ ದೂರಿನ ಅನ್ವಯ ಒಟ್ಟು ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕನ್ನಡದ ನ್ಯೂಸ್ ಚಾನಲ್ಗಳಾದ ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ, ಇಂಗ್ಲಿಷ್ನ ಟೈಮ್ಸ್ ನೌ ವಾಹಿನಿಯ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ನ್ಯೂಸ್ 18 ಕನ್ನಡ ಚಾನಲ್ ಮೇಲೆ 1 ಲಕ್ಷ ಹಾಗೂ ಸುವರ್ಣ ನ್ಯೂಸ್ ಮೇಲೆ 50,000 ದಂಡ ವಿಧಿಸಲಾಗಿದೆ. ಹಾಗೂ ಜೂನ್ 23ರಂದು 9 ಗಂಟೆಯ ನ್ಯೂಸ್ಗೂ ಮುನ್ನ ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು ಎಂದು ಕೇಳಲಾಗಿದೆ.
[Reporting on Tablighi Jamaat] NBSA imposes 1 lakh fine on News18 Kannada for inciting religious hatred, Rs. 50,000 on Suvarna News; censures Times Now#tablighijamaat #news18kannada #suvarnanews@TimesNow @News18Kannada @AsianetNewsSN https://t.co/25eHjJbgs2 pic.twitter.com/NRglaRgNz7
— Bar & Bench (@barandbench) June 17, 2021
ಎರಡೂ ಚಾನಲ್ಗಳು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವರದಿ ಅಥವಾ ವಿಡಿಯೋಗಳು ತಮ್ಮ ವೆಬ್ಸೈಟ್ ಅಥವಾ ಯೂಟ್ಯೂಬ್ನಲ್ಲಿ ಇದ್ದರೆ, ಅದನ್ನು ಕೂಡಲೇ ಡಿಲೀಟ್ ಮಾಡಬೇಕು ಹಾಗೂ 7 ದಿನಗಳ ಒಳಗಾಗಿ ಈ ಬಗ್ಗೆ ಲಿಖಿತ ದಾಖಲೆ ಸಲ್ಲಿಸಬೇಕು ಎಂದು ಕೇಳಲಾಗಿದೆ.
ನ್ಯೂಸ್ 18 ಕನ್ನಡದಲ್ಲಿ ಏಪ್ರಿಲ್ 1, 2020ರಂದು ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಹಾಗೂ ಸುವರ್ಣ ನ್ಯೂಸ್ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4, 2020ರ ವರೆಗೆ ಪ್ರಸಾರವಾಗಿದ್ದ ಕೆಲವು ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ತವರಿಗೆ ಮರಳಲು ನೆರವಾಗಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ
Published On - 5:59 pm, Fri, 18 June 21